ಹೈಟ್ ಇಲ್ಲ ಅಂತ 15 ಬಾರಿ ರಿಜೆಕ್ಟ್ ಆಗಿದ್ದ ಈ ನಟಿ ಯಾರು ಗೊತ್ತೇ? ಇವರಿಗೆ ಕಿರುತೆರೆ ಸ್ಟಾರ್ ನಟಿ
ಹಲವಾರು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿ ಇಂದು ಖಳನಾಯಕಿಯಾಗಿ ಭಡ್ತಿ ಪಡೆದ ನಟಿಯ ಹೆಸರು ಅಮೃತಾ ರಾಮಮೂರ್ತಿ. ಸಹಜ ನಟನೆಯ ಮೂಲಕ ಜನರನ್ನು ರಂಜಿಸುತ್ತಾ ಬಂದಿರುವ ನಟಿ ಅಮೃತಾ ರಾಮಮೂರ್ತಿ, ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ತಮ್ಮ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.
ಹೆಚ್ಚು ಕಮ್ಮಿ ದಶಕದ ಹಿಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡಿರುವ ನಟಿ ಅಮೃತಾ ರಾಮಮೂರ್ತಿಯವರು ತಮ್ಮ ಮೊದಲ ಧಾರಾವಾಹಿಯಲ್ಲಿ ನಟಿಯಾಗಿ ನಟಿಸಿದ ನಂತರವೂ 15 ಧಾರವಾಹಿಗಳಲ್ಲಿ ರಿಜೆಕ್ಟ್ ಆಗಿದ್ದರಂತೆ.

"ಹೆಚ್ಚು ಕಮ್ಮಿ 15 ಧಾರಾವಾಹಿಗಳಲ್ಲಿ ನಾನು ರಿಜೆಕ್ಷನ್ ಅನುಭವಿಸಿದ್ದೇನೆ. ಅದಕ್ಕೆ ಕಾರಣ ಒಂದೇ ಒಂದು ನನ್ನ ಹೈಟ್. ಎಲ್ಲವೂ ಸೆಟ್ ಆದರೂ ನನ್ನ ಹೈಟ್ ಕಡಿಮೆ ಎಂದು ಹದಿನೈದು ಧಾರಾವಾಹಿಗಳು ನನ್ನನ್ನು ರಿಜೆಕ್ಟ್ ಮಾಡಿದೆ. ಒಂದು ವಯಸ್ಸಿನ ನಂತರ ನಾವು ಬೆಳೆಯಲು ಸಾಧ್ಯವಿಲ್ಲ. ನಾನು ಎಷ್ಟೇ ಹೇಳಿದರೂ ಇದನ್ನು ಯಾರು ಅರ್ಥಮಾಡಿಕೊಳ್ಳಲಿಲ್ಲ. ಹೀಲ್ಸ್ ಹಾಕಬಲ್ಲೆ, ಅದಕ್ಕೂ ಮೀರಿ ನಾನೇನು ಮಾಡಲಾರೆ ಎಂದು ಡೈರೆಕ್ಟರ್‌ಗಳಿಗೂ ಹೇಳಿ ಬಂದೆ" ಎಂದು ತಮಗಾದ ನೋವನ್ನು ಸುವರ್ಣ ಸೂಪರ್ ಸ್ಟಾರ್‌ನಲ್ಲಿ ನಟಿ ಅಮೃತಾ ರಾಮಮೂರ್ತಿ ಹಂಚಿಕೊಂಡಿದ್ದರು .
ಇದರ ಜೊತೆಗೆ "ಒಂದು ಹಂತದಲ್ಲಂತೂ ಧಾರಾವಾಹಿಗಳಿಂದ ತೆಗೆದುಕೊಳ್ಳೋಣ ಎಂದು ನಿರ್ಧರಿಸಿದ್ದೆ. ಅಸಲಿಗೆ ನಾನು ನಟಿಸಬೇಕೆಂದು ಈ ಕ್ಷೇತ್ರಕ್ಕೆ ಬಂದವಳಲ್ಲ. ಜರ್ನಲಿಸ್ಟ್ ಆಗಿ ಅಥವಾ ತೆರೆ ಹಿಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಬಂದವಳು. ಆದರೆ, ದೇವರ ಅನುಗ್ರಹದಿಂದ ಈ ರೀತಿ ನಟನೆಯಲ್ಲಿ ಇಲ್ಲಿಯವರೆಗೂ ಬಂದಿದ್ದೇನೆ. ಆ ಬಗ್ಗೆ ನನಗೆ ಖುಷಿ ಇದೆ" ಎಂದು ನಟಿ ಅಮೃತಾ ರಾಮಮೂರ್ತಿ ಹೇಳಿಕೊಂಡಿದ್ದರು.

"ಕಾಲೇಜಿನ ದಿನಗಳಲ್ಲಿ ನಾನೇ ಕಾಲೇಜು ಕ್ವೀನಾಗಿದ್ದೆ. ಹಲವಾರು ಹುಡುಗರು ನನಗೆ ಪ್ರಪೋಸ್ ಮಾಡಿದ್ದರು. ಎಲ್ಲ ಪ್ರಪೋಸಲ್‌ಗಳನ್ನು ನಾನು ರಿಜೆಕ್ಟ್ ಮಾಡಿದ್ದೆ. ಆದರೆ, ಈಗ ರಿಜೆಕ್ಷನ್ ನಿಂದ ಆಗುವ ಬೇಸರ ನನಗೆ ಅರ್ಥವಾಗಿದೆ" ಎಂದು ಸುವರ್ಣ ಸೂಪರ್ ಸ್ಟಾರ್‌ನಲ್ಲಿ ಭಾಗವಹಿಸಿ ತಮಗಾದ ನೋವನ್ನು ನಟಿ ಅಮೃತಾ ರಾಮಮೂರ್ತಿ ಹಂಚಿಕೊಂಡಿದ್ದರು.


Click it and Unblock the Notifications











