ಮದುವೆ ಬಳಿಕ ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಅಮೂಲ್ಯ-ಜಗದೀಶ್ ಜೋಡಿ
ನಟಿ ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹ ಕೆಲ ತಿಂಗಳುಗಳ ಹಿಂದೆಯಷ್ಟೇ ನಡೆದಿತ್ತು. ಈಗ ಮದುವೆಯ ಬಳಿಕ ಈ ಸೂಪರ್ ಜೋಡಿ ಕಿರುತೆರೆಯ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಅಮೂಲ್ಯ - ಜಗದೀಶ್ ಬಂದಿದ್ದಾರೆ. ಈಗಾಗಲೇ ಈ ಸಂಚಿಕೆಯ ಶೂಟಿಂಗ್ ನಡೆಯುತ್ತಿದ್ದು, ನಿರೂಪಕ ಅಕುಲ್ ಬಾಲಾಜಿ ಜೊತೆ ಈ ಜೋಡಿ ತೆಗೆದುಕೊಂಡಿರುವ ಫೋಟೋ ಈಗ ಹೊರ ಬಂದಿದೆ.

ಮದುವೆಯ ಬಳಿಕ ಅಮೂಲ್ಯ - ಜಗದೀಶ್ ದಂಪತಿಗಳು ಮಾಧ್ಯಮಗಳಿಂದ ಸ್ವಲ್ಪ ದೂರ ಇದ್ದರು. ಈಗ ಮತ್ತೆ ಈ ಕಾರ್ಯಕ್ರಮದ ಮೂಲಕ ನವ ಜೋಡಿಯನ್ನು ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
More from Filmibeat
English summary
Sandalwood Actress Amulya and her husband Jagdish has taken part in Colors Super channel's popular show Super Talk Time.


Click it and Unblock the Notifications











