ಕಮಲಿ ಲವ್ ಸ್ಟೋರಿಗೆ ಸಿಕ್ತು ಇನ್ನೊಂದು ಸಾಕ್ಷಿ ? ಶೀಘ್ರದಲ್ಲಿಯೇ ಮದ್ವೆಯಾಗ್ತಾರಾ ಶ್ರೀಗೌರಿ ಅಮೂಲ್ಯ ?

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಕಮಲಿಯಾಗಿ ಬಂದು ಅಭಿಮಾನಿಗಳನ್ನು ಗಳಿಸಿಕೊಂಡ ನಟಿ ಅಮೂಲ್ಯ ಓಂಕಾರ್ ಅವರು ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶ್ರೀಗೌರಿ ಆಗಿ ಜನರ ಮನ ಗೆದ್ದಿದ್ದರು.ನೋಡಲು ಪುಟ್ಟ ಹುಡುಗಿಯಂತೆ ಕಾಣುವ ಅಮೂಲ್ಯ ಓಂಕಾರ್ ಅವರ ಮಾತುಗಳು ಕೂಡ ಮುದ್ದು ಮಗುವಿನ ಮಾತುಗಳಂತೆ ಇರುತ್ತವೆ. ಅಮೂಲ್ಯ ಅವರ ನಟನೆಯನ್ನು ಜನ ಮೆಚ್ಚಿದ್ದಾರೆ. ಕಮಲಿ ಧಾರಾವಾಹಿಯಲ್ಲಿ ಅಮೂಲ್ಯ ಅವರಿಗೆ ಜೋಡಿಯಾಗಿದ್ದ ನಿರಂಜನ್ ಅವರೊಂದಿಗೆ ಮತ್ತೊಂದು ಧಾರಾವಾಹಿ ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಲೇ ಇದ್ದಾರೆ.

ಜನರ ಆಸೆ ನೆರವೇರಿದೆ

ಅಭಿಮಾನಿಗಳ ಹಾರೈಕೆಯೋ, ಜನರ ಆಸೆಯೋ ಎಂಬಂತೆ ಈಗ ಅಮೂಲ್ಯ ಮತ್ತು ನಿರಂಜನ್ ಇಬ್ಬರೂ ಪ್ರೇಮಲೋಕದಲ್ಲಿದ್ದಾರೆ ಎಂಬ ವಿಚಾರ ಕಳೆದ ತಿಂಗಳಷ್ಟೇ ತಿಳಿದು ಬಂದಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅಮೂಲ್ಯ ಅವರು ಅಕಸ್ಮಾತ್ ಆಗಿ ನಿರಂಜನ್ ಮತ್ತು ಅವರು ಪ್ರೀತಿಸುತ್ತಿರುವ ಗುಟ್ಟು ರಟ್ಟಾಗಿದೆ. ಇಬ್ಬರೂ ಕೂಡ ಸತ್ಯವನ್ನು ಒಪ್ಪಿಕೊಳ್ಳಲು ನಾಚಿಕೊಂಡಿದ್ದು, ನಿರೂಪಕಿ ಅಭಿಮಾನಿಗಳಿ ಗುಟ್ಟಾಗಿದ್ದ ರಹಸ್ಯವನ್ನು ತಿಳಿಸಿದ್ದಾರೆ. ನಿರಂಜನ್ ಮತ್ತು ಅಮೂಲ್ಯ ಪ್ರೀತಿಯಲ್ಲಿದ್ದು, ಇಷ್ಟರಲ್ಲೇ ಮದುವೆಯಾಗಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಆದರೆ, ಈ ಬಗ್ಗೆ ಜೋಡಿಗಳೇ ಸ್ಪಷ್ಟನೆ ನೀಡಬೇಕಿದೆ.

actress-amulya-gowda-birthday

ಸ್ವಾತಿಮುತ್ತಾಗಿ ಬಂದ ನಟಿ

ಇನ್ನು ನಟಿ ಅಮೂಲ್ಯ ಅವರು 2014 ರಲ್ಲಿ ಸ್ವಾರ್ ಸ್ವಾತಿಮುತ್ತು ಸೀರಿಯಲ್ ಗೆ ಮೊದಲ ಬಾರಿಗೆ ಬಣ್ಣ ಹಚ್ಚಿ ಕಿರುತರೆಗೆ ಎಂಟ್ರಿಕೊಟ್ಟರು. ನಂತರ ಅರಮನೆ, ಪುನರ್ ವಿವಾಹ ಎಂಬ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಕಮಲಿ ಧಾರಾವಾಹಿ ಮೂಲಕ ಮೋಡಿ ಮಾಡಿದರು. ಇನ್ನು ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ನಟಿಸಿದ್ದಾರೆ. ಕಾರ್ತಿಕ ದೀಪಂ ಎಂಬ ತೆಲುಗು ಧಾರಾವಾಹಿಯಲ್ಲಿ ಆಟೋ ಚಾಲಕಿಯಾಗಿ ಕಾಣಿಸಿಕೊಂಡಿದ್ದು, ಗುಂಡೆನಿಂದ ಗುಡಿಗಂಟಲು ಎಂಬ ಧಾರಾವಾಹಿಯಲ್ಲಿ ಸದ್ಯ ನಟಿಸುತ್ತಿದ್ದಾರೆ. ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಶ್ರೀಗೌರಿ ಧಾರಾವಾಹಿಯಲ್ಲಿ ನಟಿಸಿದ್ದರು.


ಹುಟ್ಟುಹಬ್ಬದ ಸಂಭ್ರಮದಲ್ಲಿ ಅಮೂಲ್ಯ

ಆದರೆ, ಶ್ರೀಗೌರಿ ಧಾರಾವಾಹಿ ಇದ್ದಕ್ಕಿದ್ದ ಹಾಗೆಯೇ ಅರ್ಧಕ್ಕೆ ನಿಂತು ಹೋಯ್ತು. ಹಲವು ಕುತೂಹಲಕಾರಿ ವಿಚಾರಗಳಿಗೆ ಉತ್ತರ ನೀಡದೇ ಏಕಾಏಕಿ ಧಾರಾವಾಹಿ ಅಂತ್ಯಗೊಂಡಿದ್ದಕ್ಕೆ ಅಭಿಮಾನಿಗಳು ಬೇಸರಗೊಂಡರು. ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿ ಅಮೂಲ್ಯ ಅವರಿದ್ದಾರೆ. ಧಾರಾವಾಹಿಗಳಲ್ಲಿ ಅಷ್ಟೇ ಅಲ್ಲದೇ, ಬಿಗ್ ಬಾಸ್ ಮನೆಯ ಆಟದಲ್ಲಿ ಭಾಗವಹಿಸಿದ್ದರು. ಉದ್ದ ಜಡೆಯ ಸುಂದರಿ, ಅಮೂಲ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಆಡಿದರೂ, ಎಲ್ಲರಿಗೂ ಇನ್ನಷ್ಟು ಇಷ್ಟವಾದರು. ಮಾಡ್ರನ್ ಲುಕ್ ನಲ್ಲೂ, ಟ್ರೆಡಿಷನಲ್ ಉಡುಗೆಯಲ್ಲೂ ಮುದ್ದಾಗಿ ಕಾಣುವ ನಟಿ ಅಮೂಲ್ಯ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ


ಮುದ್ದು ಎಂದು ಹೇಳಿ ವಿಶ್ ಮಾಡಿದ ಪ್ರಿಯಕರ

ನಟ ನಿರಂಜನ್ ಅವರು ಜಗವೇ ನೀನು ಗೆಳೆತಿಯೇ ಹಾಡಿಗೆ ತಮ್ಮ ಹಾಗೂ ಅಮೂಲ್ಯ ಫೋಟೋ ಹಾಕಿ, ವಿಶ್ ಯೂ ಬ್ಯೂಟಿಫುಲ್ ಇಯರ್ ಅಹೆಡ್, ಹ್ಯಾಪಿ ಬರ್ತಡೇ ಮುದ್ದು ಎಂದು ಇನ್ ಸ್ಟಾಗ್ರಾಂ ಪೇಜ್ ನ ಸ್ಟೋರಿಸ್ ನಲ್ಲಿ ಹಾಕಿಕೊಂಡಿದ್ದಾರೆ. ಮುದ್ದು ಎಂದು ಹೇಳಿ ಈಗ ಅಭಿಮಾನಿಗಳಿಗೆ ತಮ್ಮಿಬ್ಬರ ಪ್ರೀತಿ ಸತ್ಯ ಎಂದು ಕೂಗಿ ಹೇಳಿದ್ದಾರೆ. ಸದ್ಯ ಇವರ ಪ್ರೀತಿಯ ವಿಚಾರ ಬಯಲಾಗಿದೆ. ಇನ್ನು ನಟಿ ಅನುಪಮಾ ಗೌಡ, ದಿವ್ಯಾ ಉರುಡುಗ ಸೇರಿದಂತೆ ಕಲಾವಿದ ಸ್ನೇಹಿತರೆಲ್ಲರೂ ವಿಶ್ ಮಾಡಿದ್ದಾರೆ. ಅಭಿಮಾನಿಗಳು ನಿರಂಜನ್ ಮತ್ತು ಅಮೂಲ್ಯ ಅವರ ಫ್ಯಾನ್ ಪೇಜ್ ಗಳ ಮೂಲಕ ಶುಭ ಕೋರಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X