Actress Amulya Gowda: ನಾಡಹಬ್ಬದ ಸುಂದರ ಕ್ಷಣಗಳನ್ನು ನೆನಪಿಸಿಕೊಂಡ ಕಿರುತೆರೆ ನಟಿ ಅಮೂಲ್ಯ ಹೇಳಿದ್ದೇನು?
ದಸರಾ ಹಬ್ಬ ಯಾರಿಗೆ ಇಷ್ಟ ಇಲ್ಲ ಹೇಳಿ ಜನಜಂಗುಳಿಯಿಂದ ತುಂಬ ಈ ನಾಡ ಹಬ್ಬಕ್ಕೆ ರಾಜ್ಯ ದೇಶ ವಿದೇಶಗಳಿಂದಲೂ ಜನರು ಬಂದು ಸೇರುತ್ತಾರೆ. ಬರೋಬ್ಬರಿ 10 ದಿನಗಳ ಕಾಲವೂ ಹಲವಾರು ರೀತಿಯ ಆಚರಣೆಗಳನ್ನು ಒಳಗೊಂಡ ಈ ಹಬ್ಬದಲ್ಲಿ ಫ್ಲವರ್ ಶೋ ಆಹಾರ ಮೇಳ ಇತ್ಯಾದಿಗಳು ಜನರ ಕಣ್ಮನ ಸೆಳೆಯುತ್ತಿರುತ್ತವೆ.
ಲೈಟಿಂಗ್ಸ್‌ನಿಂದ ಕೂಡಿರುವ ಅರಮನೆ ಹಾಗೂ ರಾಜರ ಸಂಭ್ರಮ ಆಚರಣೆಗಳು ಸಾಂಪ್ರದಾಯಿಕ ಐತಿಹಾಸಿಕ ಮಾನ್ಯತೆಯನ್ನು ಪಡೆದುಕೊಂಡಿದೆ. ಕೊನೆಯ ದಿನದ ಅಂಬಾರಿಗಂತೂ ಜನರು ಲಕ್ಷಗಳಲ್ಲಿ ಸೇರುತ್ತಾರೆ.

ಮೈಸೂರಿನ ಕುವರಿ, ನಟಿ ಅಮೂಲ್ಯ ಗೌಡ ಅವರು ಕೂಡಾ ನಾಡಹಬ್ಬಕ್ಕೆ ಹೋಗಿದ್ದಲ್ಲದೇ ಕಣ್ಣಾರೆ ಹಬ್ಬದ ಸೌಂದರ್ಯ ವನ್ನ ಅನುಭವಿಸಿದ್ದಾರೆ. ನಟಿ ಅಮೂಲ್ಯ ಅವರು ಆಹಾರ ಮೇಳಕ್ಕೆ ಹೋದಾಗ ಅಲ್ಲಿ ಒಂದು ಅಂಗಡಿಯವರು ಆಕೆಗೆ ಆಹಾರವನ್ನು ತಯಾರಿಸುವ ಅವಕಾಶ ಕೊಟ್ಟರಂತೆ. ಇದರಿಂದ ನಟಿ ಬಹಳ ಖುಷಿಯಾಗಿದ್ದಾರೆ.
ಅಂದ ಹಾಗೇ ನಟಿ ಅಮೂಲ್ಯ ಅವರ ಊರು ಮೈಸೂರು. ನಾಡಹಬ್ಬ ದಸರ ಬಂದಾಗ ಇಡೀ ಮೈಸೂರಿನಲ್ಲಿ ಸಂಭ್ರಮದ ವಾತಾವರಣ. ಆಹಾರ ಮೇಳಕ್ಕೆ ಹೋದಾಗ ಆ ಅಂಗಡಿಯವರೊಬ್ಬರು ಅಮೂಲ್ಯ ಆಹಾರ ತಯಾರಿಸಲು ಅವಕಾಶ ಮಾಡಿಕೊಟ್ಟಾಗ ಬಹಳ ಖುಷಿಯಾಯಿತಂತೆ. ಅಷ್ಟೇ ಅಲ್ಲದೆ ನನಗೆ ಬನ್ನಿ ಮಂಟಪದ ಸಂಭ್ರಮಾಚರಣೆ ಆಕೆಗೆ ಬಹಳ ಇಷ್ಟವಾದದ್ದು ಅಂತೆ.

ಕೊನೆ ದಿನ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಎಲೆಯನ್ನು ಕೊಡುವ ಸಂಪ್ರದಾಯ ಒಂದು ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಪಂಜಿನ ಕಾಯ ಕವಾಯತ್ತನ್ನು ನೋಡುವುದೇ ಆಕೆಯ ಕಂಗಳಿಗೊಂದು ಹಬ್ಬವಂತೆ. ಅಷ್ಟೇ ಅಲ್ಲದೆ ಏರ್ ಶೋ ಕೂಡ ಇರುತ್ತದೆ. ಈ ಎಲ್ಲವನ್ನು ಕಣ್ತುಂಬಿ ಕೊಳ್ಳುವುದು ಆಕೆಗೆ ಬಹಳ ಖುಷಿಯಂತೆ.
ಐತಿಹಾಸಿಕವಾಗಿಯೂ ಬಹಳ ಮನ್ನಣೆ ಪಡೆದಿರುವ ನಮ್ಮ ಮೈಸೂರು ಹಾಗೂ ಅಲ್ಲಿನ ಸಂಭ್ರಮಾಚರಣೆಗಳು ಎಂಥವರಿಗಾದರೂ ಮರೆಯಲಾಗದ ಕ್ಷಣಗಳನ್ನು ಕೊಡುವುದರಲ್ಲಿ ಡೌಟೇ ಇಲ್ಲ ಎಂಬುದು ನಟಿ ಅಮೂಲ್ಯ ಗೌಡ ಅವರ ಅಭಿಪ್ರಾಯ.
ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ 'ಅಪರಂಜಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಅಮೂಲ್ಯ ಗೌಡ ಮುಂದೆ 'ಅಗ್ನಿಸಾಕ್ಷಿ', 'ನನ್ನರಸಿ ರಾಧೆ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು 'ಕುರುಡು ಕಾಂಚಾಣ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋವಿನಲ್ಲಿ ಭಾಗವಹಿಸುತ್ತಿದ್ದಾರೆ.


Click it and Unblock the Notifications











