ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
'ಬೃಂದಾವನ' ಧಾರಾವಾಹಿ ವಿಭಿನ್ನ ಕಥೆಯನ್ನು ಇಟ್ಟುಕೊಂಡು ಬಹಳ ಅದ್ಬುತವಾಗಿ ಸಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಬಹು ದೊಡ್ಡ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಈ ಧಾರಾವಾಹಿಯಲ್ಲಿ ನಾಯಕ ನಟಿ ಪುಷ್ಪ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ಅಮೂಲ್ಯ ಭಾರದ್ವಾಜ್ ಅವರು ಬಹಳ ಸಾಂಪ್ರದಾಯಿಕ ಉಡುಗೆ ತೊಡುಗೆಯಿಂದ ಮುದ್ದಾಗಿ ಕಾಣುತ್ತಾರೆ. ಪ್ರತಿದಿನ ಈ ರೀತಿ ಸೀರೆ ಉಟ್ಟು ಸಾಂಪ್ರದಾಯಿಕವಾಗಿ ಕಾಣುವ ಅವರು ತಮ್ಮ ಮುಗ್ಧ ನಟನೆಯಿಂದ ಜನರ ಮನ ಗೆದ್ದಿದ್ದಾರೆ.
ಹೀಗಿರುವಾಗ ರಿಯಲ್ ಲೈಫ್ ಫೋಟೋಶೂಟ್‌ಗಳನ್ನು ಮಾಡಿಸಿಕೊಂಡು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬಿಡುವ ಇವರು ಇದೀಗ ತಮ್ಮ ಅಭಿಮಾನಿಗಳಿಗೆ ಅಚ್ಚರಿಯಾಗುವಂತೆ ಬೋಲ್ಡ್ ಲುಕ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಸಾಮಾನ್ಯವಾಗಿ ತೆರೆಯ ಮೇಲೆ ನಾವು ನೋಡುವ ಪಾತ್ರಗಳು ನಿಜ ಜೀವನದಲ್ಲೂ ಹಾಗೆ ಇರುತ್ತಾವೇನೋ ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಆದರೆ ತೆರೆ ಹಿಂದಿನವರ ನಿಜ ಜೀವನ ಬೇರೆಯದ್ದೇ ಆಗಿರಬಹುದು. ಅಂತೆಯೇ ನಟಿ ಪುಷ್ಪ ಉರ್ಫ್ ನಟಿ ಅಮೂಲ್ಯ ಭಾರದ್ವಾಜ್ ಅವರ ತಲೆ ಹಿಂದಿನ ಜೀವನದ ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿರುವ ಅವರು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಹೌದು, ಧಾರಾವಾಹಿಯಲ್ಲಿ ಮುದ್ದಾದ, ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ಈ ಹುಡುಗಿ ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಂಡು ಬೇರೆ ಬೇರೆ ಪೋಸ್‌ಗಳನ್ನು ನೀಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದು ಇದೀಗ ಭಾರಿ ವೈರಲ್ ಆಗಿದೆ. ಮಾತ್ರವಲ್ಲದೇ ನಟಿ ಅಮೂಲ್ಯ ಭಾರದ್ವಾಜ್ ಅವರ ಈ ಲುಕ್ ಅನ್ನು ಪ್ರೇಕ್ಷಕರು, ಅಭಿಮಾನಿಗಳು ಖುಷಿಯಿಂದ ಸ್ವಾಗತಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ನಟಿ ಅಮೂಲ್ಯ ಭಾರದ್ವಾಜ್, ಆಗಾಗ ಈ ರೀತಿಯ ಫೋಟೋಶೂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಫಾಲೋವರ್ಸ್ ಅನ್ನು ಎಂಗೇಜಿಂಗ್ ಆಗಿ ಇಟ್ಟಿರುತ್ತಾರೆ. 'ದಾಸ ಪುರಂದರ' ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟ ಇವರು ಇದೀಗ 'ಬೃಂದಾವನ' ಧಾರಾವಾಹಿಯಲ್ಲೂ ಚೆನ್ನಾಗಿ ನಟಿಸಿ ತಮ್ಮದೇ ಪ್ರೇಕ್ಷಕ ವೃಂದವನ್ನು ಪಡೆದಿದ್ದಾರೆ.
ಬಿ.ಕಾಂ ಪದವೀಧರೆಯಾಗಿರುವ ಅಮೂಲ್ಯಗೆ ಮೊದಲಿನಿಂದಲೂ ನಟಿಯಾಗುವ ಬಯಕೆ. ನಟಿಯಾಗಬೇಕು ಎಂಬ ಆಸೆಯಿಂದ ಸಾಕಷ್ಟು ಆಡಿಶನ್‌ಗಳಲ್ಲೂ ಆಕೆ ಭಾಗವಹಿಸಿದ್ದರು. ಆದರೆ, ಕಾಣಲು ಸಣ್ಣ ಇರುವ ಕಾರಣದಿಂದ ರಿಜೆಕ್ಟ್ ಆಗುತ್ತಿದ್ದರು. ಕೊನೆಗೆ 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟ ಈಕೆ ಮುಂದೆ ಕಾಣಿಸಿಕೊಂಡಿದ್ದು ಸರಸ್ವತಿಯಾಗಿ. 'ದಾಸ ಪುರಂದರ' ಧಾರಾವಾಹಿಯಲ್ಲಿ ಶ್ರೀನಿವಾಸ ನಾಯಕನ ಪತ್ನಿ ಸರಸ್ವತಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು ಅಮೂಲ್ಯ.
ಆದರೆ ಕಳೆದ ವರ್ಷ ಮಾರ್ಚ್ ನಲ್ಲಿ 'ದಾಸ ಪುರಂದರ' ಧಾರಾವಾಹಿ ಮುಕ್ತಾಯಗೊಂಡಿತ್ತು. ಮುಂದೆ ಕಿರುತೆರೆಯಿಂದ ದೂರವಿದ್ದ ಆಕೆ 'ಬೃಂದಾವನ' ಧಾರಾವಾಹಿಯ ಮೂಲಕ ಕಂ ಬ್ಯಾಕ್ ಆಗಿದ್ದರು. ಹಳ್ಳಿಹುಡುಗಿ ಪುಷ್ಪ ಪಾತ್ರಕ್ಕೆ ಜೀವ ತುಂಬುತ್ತಿರುವ ಅಮೂಲ್ಯ ಮಗದೊಮ್ಮೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.


Click it and Unblock the Notifications











