ಬಾಲನಟಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಈ ನಟಿ ಈಗ ಭಾರೀ ಫೇಮಸ್: ಯಾರೀ ನಟಿ? ಹಿನ್ನೆಲೆಯೇನು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ಪೈಕಿ 'ಶ್ರೀರಸ್ತು ಶುಭಮಸ್ತು' ಕೂಡಾ ಒಂದು. ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿರುವ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನೆ ಮನ ಸೆಳೆದಿದೆ. ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿರುವ ಈ ಧಾರಾವಾಹಿಯು ವೀಕ್ಷಕರ ಮೆಚ್ಚುಗೆ ಪಡೆದು ಉತ್ತಮ ಸ್ಥಾನ ಪಡೆದು ಮುನ್ನುಗುತ್ತಿದೆ.

'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರವೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ಒಳಗೊಂಡಿದೆ. ಧಾರಾವಾಹಿಯಲ್ಲಿ ಮಾಧವನ ತಮ್ಮ ಮುರಳಿಯ ಮಗಳು ನಿಧಿ ಆಗಿ ನಟಿಸುತ್ತಿರುವ ಅನನ್ಯ ಮೋಹನ್ ಬಾಲ ಕಲಾವಿದೆಯಾಗಿ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಾಕೆ. ಹೌದು, ದಶಕಗಳ ಹಿಂದೆ ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಮುಕ್ತ' ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿ ಕಿರುತೆರೆ ವೀಕ್ಷಕರನ್ನು ನಟಿ ಅನನ್ಯ ಮೋಹನ್ ರಂಜಿಸಿದ್ದರು.

actress Ananya Mohan know as child actress is now famous in a supporting roles

ತದ ನಂತರ ನಟನೆಯಿಂದ ಸಹಜವಾಗಿ ದೂರವಿದ್ದ ಈಕೆ ಮತ್ತೆ ಮರಳಿ ಬಂದುದು 'ಕನ್ನಡತಿ' ಧಾರಾವಾಹಿಯ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯ ಮೂಲಕ ನಟನೆಗೆ ಕಂ ಬ್ಯಾಕ್ ಮಾಡಿದ ಅನನ್ಯ ಮೋಹನ್ ಸದ್ಯ ನಿಧಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ನಿಧಿಯಾಗಿ ವೀಕ್ಷಕರನ್ನು ರಂಜಿಸುತ್ತಿರುವ ನಟಿ ಅನನ್ಯ ಮೋಹನ್ ಅವರ ತಾಯಿಯೂ ಕೂಡಾ ನಟಿ. ನಟನೆಯ ಮೂಲಕ ರಂಗಭೂಮಿ ಮಾತ್ರವಲ್ಲದೇ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ವತ್ಸಲಾ ಮೋಹನ್ ಅವರೇ ಅನನ್ಯ ಅವರ ತಾಯಿ.

actress Ananya Mohan know as child actress is now famous in a supporting roles

'ಕಸ್ತೂರಿ ಮಹಲ್', 'ಕಟ್ಟಿಂಗ್ ಶಾಪ್', 'ಮಮ್ಮಿ ಸೇವ್ ಮಿ','ಡೈರೆಕ್ಟರ್ ಸ್ಪೆಷಲ್', 'ಸಿದ್ಲಿಂಗು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೇ ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ವತ್ಸಲಾ ಮೋಹನ್ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.

ಇನ್ನು ನಟಿ ಅನನ್ಯಾ ಮೋಹನ್ ಅವರ ತಂದೆಯೂ ಕೂಡಾ ರಂಗಕರ್ಮಿ ಎನ್ನುವ ವಿಚಾರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅನನ್ಯಾ ತಂದೆ ಮೋಹನ್ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡವರು. ಮೋಹನ್ ಅವರ ನಿರ್ದೇಶನದ 'ಬೊಂಬೆಯಾಟ' ಸಿನಿಮಾ ಬಹಳಷ್ಟು ಖ್ಯಾತಿಯನ್ನು ಪಡೆದಿತ್ತು. ಮಾತ್ರವಲ್ಲದೇ ಮಾಸ್ಕೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕೂಡ ಕಂಡಿತ್ತು. ಮೋಹನ್ ಅವರು 2022ರಲ್ಲಿ ಹೃದಯಘಾತದಿಂದ ವಿಧಿವಶಾರಾದರು.

More from Filmibeat

English summary
Ananya Mohan, who attracted attention by acting as a child actress in the serial Mukta is charming as Nidhi in the serial Shrirasthu Shubhamasthu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X