ಮಂಜಪ್ಪನವರ ಸೊಸೆ ಸುಗಂಧಿ ಅವರ ಬಗ್ಗೆ ನಿಮಗೆಷ್ಟು ಗೊತ್ತು..?

By ಪ್ರಿಯಾ ದೊರೆ

ಮತ್ತೆ 'ಮಾಯಾಮೃಗ' ಧಾರಾವಾಹಿ ಈಗ ಎಲ್ಲಾ ಸೀರಿಯಲ್‌ಗಳಂತೆಯೇ ಮೂಡಿ ಬರುತ್ತಿದೆ. ಆದರೂ ಇದರಲ್ಲಿನ ಡೈಲಾಗ್‌ಗಳು ಮತ್ತು ಪಾತ್ರಗಳು ಅದ್ಭುತವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ.

'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ವಿದ್ಯಾಭೂಷಣ್‌ ಅವರ ಪುತ್ರಿ ಕೂಡ ಇದರಲ್ಲಿ ಅಭಿನಯಿಸಿದ್ದು, ಎಲ್ಲರ ನಟನೆಯೂ ಚೆನ್ನಾಗಿದೆ.

ಇನ್ನು ಈ ಧಾರಾವಾಹಿಯಲ್ಲಿ ಹೊಸ ಕುಟುಂಬವೆಂದರೆ ಅದು ಮಂಜಪ್ಪ ಕುಟುಂಬ. ಈ ಕುಟುಂಬದಲ್ಲಿ ಮಂಜಪ್ಪ ಅವರ ಪತ್ನಿ, ಮಗ ಮತ್ತು ಸೊಸೆ ಇದ್ದಾರೆ. ಈ ಸೊಸೆ ಪಾತ್ರಧಾರಿ ಯಾರು ಎಂದು ನಿಮಗೆ ಕುತೂಹಲ ಮೂಡಿರಬಹುದು. ಬನ್ನಿ ಹಾಗಾದರೆ ಈ ಸುಗಂಧಿ ಯಾರು ಎಂದು ತಿಳಿಯೋಣ.

18 ವರ್ಷ ಸಂಗೀತ ಅಭ್ಯಾಸ

18 ವರ್ಷ ಸಂಗೀತ ಅಭ್ಯಾಸ

ಸುಗಂಧಿ ಅವರ ನಿಜವಾದ ಹೆಸರು ಅನನ್ಯಾ ಸುರೇಶ್ ಮೂಲತಃ ಶಿವಮೊಗ್ಗದವರು. ಅನನ್ಯಾ ಸುರೇಶ್‌ ಅವರು ಎಂಬಿಎ ಓದಿ ಮ್ಯೂಚುವಲ್‌ ಫಂಡ್ಸ್‌ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರ ತಂದೆಯ ಹೆಸರು ಸುರೇಶ್, ತಾಯಿ ಭಾರತಿ. ತಂದೆ ಟಿವಿಎಸ್‌ ಮೋಟರ್ಸ್‌ನಲ್ಲಿಯೂ ತಾಯಿ ಕೆಪಿಸಿಎಲ್‌ನಲ್ಲಿಯೂ ಉದ್ಯೋಗ ಮಾಡುತ್ತಿದ್ದರು. 2020 ರಲ್ಲಿ ಅನನ್ಯ ಸುರೇಶ್ ಮದುವೆಯಾಗಿದ್ದು ಅಮಿತ್‌ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಅನನ್ಯಾ ಅವರು ಚಿಕ್ಕ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಮಾಡಿದ್ದು, ಜೂನಿಯರ್‌ ಹಾಗೂ ಸೀನಿಯರ್‌ ಪರೀಕ್ಷೆ ಬರೆದಿದ್ದಾರೆ. ಸುಧಾಮಣಿ ಎಂಬುವರ ಬಳಿ 18 ವರ್ಷ ಸಂಗೀತ ಕಲಿತಿದ್ದಾರೆ.

ನಾಟಕಗಳಲ್ಲಿ ಅಭಿನಯ

ನಾಟಕಗಳಲ್ಲಿ ಅಭಿನಯ

ನಟನೆಯ ಮೇಲೆ ಚಿಕ್ಕ ವಯಸ್ಸಿನಿಂದಲೂ ಆಸೆ ಇಟ್ಟುಕೊಂಡಿದ್ದ ಅನನ್ಯಾ ಕಿರುತೆರೆಗೆ ಬಂದಿದ್ದು ಆಕಸ್ಮಿಕವಾಗಿ. ಕೆಲಸ ಬಿಟ್ಟು ಮತ್ತೊಂದು ಕೆಲಸದ ಹುಡುಕಾಟದಲ್ಲಿದ್ದಾಗ ಸ್ನೇಹಿತರು ರಂಗಭೂಮಿಗೆ ಬಂದು ನಾಟಕಗಳಲ್ಲಿ ನಟಿಸುವ ಆಫರ್‌ ಕೊಟ್ಟಿದ್ದರು. ನಟನೆ ಹೇಗಿದ್ದರೂ ಇಷ್ಟ ಎಂದು ಅನನ್ಯಾ ಅವರು ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ಖುಷಿ ಪಟ್ಟರು. ಬಳಿಕ ಒಂದೆರಡು ಶಾರ್ಟ್‌ ಫಿಲ್ಮಂಗಳಲ್ಲೂ ಅನನ್ಯಾ ಸುರೇಶ್‌ ಅವರು ಅಭಿನಯಿಸಿದ್ದಾರೆ. 'ಕಾಣದ ಹನಿಯೊಂದು', 'ಅಧಿತಿ ಕೃಷ್ಣಮೂರ್ತಿ' ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

ಆಡಿಷನ್‌ ನೀಡಿ ಅವಕಾಶ ಪಡೆದರು

ಆಡಿಷನ್‌ ನೀಡಿ ಅವಕಾಶ ಪಡೆದರು

ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅನನ್ಯಾ ಸುರೇಶ್‌ ಅವರು ಮತ್ತೆ ಮಾಯಾಮೃಗ ಆಡಿಷನ್‌ ಬಗ್ಗೆ ತಿಳಿದಿದ್ದೇ ತಡವಾಗಿಯಂತೆ. ಹಾಗೋ ಹೀಗೋ ಆಡಿಷನ್‌ ಕೊಟ್ಟು ಬಂದ ಕೆಲವೇ ದಿನಗಳಲ್ಲಿ ಅನನ್ಯಾ ಅವರಿಗೆ ಸೆಲೆಕ್ಟೆಡ್‌ ಎಂದು ಫೋನ್‌ ಕಾಲ ಬಂತಂತೆ. ಆಗ ಅನನ್ಯಾ ಅವರ ಖುಷಿಗೆ ಪಾರವೇ ಇರಲಿಲ್ಲ. ಟಿಎನ್‌ ಸೀತಾರಾಂ, ನಾಗೇಂದ್ರ ಷಾ ಅವರುಗಳ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ದೊಡ್ಡ ಅದೃಷ್ಟ ಎಂದು ಹೇಳುತ್ತಾರೆ.

ಮಂಜಪ್ಪನ ಸೊಸೆ ಸುಗಂಧಿ

ಮಂಜಪ್ಪನ ಸೊಸೆ ಸುಗಂಧಿ

ಇನ್ನು 'ಮತ್ತೆ ಮಾಯಾಮೃಗ' ಧಾರಾವಾಹಿಯಲ್ಲಿ ಮಂಜಪ್ಪನವರ ಸೊಸೆ ಸುಗಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಯುಎಸ್‌ನಲ್ಲಿ ಮೈತುಂಬಾ ಸಾಲ ಮಾಡಿಕೊಂಡು ಬಂದಿದ್ದು, ಮಾವನ ಆಸ್ತಿ ಮೇಲೆ ಗಂಡ-ಹೆಂಡತಿ ಕಣ್ಣು ಹಾಕಿದ್ದಾರೆ. ಆಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಸಲುವಾಗಿ ಏನೇನೋ ಪ್ಲಾನ್‌ ಗಳನ್ನು ಮಾಡುತ್ತಿದ್ದು, ನೆಗೆಟಿವ್‌ ರೋಲ್‌ ನಲ್ಲಿ ಅನನ್ಯಾ ಸುರೇಶ್‌ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ-ನಟಿಯರು, ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ ಎಂದು ಹೇಳಿದ್ದಾರೆ.

More from Filmibeat

English summary
Actress Ananya Suresh Personal life and Acting experience details. Actress Ananya Suresh Complete serial journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X