ಚೈತ್ರಾ ವಾಸುದೇವನ್ ತಮ್ಮ ಹಳೆಯ ಬಟ್ಟೆಗಳನ್ನು ಸೇಲ್ ಮಾಡಿದ್ದು ಹೇಗೆ..?

By ಪ್ರಿಯಾ ದೊರೆ

ಸಾಮಾನ್ಯವಾಗಿ ಜನ ಸೆಕೆಂಡ್ ಹ್ಯಾಂಡ್ ಬೈಕ್, ಕಾರುಗಳನ್ನು ಖರೀದಿಸುವುದನ್ನು ಕೇಳಿದ್ದೀರಾ. ಇನ್ನು ಕೆಲವು ಕಡೆಗಳಲ್ಲಿ ಸೆಕೆಂಡ್ಸ್‌ಗೆ ಎಲೆಕ್ಟ್ರಾನಿಕ್ ವಸ್ತುಗಳು, ಫರ್ನಿಚರ್‌ಗಳನ್ನು ಕೂಡ ಸೇಲ್‌ಗೆ ಹಾಕಿರುತ್ತಾರೆ.

ಇದನ್ನೆಲ್ಲಾ ಹೊಸದನ್ನು ಖರೀದಿಸಲು ಕಷ್ಟ ಪಡುವುದಕ್ಕಿಂತ ಇದೇ ವಾಸಿ ಎಂದು ಖರ್ಚು ಕಡಿಮೆ ಎಂದು ಆಲೋಚಿಸುವವರೂ ಇದ್ದಾರೆ. ಹಾಗಾಗಿ ಸೆಕೆಂಡ್ಸ್‌ಗೆ ವಸ್ತುಗಳನ್ನು ಖರೀದಿಸುತ್ತಾರೆ.

ಇತ್ತೀಚೆಗೆ ಕೆಲವರು ಬಟ್ಟೆಗಳನ್ನು ಕೂಡ ಸೆಕೆಂಡ್ಸ್‌ಗೆ ಖರೀದಿಸುತ್ತಾರೆ. ತಮ್ಮ ಕೈಯಲ್ಲಿ ಅಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹಳೆಯ ಬಟ್ಟೆಯನ್ನು ಖರೀದಿಸುವವರೂ ಇದ್ದಾರೆ.

ಸೆಕೆಂಡ್ಸ್‌ಗೆ ಬಟ್ಟೆ ಖರೀದಿ

ಸೆಕೆಂಡ್ಸ್‌ಗೆ ಬಟ್ಟೆ ಖರೀದಿ

ಈಗ ಇನ್ನೊಬ್ಬರು ಧರಿಸಿರುವ ಬಟ್ಟೆಯನ್ನು ಒಳ್ಳೆಯ ಕಂಡೀಷನ್‌ನಲ್ಲಿದ್ದರೆ, ಅದಕ್ಕೆ ಅರ್ಧದಷ್ಟು ಹಣ ಕೊಟ್ಟು ಖರೀದಿಸುವುದು ಟ್ರೆಂಡ್ ಆಗಿದೆ. ಥ್ರಿಫ್ಟ್ ಎಂಬ ಪದವನ್ನು ಎಲ್ಲರೂ ಕೇಳಿರುತ್ತೀರಾ. ಇನ್ನು ಈಗಂತೂ ಸಾಕಷ್ಟು ರೀ-ಸೇಲ್ ಆಪ್‌ಗಳು ಬಂದಿವೆ. ಇದರ ಮೂಲಕ ನಿಮ್ಮಲ್ಲಿ ಚೆನ್ನಾಗಿರುವ ಒಳ್ಳೆಯ ಬಟ್ಟೆಗಳನ್ನು ರೀ-ಸೇಲ್ ಮಾಡಿ ಹಣ ಗಳಿಸಬಹುದು. ಇದರಿಂದ ಹಣ ಗಳಿಸಿದಂತೆಯೂ ಆಗುತ್ತದೆ. ಜೊತೆಗೆ ಇಷ್ಟಪಟ್ಟ ಬಟ್ಟೆಯನ್ನು ಹೆಚ್ಚು ಹಣ ಕೊಟ್ಟು ಖರೀದಿಸಲಾಗದವರಿಗೆ ಕಡಿಮೆ ಬೆಲೆಗೆ ಈ ಬಟ್ಟೆ ಸಿಕ್ಕಂತೆಯೂ ಆಗುತ್ತದೆ. ಹಾಗಾಗಿ ಈಗ ಹೆಚ್ಚಿನ ಕಡೆ ಥ್ರೆಫ್ಟ್ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ.

ತಮ್ಮ ಬಟ್ಟೆಗಳನ್ನು ಸೇಲ್ ಮಾಡಿದ ಚೈತ್ರಾ

ತಮ್ಮ ಬಟ್ಟೆಗಳನ್ನು ಸೇಲ್ ಮಾಡಿದ ಚೈತ್ರಾ

ನಟಿ ಚೈತ್ರಾ ವಾಸುದೇವನ್ ಕೂಡ ಇದರ ಮೊರೆ ಹೋಗಿದ್ದಾರೆ. ತಮ್ಮ ಬಟ್ಟೆಗಳನ್ನು ಕಡಿಮೆ ಬೆಲೆಗೆ ಸೇಲ್ ಮಾಡಿದ್ದಾರೆ. ಪ್ರಿ ಲವ್ಡ್ ಕ್ಲೊಸೆಟ್‌ಗಳನ್ನು ಖರೀದಿಸಿಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬಂದಿದ್ದರಂತೆ. ಈ ಬಗ್ಗೆ ಚೈತ್ರಾ ವಾಸುದೇವನ್ ಅವರು ವೀಡಿಯೋ ಮಾಡಿದ್ದಾರೆ. ವೀಡಿಯೋವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಚೈತ್ರಾ ಅವರು ತಾವು ಈಗಾಗಲೇ ಬಳಸಿದ್ದ ಹಲವು ಬಟ್ಟೆಗಳನ್ನು ಮತ್ತೆ ಧರಿಸಲು ಇಷ್ಟವಿಲ್ಲದ ಕಾರಣ ಅದನ್ನೆಲ್ಲಾ ಮಾರಾಟ ಮಾಡಲು ನಿರ್ಧರಿಸಿದ್ದರು. ಅದನ್ನೆಲ್ಲಾ ಸೆಕೆಂಡ್ಸ್‌ಗೆ ಸೇಲ್ ಮಾಡಿದ್ದು, ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಅಲ್ಲದೇ, ನೀವು ಕೂಡ ಹಳೆಯ ಬಟ್ಟೆಗಳನ್ನು ಸೇಲ್ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಡಿಸೈನರ್ ಬಟ್ಟೆಗಳಿಂದಲೇ ಫೇಮಸ್

ಡಿಸೈನರ್ ಬಟ್ಟೆಗಳಿಂದಲೇ ಫೇಮಸ್

ಮೂಲತಃ ಕುಂದಾಪುರದವರಾಗಿರುವ ನಿರೂಪಕಿ ಚೈತ್ರಾ ವಾಸುದೇವನ್ ಅವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕಾಲೇಜಿನಲ್ಲಿರುವಾಗಲೇ ವಾಹಿನಿಯೊಂದಕ್ಕೆ ನಿರೂಪಣೆ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಿರೂಪಣೆ, ಜಾಹೀರಾತುಗಳ ಮೂಲಕ ಜನರಿಗೆ ಹತ್ತಿರವಾಗಿದ್ದು, ತಮ್ಮದೇ ಇವೆಂಟ್ ಮ್ಯಾನೇಜ್‌ಮೆಂಟ್ ಅನ್ನು ನಡೆಸುತ್ತಿದ್ದಾರೆ. ಚೈತ್ರಾ ವಾಸುದೇವನ್ ಅವರು ತಮ್ಮ ಡಿಸೈನರ್ ಬಟ್ಟೆಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಾರೆ. ಒಂದು ಶೋಗೆ ಬಳಸಿದ ಬಟ್ಟೆಯನ್ನು ಚೈತ್ರಾ ಅವರು ಮತ್ತೆ ಬಳಸುವುದಿಲ್ಲ. ಹಾಗಾಗಿ ತಮ್ಮಲ್ಲಿದ್ದ ಬಟ್ಟೆಗಳನ್ನು ಸೇಲ್ ಕೂಡ ಹಾಕಿದ್ದರು.

ಚೈತ್ರಾ ಇವೆಂಟ್ಸ್ ಫ್ಯಾಕ್ಟರಿ

ಚೈತ್ರಾ ಇವೆಂಟ್ಸ್ ಫ್ಯಾಕ್ಟರಿ

ಚೈತ್ರಾ ವಾಸುದೇವನ್ ಅವರು ಮದುವೆಯಾದ ಮೇಲೆ ನಿರೂಪಣೆ ಜೊತೆಗೆ ಪತಿ ಸತ್ಯ ಜೊತೆ ಸೇರಿ ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಮದುವೆ, ಪ್ರೋಗ್ರಾಂಗಳನ್ನು ಆರ್ಗನೈಸ್ ಮಾಡುತ್ತಾರೆ. ಇವೆಂಟ್ಸ್ ಫ್ಯಾಕ್ಟರಿ ಎಂಬ ಮದುವೆ ಪ್ಲ್ಯಾನಿಂಗ್ ಸರ್ವಿಸ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಇನ್ನು ಇವರ ಬಳಿ ದುಬಾರಿ ಕಾರುಗಳಿವೆ. 2020ರಲ್ಲಿ ಜಾಗ್ವಾರ್ ಕಾರನ್ನು ಖರೀದಿಸಿದ್ದರು. ಇದೀಗ ಮತ್ತೊಂದು ಕಾರನ್ನು ಖರೀದಿಸಿದ್ದಾರೆ. ಕಳೆದ ವರ್ಷ ರೇಂಜ್ ರೋವರ್ ಕಂಪೆನಿಯ ಕಾರನ್ನು ಖರೀದಿಸಿದ್ದಾರೆ.

More from Filmibeat

English summary
Actress - Anchor chaithra vasudevan on Thrift Store pre-loved closet video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X