ಚೈತ್ರಾ ನಟಿ, ನಿರೂಪಕಿ ಜೊತೆ ಸಕ್ಸಸ್‌ಫುಲ್ ಯೂಟ್ಯೂಬರ್:ಇವರ ಯೂಟ್ಯೂಬ್ ಚಾನೆಲ್‌ನ ಚಂದಾದಾರರೆಷ್ಟು?

By ಅನಿತಾ ಬನಾರಿ

ಇತ್ತೀಚೆಗೆ ಸ್ಯಾಂಡಲ್‌ವುಡ್ ನಟಿಯರು ನಟನೆ ಜೊತೆಗೆ ತಮ್ಮದೇ ಒಂದೊಂದು ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದಾರೆ. ಆ ಚಾನೆಲ್‌ನಲ್ಲಿ ತಮಗೆ ಇಂಟ್ರೆಸ್ಟಿಂಗ್ ಅನಿಸಿದ ವಿಷಯಗಳ ಮೇಲೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಅದರಿಂದ ಲಕ್ಷಗಟ್ಟಲೆ ವೀವ್ಸ್ ಅನ್ನೂ ಪಡೆದುಕೊಳ್ಳುತ್ತಿದ್ದಾರೆ.

ನಟಿ ಕಮ್ ನಿರೂಪಕಿ ಚೈತ್ರಾ ವಾಸುದೇವ್ ಕೂಡ ಯೂಟ್ಯೂನ್‌ ಚಾನೆಲ್ ಮಾಡಿ ಸಕ್ಸಸ್ ಕಂಡಿದ್ದಾರೆ. ಚೈತ್ರಾ ವಾಸುದೇವನ್ ಅವರಿಗೆ ಯೂಟ್ಯೂಬ್ ಸಿಲ್ವರ್ ಬಟನ್ ಲಭಿಸಿದೆ. ತನ್ನ ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ ಹೊಂದಿದ ಬೆನ್ನಲ್ಲೇ ನಟಿ ಯಶಸ್ಸನ್ನು ಸಂಭ್ರಮ ಮಾಡಲು ಮುಂದಾಗಿದ್ದಾರೆ. ಸದ್ಯ ಸಿಲ್ವರ್ ಬಟನ್ ಸಿಕ್ಕ ಸಂತೋಷಕ್ಕೆ ಕೆಲವು ಸಬ್ ಸ್ಕ್ರೈಬರ್ಸ್ ಜೊತೆ ಸಂಭ್ರಮದಿಂದ ಪಾರ್ಟಿ ಮಾಡಿಕೊಂಡಿದ್ದಾರೆ ನಟಿ.

Actress and anchor Chaitra Vasudevan got the YouTube Silver Button

ಚೈತ್ರಾ ವಾಸುದೇವನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಇವರು, ನಟಿ ಮತ್ತು ನಿರೂಪಕಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ನಟನಾರಂಗದಲ್ಲಿ ಕಡಿಮೆ ಪರಿಚಿತರಾದರೂ ಕೂಡ ತಮ್ಮ ಫ್ಯಾಷನ್, ಡ್ರೆಸ್ಸಿಂಗ್ ಮತ್ತು ಯೂಟ್ಯೂಬ್ ವಿಡಿಯೋಗಳಿಂದಾಗಿ ಎಲ್ಲೆಡೆ ಜನಪ್ರಿಯತೆಯನ್ನು ಪಡೆದಿದ್ದಾರೆ.

ಅಂದ ಹಾಗೆ, 2021ರಲ್ಲಿ ಚೈತ್ರಾ ವಾಸುದೇವನ್ ಯೂಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದರು . ಬರೀ ಎರಡು ವರ್ಷದ ಅವಧಿಯಲ್ಲಿ ಈಗಾಗಲೇ 1.08 ಸಬ್ ಸ್ಕ್ರೈಬರ್‌ವನ್ನು ಪಡೆದಿರುವ ನಟಿ, ಇಲ್ಲಿವರೆಗೂ ಸುಮಾರು 319 ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಚಾನೆಲಿನ ಮೂಲಕ ಅವರು ಲೈಫ್ ಸ್ಟೈಲ್ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾರೆ.

ನಿರೂಪಣೆಯ ಜೊತೆ ಜೊತೆಗೆ ಹೊಸ ಸ್ಥಳಗಳಿಗೆ ತೆರಳುವುದು, ಟ್ರಾವೆಲ್ ಮಾಡುವುದು ಚೈತ್ರಾ ಅವರ ನೆಚ್ಚಿನ ಹವ್ಯಾಸ. ಹಾಗೆ ಹೋದಾಗಲೆಲ್ಲಾ ತಾವು ಹೋದ ಸ್ಥಳದ ಕುರಿತಂತೆ ಮಾಹಿತಿಯನ್ನು, ಅನುಭವವನ್ನು ಇವರು ಹಂಚಿಕೊಳ್ಳುತ್ತಾರೆ. ಇಲ್ಲಿಯ ತನಕ ಹೋಗಿರುವ ನ್ಯಾಷನಲ್, ಇಂಟರ್ ನ್ಯಾಷನಲ್, ಲೋಕಲ್ ಟ್ರಾವೆಲ್ ಬಗೆಗೆ ಸಾಕಷ್ಟು ಮಾಹಿತಿ ವ್ಲೋಗ್ ನಲ್ಲಿ ಕಾಣಸಿಗುತ್ತದೆ. ಇತ್ತೀಚೆಗಷ್ಟೇ ತಮ್ಮ ಡ್ರೀಮ್ ಡೆಸ್ಟಿನೇಶನ್ ಆಗಿದ್ದ ಟರ್ಕಿಗೆ ಪ್ರವಾಸ ಕೈಗೊಂಡಿದ್ದ ಇವರು ಅಲ್ಲಿ ಎಂಜಾಯ್ ಮಾಡಿರುವ ಫೋಟೋ, ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Actress and anchor Chaitra Vasudevan got the YouTube Silver Button

ಅಲ್ಲದೇ ತಮ್ಮ ರೂಮ್ ಟೂರ್, ಫ್ಯಾಷನ್, ಮೇಕಪ್, ಆಹಾರ, ಶಾಪಿಂಗ್ ಬಗ್ಗೆಯೂ ತಮ್ಮ ಚಾನೆಲ್ ಮೂಲಕ ಮಾಹಿತಿ ನೀಡುತ್ತಾರೆ ಚೈತ್ರಾ. ಇವಲ್ಲದೇ ಸೆಲೆಬ್ರಿಟಿಗಳ ಸಂದರ್ಶನ, ಬ್ಯೂಟಿ ಟಿಪ್ಸ್, ಫಿಟ್ನೆಸ್ ಸೀಕ್ರೆಟ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ಹೊಸ ಫೋಟೊ ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ದಿನನಿತ್ಯ ಸಂಪರ್ಕದಲ್ಲಿರುತ್ತಾರೆ.

ತನ್ನ ಸ್ವಂತ ಈವೆಂಟ್ ಕಂಪನಿ ಮತ್ತು ಪ್ರೊಡಕ್ಷನ್ ಹೌಸನ್ನು ಹೊಂದಿರುವ ಚೈತ್ರಾ ವಾಸುದೇವನ್ ಕನ್ನಡದ ಬಹುಬೇಡಿಕೆಯ ನಿರೂಪಕರಲ್ಲಿ ಒಬ್ಬರಾಗಿದ್ದಾರೆ. ಸದ್ಯ ನಿರೂಪಣೆ ಜೊತೆ ಜೊತೆಗೆ ಯೂಟ್ಯೂಬ್ ಚಾನೆಲ್‌ನಲ್ಲೂ ಯಶಸ್ಸು ಕಂಡಿದ್ದಾರೆ. ಇದೇ ಖುಷಿಯಲ್ಲಿ ನಟಿ ಹಾಗೂ ನಿರೂಪಕಿ ಸಂಭ್ರಮಪಟ್ಟಿದ್ದಾರೆ.

More from Filmibeat

English summary
Actress and anchor Chaitra Vasudevan got the YouTube Silver Button, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X