ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾಗೆ ಬ್ರೇಕ್ ಕೊಟ್ಟ ಚೈತ್ರಾ ವಾಸುದೇವನ್
ಸೆಲೆಬ್ರಿಟಿಗಳೆಲ್ಲರಿಗೂ ಬಹಳಷ್ಟು ಅಭಿಮಾನಿ ಸಂಪರ್ಕ ಸಿಗುವುದೇ ಅವರ ಸೋಶಿಯಲ್ ಮೀಡಿಯಾ ಮೂಲಕ. ಅದರಲ್ಲೂ ಇಂದು ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುವುದು ಒಂದು ಹೊಸ ಕೆಲಸದಂತಾಗಿದೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟರ್ ಈ ರೀತಿ ಬೇರೆ ಬೇರೆ ಸೋಶಿಯಲ್ ಮೀಡಿಯಾಗಳ ಮೂಲಕ ಜನರನ್ನು ತಲುಪುವುದು ಸುಲಭವಾಗಿರುವುದರಿಂದ, ಅದನ್ನು ಅಷ್ಟೇ ಚೆನ್ನಾಗಿ ಸದಾ ಇಂಟರೆಸ್ಟಿಂಗ್ ಆಗಿ ಇಟ್ಟುಕೊಳ್ಳುವುದು ಒಂದು ಹೊಸ ಟಾಸ್ಕ್ ಆಗಿದೆ.
ಚೈತ್ರಾ ವಾಸುದೇವನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದರು. ಇದರಿಂದಲೇ ಸಾಕಷ್ಟು ಫಾಲೋವರ್ಸ್ ಅನ್ನೂ ಸಂಪಾದಿಸಿದ್ದರು. ಪ್ರಮೋಷನಲ್ ಆಕ್ಟಿವಿಟಿ ಕೂಡ ಸೋಶಿಯಲ್ ಮೀಡಿಯಾದಿಂದಲೇ ನಡೆಯುತ್ತಿದೆ. ಸದ್ಯ ಅದೇ ಸೋಶಿಯಲ್ ಮೀಡಿಯಾಗೀಗ ಅದಕ್ಕೀಗ ಬ್ರೇಕ್ ಕೊಟ್ಟಿದ್ದಾರೆ. ಯಾಕೆ? ಅಂತ ತಿಳಿಯೋಕೆ ಮುಂದೆ ಓದಿ..

ಕುತೂಹಲ ಕೆರಳಿಸಿದ ಚೈತ್ರಾ ವಾಸುದೇವನ್ ಪೋಸ್ಟ್
ಸಾವಿರಾರು ಫಾಲೋವರ್ಸ್ ಪಡೆದ ನೂರಾರು ಸೆಲೆಬ್ರಿಟಿಗಳು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಜನರಿಗೆ ಹೊಸ ವಿಚಾರಗಳನ್ನು ಹೇಳುವುದಾಗಲಿ ಅಥವಾ ತಮ್ಮ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಪ್ರಮೋಷನ್ ಮಾಡುವುದಾಗಲಿ ನಡೆಯುತ್ತಲೇ ಇರುತ್ತದೆ. ಅಂತದ್ದರಲ್ಲಿ ಕನ್ನಡದ ಖ್ಯಾತ ನಟಿ, ನಿರೂಪಕಿ ಚೈತ್ರಾ ವಾಸುದೇವನ್ ಅವರ ಇತ್ತೀಚಿನ ಪೋಸ್ಟ್ ಒಂದು ಬಹಳಷ್ಟು ಕುತೂಹಲ ಕೆರಳಿಸಿದೆ.
ಸೋಶಿಯಲ್ ಮೀಡಿಯಾಗೆ ಚೈತ್ರಾ ಬ್ರೇಕ್
ಹೌದು! ಸೋಶಿಯಲ್ ಮೀಡಿಯಾದಿಂದ ಕೆಲವು ದಿನಗಳು ಹೊರಗಿರುವುದಾಗಿ ಚೈತ್ರಾ ವಾಸುದೇವ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಇತ್ಯಾದಿ ಯಾವುದೇ ಸೋಶಿಯಲ್ ಮೀಡಿಯಾವನ್ನು ಕೆಲವು ದಿನ ಬಳಸುವುದಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದರ ಹಿಂದಿನ ಕಾರಣ ಗೊತ್ತಿಲ್ಲ, ಆದರೆ ಸಣ್ಣ ಬ್ರೇಕ್ ಬೇಕೆಂದು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿರುವ ನಟಿ ಕೆಲ ದಿನಗಳ ಕಾಲ ತಮ್ಮ ಸೋಶಿಯಲ್ ಮೀಡಿಯಾದಿಂದ ಹೊರಗುಳಿಯಲಿದ್ದಾರೆ.

ನಿರೂಪಕಿಯಾಗಿ ಮೋಡಿ
ಕನ್ನಡದ ನಟಿಯಾಗಿ ಬಹಳಷ್ಟು ಹೆಸರು ಮಾಡಿರುವ ಚೈತ್ರಾ ವಾಸುದೇವನ್ ಅವರು ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಅಷ್ಟೇ ಅಲ್ಲದೆ ಪ್ರೊಡಕ್ಷನ್ ಹೌಸ್ ಅನ್ನು ಕೂಡ ಹೊಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿಯೂ ಬಹಳಷ್ಟು ಪಾಪ್ಯುಲರಿಟಿ ಪಡೆದ ಇವರು ಬೇರೆ ಬೇರೆ ವಿಶೇಷ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಮೂಲಕವೂ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗೆಯೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಕೊನೆಯದಾಗಿ ಈಕೆ 'ಕುಕ್ಕು ವಿತ್ ಕಿರಿಕ್ಕು' ಎಂಬ ಅಡುಗೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಇನ್ನು ಈ ನಟಿ ಮತ್ತೆ ಸೋಶಿಯಲ್ ಮೀಡಿಯಾಗೆ ಯಾವಾಗ ಬರುತ್ತಾರೆ ಎಂಬುದೇ ಅಭಿಮಾನಿಗಳ ಕುತೂಹಲವಾಗಿದೆ.


Click it and Unblock the Notifications











