"ಖಳನಾಯಕಿ ಪಾತ್ರ ಮಾಡಿದ್ದಕ್ಕೆ ಮದುವೆ ಪ್ರಸ್ತಾಪಗಳೇ ಬರುತ್ತಿರಲಿಲ್ಲ": ಭಯಾನಕ ಅನುಭವ ಬಿಚ್ಚಿಟ್ಟ ನಟಿ!
ನಟಿ ಅನಿಕ ಸಿಂಧ್ಯಾ ಯಾರಿಗೆ ಗೊತ್ತಿಲ್ಲ ಹೇಳಿ?!ದಶಕಗಳಿಂದಲೂ ಹಲವಾರು ಧಾರಾವಾಹಿಗಳಲ್ಲಿ ಖಳನಾಯಕಿ ಪಾತ್ರಗಳನ್ನು ಮಾಡಿಕೊಂಡು ಬಂದಿರುವ ಈಕೆ ತಮ್ಮ ಅದ್ಬುತ ಅಭಿನಯಕ್ಕೆ ಹೆಸರುವಾಸಿ. ಹೆಚ್ಚು ಕಮ್ಮಿ 10 ವರ್ಷಗಳಿಂದಲೂ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿರುವ ಅನಿಕಾ ಖಳನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು.
ತೆರೆ ಮೇಲಿನ ತಮ್ಮ ಪಾತ್ರಗಳಿಂದ ಜನರಿಗೆ ಹೆಚ್ಚು ಪರಿಚಯ ಇರುವ ಇವರು ನಿಜ ಜೀವನದಲ್ಲಿಯೂ ತೆರೆ ಮೇಲಿನ ಪಾತ್ರಗಳ ಬಗೆಗಿನ ಅಭಿಪ್ರಾಯಗಳನ್ನು ಪಡೆಯುತ್ತಲೇ ಇರುತ್ತಾರಂತೆ.

ಪ್ರೇಕ್ಷಕರು ಮಾತನಾಡಲು ಹೆದರುತ್ತಿದ್ದರು
ಇವರ ಖಳನಾಯಕಿ ರೋಲ್‌ಗಳಿಗೆ ಇವರನ್ನು ತೆರೆ ಮೇಲೆ ದ್ವೇಷಿಸುವ ಕಿರುತೆರೆ ಪ್ರೇಕ್ಷಕರು ನಿಜ ಜೀವನದಲ್ಲಿ ಸಿಕ್ಕಾಗಲು ಇವರೊಂದಿಗೆ ಮಾತನಾಡಲು ಹೆದರುತ್ತಾರಂತೆ. ಅಥವಾ ಹಿಡಿ ಹಿಡಿ ಶಾಪವನ್ನು ಹಾಕಿದ್ದು ಉಂಟಂತೆ. ಅಷ್ಟೇ ಅಲ್ಲದೆ ಇವರ ಸ್ನೇಹಿತರು ಇವರೊಂದಿಗೆ ಮಾತನಾಡಲು ಹಿಂದೆ ಮುಂದೆ ನೋಡುತ್ತಿದ್ದರು ಎಂದರೆ ನಂಬಲು ಸಾಧ್ಯವೇ? ಜೊತೆಗೆ ಇಂತಹ ಪಾತ್ರಗಳು ಇವರ ವೈಯಕ್ತಿಕ ಜೀವನಕ್ಕೂ ಒಂದಷ್ಟು ಪರಿಣಾಮ ಬೀರಿದ್ದು ಎಷ್ಟೋ ವರ್ಷಗಳ ಕಾಲ ಈಕೆಗೆ ಮದುವೆ ಪ್ರಸ್ತಾಪಗಳೇ ಬರಲಿಲ್ಲವಂತೆ!
ಪಾತ್ರದ ಕುರಿತು ಮಾತನಾಡುವಾಗ ಬೇಸರವಾಗುತ್ತಿತ್ತು
ತೆರೆ ಮೇಲೆ ಕಂಡಂತಹ ಸ್ವಭಾವವೇ ನಿಜವಾದ ಸ್ವಭಾವ ಎಂದು ತಿಳಿದ ಅದೆಷ್ಟೋ ಜನರು ಇವರಿಂದ ದೂರವೇ ಉಳಿದಿದ್ದಾರಂತೆ. ಅಷ್ಟೇ ಅಲ್ಲದೆ ಕೆಟ್ಟ ಕೆಟ್ಟ ಕಾಮೆಂಟ್‌ಗಳು ಸಿಕ್ಕಿದಾಗೆಲ್ಲ ಕೆಟ್ಟ ಕೆಟ್ಟದಾಗಿ ಪ್ರೇಕ್ಷಕರು ಮಾತನಾಡುವಾಗ ಈಕೆಗೆ ಮಾನಸಿಕವಾಗಿಯೂ ಬಹಳಷ್ಟು ಬೇಸರವಾಗುತ್ತಿತ್ತಂತೆ.
ಖಳನಾಯಕಿ ಪಾತ್ರ ಒತ್ತಡ ತಂದಿತ್ತು
ತಮ್ಮ ಮೊದಲ ಧಾರಾವಾಹಿ ಕಾದಂಬರಿಯಿಂದ ಹಿಡಿದು ಈಗಿನ 'ಲಕ್ಷ್ಮಿ ಬಾರಮ್ಮ' ಧಾರಾವಾಹಿವರೆಗೂ ಬಹಳಷ್ಟು ಖಳನಾಯಕಿ ಪಾತ್ರಗಳನ್ನು ಮಾಡಿಕೊಂಡು ಬಂದ ಇವರಿಗೆ ಇಂತಹ ಪಾತ್ರಗಳು ಮಾನಸಿಕವಾಗಿ ಬಹಳಷ್ಟು ಪರಿಣಾಮ ಉಂಟು ಮಾಡಿತ್ತಂತೆ. ಶೂಟಿಂಗ್ ಸಮಯದಲ್ಲಿ ಸಹ ನಟರ ಮೇಲೆ ಸಿಟ್ಟು ಮಾಡಿಕೊಂಡಿದ್ದು ಅಥವಾ ಮನೆಗೆ ತೆರಳಿದ ಮೇಲೆ ಮನೆಯವರ ಮೇಲೆ ಕೂಗಾಡಿದ್ದು ಕೂಡಾ ಇದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು ಅನಿಕಾ.

ಪಾತ್ರ ಒಪ್ಪಿಕೊಂಡಿದಕ್ಕೆ ಬೇಸರವಾಗುತ್ತಿತ್ತು
ವರ್ಷಗಳ ಕಾಲ ಇಂತಹ ಖಳನಾಯಕಿ, ಕೆಟ್ಟ ರೋಲ್‌ಗಳನ್ನೇ ಮಾಡಿಕೊಂಡು ಬಂದಾಗ ನಿಜ ಜೀವನಕ್ಕೆ ಅದು ಬೇರೆ ರೀತಿಯಲ್ಲಿ ಪರಿಣಾಮವಾಗುವುದು ಸತ್ಯ. ಇದರಿಂದ ನಟಿ ಅನಿಕ ಅವರಿಗೆ ಆಗಾಗ ತಲೆನೋವು ಉಂಟಾಗುತ್ತಿತ್ತಂತೆ. ಅದೆಷ್ಟೋ ಬಾರಿ ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಬೇಸರ ಮಾಡಿಕೊಂಡಿದ್ದು ಇದೆಯಂತೆ.
ಆದರೆ ಇತ್ತೀಚೆಗೆ ಕೆಟ್ಟ ಕೆಟ್ಟ ಕಾಮೆಂಟ್‌ಗಳು ಸಿಕ್ಕಾಗ ಪ್ರೇಕ್ಷಕರು ಇವರ ತೆರೆ ಮೇಲಿನ ಪಾತ್ರದ ಬಗ್ಗೆ ಬಯ್ಯುವುದು ಇತ್ಯಾದಿಗಳೆಲ್ಲ ಕಮ್ಮಿ ಆಗಿರುವುದರಿಂದ ನಟಿಗೂ ಸ್ವಲ್ಪ ನಿರಾಳವಾಗಿದೆಯಂತೆ. ಅಷ್ಟೇ ಅಲ್ಲದೆ ಮೊದಲಿಗಿಂತಲೂ ಇವಾಗಿನ ಖಳನಾಯಕರನ್ನು ಅಷ್ಟು ಕೆಟ್ಟದಾಗಿ ಧಾರಾವಾಹಿಗಳಲ್ಲಿ ತೋರಿಸುವುದಿಲ್ಲ ಎಂದು ನಟಿ ಅನಿಕಾ ಸಿಂಧ್ಯಾ ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











