ಈ ನಟಿಗೆ 'ಹ್ಯಾಪಿ' ಎಂದರೆ ಬಲು ಪ್ರೀತಿ: ಮನೆ ಮಗನಿಗಿಂತಲೂ ಹೆಚ್ಚು!
ಖಳನಾಯಕಿಯಾಗಿ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಅನಿಕಾ ಸಿಂಧ್ಯಾ ಪ್ರಾಣಿ ಪ್ರಿಯೆ ಎನ್ನುವ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಶ್ವಾನ ಪ್ರಿಯೆಯಾಗಿರುವ ಅನಿಕಾ ಶಿಟ್ಝು ಜಾತಿಯ ನಾಯಿಯೊಂದನ್ನು ಸಾಕಿದ್ದು ಅದಕ್ಕೆ 'ಹ್ಯಾಪಿ' ಎಂದು ಹೆಸರಿಟ್ಟಿದ್ದಾರೆ.
ಅಂತರಾಷ್ಟ್ರೀಯ ಸಾಕು ಪ್ರಾಣಿ ದಿನಾಚರಣೆ ಇತ್ತೀಚೆಗಷ್ಟೇ ನಡೆದಿದೆ. ಆ ದಿನ, ಶ್ವಾನ ಪ್ರೇಮಿ ಅನಿಕಾ ಸಿಂಧ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೊ ಭಾರಿ ವೈರಲ್ ಆಗಿದೆ.

3 ವರ್ಷಗಳ ಹಿಂದೆ ಅಂದರೆ, ಲಾಕ್ ಡೌನ್ ಸಮಯದಲ್ಲಿ ನಾಯಿ ಒಂದನ್ನು ತರಲು ನಿರ್ಧರಿಸಿದ್ದು ಒಂದು ಒಳ್ಳೆಯ ನಿರ್ಧಾರ ಎಂದು ಹೇಳುತ್ತಾರೆ ನಟಿ ಅನಿಕಾ ಸಿಂಧ್ಯಾ. ಜೊತೆಗೆ ತಮ್ಮ ಮನೆಯ ನಾಯಿ 'ಹ್ಯಾಪಿ' ತಮ್ಮ ಕುಟುಂಬದ ಸದಸ್ಯರಲ್ಲೊಂದು ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.
ನಾನು ಎಷ್ಟೇ ಕೆಲಸದ ಒತ್ತಡದಲ್ಲಿ ಇದ್ದರೂ ಮನೆಗೆ ಬಂದ ತಕ್ಷಣ ತನ್ನ ಎಲ್ಲಾ ಪ್ರೀತಿಯನ್ನು ಹೊತ್ತುಕೊಂಡು, ಬಾಲ ಅಲ್ಲಾಡಿಸಿಕೊಂಡು, ಮುದ್ದು ಮುಖದಿಂದ ಆಲಂಗಿಸುವ 'ಹ್ಯಾಪಿ'ಯನ್ನು ನೋಡಿದ ಕೂಡಲೇ ಎಲ್ಲ ಕಷ್ಟವೂ ಕೂಡಾ ಮರೆತು ಹೋಗುತ್ತದೆ ಎಂದು ಹೇಳಿದ್ದಾರೆ.

ಹ್ಯಾಪಿ ನಮಗೆ ಮನೆ ಮಗನಂತೆ
ಲಾಕ್ ಡೌನ್ ಸಮಯದಲ್ಲಿ ನಮ್ಮನೆಗೆ ಪ್ರವೇಶಿಸಿದ ನಮ್ಮ ಮುದ್ದಿನ 'ಹ್ಯಾಪಿ' ನಮ್ಮೆಲ್ಲರಿಗೂ ಹ್ಯಾಪಿನೆಸ್ ಅನ್ನೇ ತಂದುಕೊಟ್ಟಿದ್ದಾನೆ. ನಮ್ಮ ಮನೆಯಲ್ಲಿ ನಾನ್ನೊಬ್ಬಳಲ್ಲದೆ ನಮ್ಮ ಮನೆಯ ಎಲ್ಲಾ ಸದಸ್ಯರು ಅಷ್ಟೇ ಪ್ರೀತಿಂದ ನೋಡುತ್ತಾರೆ.
ನಮ್ಮ ಊರಿಗೂ ನಮ್ಮೊಂದಿಗೆ ಹ್ಯಾಪಿ ಪಯಣಿಸುತ್ತದೆ. ಅಲ್ಲಿಯೂ ಕೂಡ ನಮ್ಮ ಸಂಬಂಧಿಕರು 'ಹ್ಯಾಪಿ' ಜೊತೆ ಆಟವಾಡುವುದನ್ನು ಆನಂದಿಸುತ್ತಾರೆ. ನಮ್ಮ ಕುಟುಂಬದ ಎಲ್ಲರಿಗೂ ಅವನು ಒಳ್ಳೆಯ ಕಂಪನಿಯನ್, ತುಂಬಾ ಚಿಕ್ಕ ಮಗುವಿನಂತೆ ಎಂದಿದ್ದಾರೆ ಅನಿಕಾ ಸಿಂಧ್ಯಾ.
ಮನೆಯ ಎಲ್ಲರಿಗೂ ಹ್ಯಾಪಿ ಎಂದರೆ ಇಷ್ಟ
ನಾನು ಮಾತ್ರವಲ್ಲ, ನನ್ನ ಸಹೋದರ ಮತ್ತು ನಮ್ಮ ಪೋಷಕರು ಸಹ 'ಹ್ಯಾಪಿ' ಅನ್ನು ಸಮಾನವಾಗಿ ಪ್ರೀತಿಸುತ್ತಾರೆ. ನಾವೆಲ್ಲರೂ ಸಂತೋಷದಿಂದ ಅವನ ಜೊತೆ ಸಮಯ ಕಳೆಯಲು ಯಾವಾಗಲು ಹಾಪಾಹಾಪಿಸುತ್ತೇವೆ. ಅವನು ಎಲ್ಲರ ಗಮನ ಸೆಳೆಯುತ್ತಾನೆ. ನಮ್ಮ ದಿನಚರಿಯು ಹ್ಯಾಪಿಯ ದಿನಚರಿಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಅನಿಕಾ ಅಭಿಪ್ರಾಯ.
ಕೆಲವೊಮ್ಮೆ ಮನೆಯಲ್ಲಿ ನಾನು ಮತ್ತು ನನ್ನ ಸಹೋದರ 'ಹ್ಯಾಪಿ'ಯೊಂದಿಗೆ ಹೆಚ್ಚು ಸಮಯ ಕಳೆಯಲು ಸಾಕಷ್ಟು ಜಗಳವಾಡುತ್ತೇವೆ. ಇದು ಹೆಚ್ಚು-ಕಮ್ಮಿ ಸ್ಪರ್ಧೆಯಂತೆ ಎಂದು ತಮ್ಮ ಮನೆಯ ಮುದ್ದು ಮರಿ ಹ್ಯಾಪಿ ಬಗ್ಗೆ ಹೇಳುವ ಅನಿಕಾ ಸಿಂಧ್ಯಾ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಕವನ ಪಾತ್ರಕ್ಕೆ ಜೀವ ತುಂಬಿದ್ದರು.


Click it and Unblock the Notifications











