Actress Anika Sindhya: ಹೊಸ ಶೈಲಿಯ ಫೋಟೊಶೂಟ್‌ನಲ್ಲಿ ಮಿಂಚಿತ ಕಿರುತೆರೆ ನಟಿ ಅನಿಕಾ ಸಿಂಧ್ಯಾ!

By ಅನಿತಾ ಬನಾರಿ

ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಜನಪ್ರಿಯವಾಗಿ ಸಕ್ರಿಯವಾಗಿ ನಟಿಸುತ್ತಿರುವ ನಟಿ ಅನಿಕ ಸಿಂಧ್ಯಾ ಅವರು ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಇದ್ದಾರೆ. ಆಗಾಗ ತಮ್ಮ ಹೊಸ ಲುಕ್‌ನಿಂದ ಅಭಿಮಾನಿಗಳನ್ನು ಬೆರಗಾಗಿಸುತ್ತಿರುತ್ತಾರೆ.

ಇತ್ತೀಚೆಗೆ ಒಂದು ಬಿಳಿ ಲೆಹಂಗ, ಮೈತುಂಬ ಒಡವೆಯನ್ನು ಹಾಕಿಕೊಂಡಿರುವ ಪೋಸ್ಟ್ ಒಂದನ್ನು ಹಾಕಿರುವ ನಟಿ ಅನಿಕಾ ಸಿಂಧ್ಯಾ ಅವರು ಅಭಿಮಾನಿಗಳಿಗಂತೂ ಬಹಳಷ್ಟು ಖುಷಿ ಕೊಟ್ಟಿದ್ದಾರೆ. ಮದುವೆ ಆಗಬೇಕೆಂದಿರುವ ಹಲವಾರು ಮದುಮಕ್ಕಳಿಗೆ ಇದೊಂದು ಹೊಸ ಫ್ಯಾಷನ್ ಟ್ರೆಂಡ್ ಆಗಿ ಪರಿಣಮಿಸಲೂಬಹುದು.

Actress Anika Sindhya who surprised her fans with her new look!

ಮುಖಕ್ಕೆ ಹೋಲುವಂತಹ ಮೇಕಪ್, ತುಸು ಹೆವಿಯಾಗಿಯೇ ಕಾಣುವ ಬಿಳಿಯಾದ ಲೆಹೆಂಗಾ, ಕಸೂತಿ ಮಾಡಿರುವ ಬಿಳಿ ರವಿಕೆಗೆ ಬಿಳಿಯಾದ ಉದ್ದ ಪರದೆಯನ್ನು ಹಾಕಿಕೊಂಡಿರುವ ನಟಿ ಅನಿಕಾ ಸಿಂಧ್ಯಾ ಅವರು ಮೈತುಂಬಾ ವಜ್ರದ ಜ್ಯುವೆಲ್ಲರಿಗಳನ್ನು ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ರೀತಿ ಆಗಾಗ ಬೇರೆ ಬೇರೆ ಫ್ಯಾಷನ್ ಟ್ರೆಂಡ್‌ನಲ್ಲಿ ಕಾಣಿಸಿಕೊಳ್ಳುವ ಅನಿಕಾ ಸಿಂಧ್ಯಾ ಅವರು ಈ ಹೊಸ ರೀತಿಯ ಸಾಂಪ್ರದಾಯಿಕವಾಗಿ ಕಾಣುವ ಉಡುಗೆಯ ಪೋಸ್ಟ್‌ಗೆ ಬಹಳಷ್ಟು ಮೆಚ್ಚುಗೆಯನ್ನು ಪಡೆದಿದ್ದಾರೆ.

ಅಂದ ಹಾಗೆ, ನಟಿ ಅನಿಕಾ ಸಿಂಧ್ಯಾ ಅವರು ಸದ್ಯಕ್ಕೆ 'ನೀನಾದೆ ನಾ' ಎಂಬ ಕನ್ನಡ ಧಾರಾವಾಹಿಯಲ್ಲಿ ಚೈತ್ರಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧಾರಾವಾಹಿಯ ಮುಖ್ಯ ಪಾತ್ರಧಾರಿಯ ಅತ್ತಿಗೆಯ ಪಾತ್ರವನ್ನು ಚೆನ್ನಾಗಿ ನಿರ್ವಹಿಸುತ್ತಿರುವ ಇವರು ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

Actress Anika Sindhya who surprised her fans with her new look!

ಅನಿಕಾ ಸಿಂಧ್ಯಾ ಅವರು ಕಿರುತೆರೆಗೆ ಅಭಿನಯಕ್ಕೆ ಬಂದು ಈಗಾಗಲೇ ಎರಡು ದಶಕಗಳಾಗಿದ್ದು, ಆಕೆ ಮೊದಲಿಗೆ 'ಕಾದಂಬರಿ' ಎಂಬ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಹಲವಾರು ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳಲ್ಲಿ ಹೆಸರುವಾಸಿಯಾಗಿದ್ದ ಅನಿಕಾ ಇಂದಿಗೂ ಅಭಿನಯದಲ್ಲಿ ಟ್ರೆಂಡಿಂಗ್ ನಲ್ಲಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

More from Filmibeat

English summary
Actress Anika Sindhya who surprised with her new photoshoots.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X