ಮತ್ತೊಂದು ಧಾರಾವಾಹಿಯಲ್ಲಿ ಅಭಿನಯಿಸಲಿರುವ ನಟಿ ಅಂಜಲಿ ಸುಧಾಕರ್
ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣ ಆಚಾರಿ ಪತ್ನಿ ಹಾಗೂ ರಾಮಚಾರಿ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ಅಂಜಲಿ ಯಾರೆಂದು ಹಲವರಿಗೆ ತಿಳಿದಿಲ್ಲ. ಈಕೆ ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.
ಬರೋಬ್ಬರಿ 21 ವರ್ಷಗಳ ಕಾಲ ದೊಡ್ಡ ಬ್ರೇಕ್ ಪಡೆದಿದ್ದ ನಟಿ ಅಂಜಲಿ ಪುನಃ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಕಮ್ ಬ್ಯಾಕ್ ಮಾಡಿದರು.

ಎಲ್ಲಾ ಧಾರಾವಾಹಿಗಳಲ್ಲೂ ಕೂಡ ಅಮ್ಮನ ಪಾತ್ರ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅಂಜಲಿ ಇನ್ಮುಂದೆ ಮತ್ತೊಂದು ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
80ರ ದಶಕದ ಬೋಲ್ಡ್ ನಟಿ
ನಟಿ ಅಂಜಲಿ ಸುಧಾಕರ್ 'ಅನಂತನ ಅವಾಂತರ','ಅವನೇ ನನ್ನ ಗಂಡ', 'ತರ್ಲೆ ನನ್ ಮಗ', ಗಣೇಶನ ಮದುವೆ, ನಾನು ನಕ್ಕರೆ ಹಾಲು ಸಕ್ಕರೆ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದವರು. 1988ರಲ್ಲಿ ಕಾಶಿನಾಥ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಬಿಗ್ ಸ್ಟಾರ್‌ಗಳ ಜೊತೆಗೆ ಮಿಂಚಿದ್ದರು. ಬೋಲ್ಡ್ ಪಾತ್ರಗಳ ಮೂಲಕ ಸುದ್ದಿಯಲ್ಲಿದ್ದ ನಟಿ ದಿಢೀರನೇ ಸಿನಿಮಾಗಳಿಂದ ಕಣ್ಮರೆಯಾಗಿದ್ದರು. ಇದ್ದಕ್ಕಿದ್ದ ಹಾಗೇ ಪರ್ಸನಲ್ ಲೈಫ್‌ಗಾಗಿ ವಿದೇಶಕ್ಕೆ ಹಾರಿದ್ದ ನಟಿ ಮತ್ತೆ ವಾಪಾಸ್ಸಾಗಿದ್ದು, 21 ವರ್ಷಗಳ ಬಳಿಕ.
ಸಿನಿಮಾಗಳಲ್ಲಿ ನಟಿಸೋದು ಯಾವಾಗ?
ಭಾರತಕ್ಕೆ ಬಂದ ಮೇಲೆ ಮತ್ತೆ ನಟನೆಯತ್ತ ಒಲವು ತೋರಿದರು. ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮತ್ತೆ ಸಿನಿಮಾಗೆ ಯಾವಾಗ ಬರುತ್ತಾರೆ ಎಂಬ ಕುತೂಹಲದಲ್ಲಿಯೇ ಸಿನಿಪ್ರಿಯರು ಕಾಯುತ್ತಿದ್ದಾರೆ. ಈಗಲೂ ಅಂಜಲಿ ಮಾಡ್ರನ್ ಉಡುಪಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.

ಮತ್ತೆ ಕಿರುತೆರೆ ಪಯಣ ಶುರು
ಉದಯ ಟಿವಿಯ 'ನೇತ್ರಾವತಿ' ಮತ್ತು ಕಲರ್ಸ್ ಕನ್ನಡ ವಾಹಿನಿಯ 'ರಾಮಚಾರಿ' ಧಾರಾವಾಹಿಯಲ್ಲಿ ಸದ್ಯ ಅಂಜಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಈಗ ಮತ್ತೊಂದು ಧಾರಾವಾಹಿಗೂ ಬಣ್ಣ ಹಚ್ಚಿದ್ದು, ರೀಲ್ಸ್ ಒಂದರಲ್ಲಿ ಈ ಸತ್ಯ ಬಯಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಪ್ರೋಮೋವನ್ನು ಎಲ್ಲರೂ ನೋಡೇ ಇರುತ್ತಿರಾ. ಇದರಲ್ಲಿ ನಟಿ ಮಾನಸ ಮನೋಹರ್ ಕೂಡ ನಟಿಸುತ್ತಿದ್ದಾರೆ. ಇದೀಗ ಮಾನಸ ಮನೋಹರ್, ಶ್ವೇತ ಇರುವ ರೀಲ್ಸ್ ಒಂದರಲ್ಲಿ ನಟಿ ಅಂಜಲಿ ಕೂಡ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಂಜಲಿ ಕೂಡ ಲಕ್ಷ್ಮೀ ನಿವಾಸ ಧಾರಾವಾಹಿ ತಂಡದಲ್ಲಿ ಒಬ್ಬರು ಎಂಬುದು ಕನ್ಫರ್ಮ್ ಆಗಿದೆ.
ಹೊಸ ಧಾರಾವಾಹಿಯಲ್ಲಿ ನಟನೆ
'ಲಕ್ಷ್ಮೀ ನಿವಾಸ' ಧಾರಾವಾಹಿಯ ಕಥೆಯು ತುಂಬು ಕುಟುಂಬದ್ದಾಗಿದೆ. ಶ್ರೀನಿವಾಸ್ ಹಾಗೂ ಆತನ ಪತ್ನಿ ಲಕ್ಷ್ಮೀ ಇಬ್ಬರು ಪ್ರಮುಖ ಪಾತ್ರಗಳಾಗಿವೆ. ಲಕ್ಷ್ಮೀಗೆ ತನ್ನ ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂಬುದೇ ದೊಡ್ಡ ಕನಸು. ಗಂಡನಿಗೆ ಮನೆ ಕಟ್ಟುವ ಕನಸು. ಲಕ್ಷ್ಮೀ ಪಾತ್ರಕ್ಕೆ ನಟಿ ಶ್ವೇತಾ ಬಣ್ಣ ಹಚ್ಚಿದ್ದಾರೆ. ಧಾರಾವಾಹಿಯ ಪ್ರೋಮೋದಲ್ಲಿ ವಾಹಿನಿಯೂ ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು ಎಂದು ಹಂಬಲಿಸುವ ಪ್ರತೀ ತುಂಬು ಕುಟುಂಬದ ಕಥೆ ಲಕ್ಷ್ಮೀ ನಿವಾಸ ಎಂಬ ಟೈಟಲ್ ಅನ್ನು ನೀಡಿದೆ.
ಧಾರಾವಾಹಿಯಲ್ಲಿ ಅಂಜಲಿ ಸುಧಾಕರ್
ಹಿರಿಯ ನಟಿ ಶ್ವೇತಾ, ದಿಶಾ ಮದನ್, ದಿವ್ಯಶ್ರೀ ಗ್ರಾಮ, ಚಂದನಾ ಅನಂತಕೃಷ್ಣ, ಮಾನಸ ಮನೋಹರ್, ಅಂಜಲಿ ಸುಧಾಕರ್ ಸೇರಿದಂತೆ ಹಲವು ನಟ-ನಟಿಯರು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಹಾಗಾದರೆ, ಯಾವ ಧಾರಾವಾಹಿ ಮುಗಿಯುತ್ತೆ ಅನ್ನೋ ಕುತೂಹಲ ವೀಕ್ಷಕರಿಗೆ ಹೆಚ್ಚಾಗಿದೆ.


Click it and Unblock the Notifications











