Ankita Amar: ಕ್ರಿಕೆಟ್ ನಿರೂಪಕಿಯಾಗಿ ಮೋಡಿ ಮಾಡ್ತಿರೋ ಕನ್ನಡದ ಈ ಕಿರುತೆರೆ ನಟಿ ಯಾರು ಗೊತ್ತೇ?

By ಅನಿತಾ ಬನಾರಿ

ನಟಿ, ನಿರೂಪಕಿ, ಗಾಯಕಿ ನೃತ್ಯಗಾರ್ತಿ, ಮಲ್ಟಿ ಟ್ಯಾಲೆಂಟೆಡ್ ಕಲಾವಿದೆ ಅಂಕಿತ ಅಮರ್ ಕ್ರಿಕೆಟ್ ನಿರೂಪಕಿಯಾಗಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಭಾರತಕ್ಕೂ ಕ್ರಿಕೆಟ್‌ಗೂ ಅವಿನಾಭಾವ ಸಂಬಂಧವಿರುವುದು ನಿಜ. ಆರ್‌ಸಿಬಿ, ಸಿಎಸ್‌ಕೆ ಈ ರೀತಿ ವಿಕೆಟ್ ಟೀಮ್‌ಗಳು ಜಟಾಪಟಿಗಳು, ನೆಚ್ಚಿನ ಟೀಮ್‌ಗಳು ಮ್ಯಾಚ್ ಗೆಲ್ಲುವಾಗಿನ ಸಂತೋಷ, ವರ್ಲ್ಡ್ ಕಪ್ ಗೆಲ್ಲಲುವಾಗಿನ ಜೋಷ್, ಅದನ್ನೇ ವಿಷಯವಾಗಿಟ್ಟುಕೊಂಡು ಮುಂಬರುವ ಕಂಟೆಂಟ್ ಕ್ರಿಯೇಟರ್ಸ್, ಮೀಮ್ಸ್ ಹೀಗೆ ಕ್ರಿಕೆಟ್ ಭಾರತೀಯರ ನಾಡಿ ಮಿಡಿತದಲ್ಲೇ ಬೆರೆತು ಹೋಗಿದೆ.

ಹೀಗಿರುವಾಗ ಜಿಯೋ ಸಿನಿಮಾದವರು ತಮ್ಮ ಆ್ಯಪ್‌ನಲ್ಲಿ ಕ್ರಿಕೆಟ್ ಲೈವ್ ಶೋ ಪ್ರಸಾರ ಮಾಡುತ್ತಾರೆ. ಜಿಯೋ ಸಿನಿಮಾ ಆಪ್‌ನಲ್ಲಿ ಪ್ರಸಾರವಾಗುವ ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ ಕನ್ನಡ ಕಾಮೆಂಟ್ರಿಯನ್ನು ನಟಿ ಅಂಕಿತ ಅಮರ್ ನಡೆಸಿಕೊಂಡು ಬಂದಿದ್ದಾರೆ. 'ಜೈ ಭುವನೇಶ್ವರಿ' ಎಂದು ಆರಂಭಿಸುವ ಈ ಕಾಮೆಂಟರಿ ಪಯಣಕ್ಕೆ ಇದೀಗ ಸುದೀರ್ಘ ಒಂದು ವರ್ಷ ಕಳೆದಿದ್ದು, ಈ ವಿಚಾರವಾಗಿ ನಟಿ ಅಂಕಿತ ಅಮರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕನ್ನಡ ನಿರೂಪಣೆಯ ಕ್ರಿಕೆಟ್ ಲೈವ್ ಶೋ ಬಹಳ ದೊಡ್ಡ ವೀಕ್ಷಣೆಯನ್ನು ಪಡೆಯುತ್ತಿದೆ.

Actress Ankita Amar turns charming as a cricket sports anchor

ಇತ್ತೀಚೆಗಷ್ಟೇ ಹೆಣ್ಣು ಮಕ್ಕಳ ಆರ್‌ಸಿಬಿ ಟೀಮ್ ಮ್ಯಾಚ್ ವಿನ್ ಆದಾಗ, "ಆರ್‌ಸಿಬಿ ಅಭಿಮಾನಿಯಾಗಿ ಇಂತಹದ್ದೊಂದು ಶೋಗಾಗಿ ಕಾಯುತ್ತಿದ್ದೆ" ಎಂದು ಖುಷಿಯಿಂದ ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ನಟಿ ಅಂಕಿತ ಅಮರ್ ಶೇರ್ ಮಾಡಿಕೊಂಡಿದ್ದರು. ಹೀಗೆ ರಿಯಾಲಿಟಿ ಶೋಗಳ ನಿರೂಪಣೆಯಿಂದ, ಕ್ರಿಕೆಟ್ ಲೈವ್ ಕಾಮೆಂಟರಿವರೆಗೂ ನಟಿ ಅಂಕಿತಾ ಅಮರ್ ಅವರದ್ದು ಸುದೀರ್ಘ ಪಯಣ.

ಬಾಲನಟಿಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಅಂಕಿತಾ ಅಮರ್ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಸುಗುಣ ಪಾತ್ರದಲ್ಲಿ ಅಭಿನಯಿಸಿದ್ದರು. ತದ ನಂತರ ಓದಿನ ಸಲುವಾಗಿ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದ ಅಂಕಿತಾ ಮುಂದೆ 'ನಮ್ಮನೆ ಯುವರಾಣಿ' ಧಾರಾವಾಹಿಯ ಮೀರಾಳಾಗಿ ಕಿರುತೆರೆಗೆ ಮರಳಿದರು. ತೆಲುಗಿನ 'ಶ್ರೀಮತಿ ಶ್ರೀನಿವಾಸ್' ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡಿದ ಅಂಕಿತಾ ಅಮರ್ 'ಅಬ ಜಬ ದಬ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಹಾರಿದರು.

Actress Ankita Amar turns charming as a cricket sports anchor

ಇನ್ನು 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದಲ್ಲಿಯೂ ಈಕೆ ನಾಯಕಿಯಾಗಿ ನಟಿಸಿದ್ದು, ಆ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದರ ಜೊತೆಗೆ 'ಜಸ್ಟ್ ಮ್ಯಾರೀಡ್' ಸಿನಿಮಾದಲ್ಲಿಯೂ ಈಕೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ‌.

More from Filmibeat

English summary
TV actress Ankita Amar said that this commentary journey which started as Jai Bhuvaneshwari has been a long year:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X