ಕಿರುತೆರೆಯಿಂದ ಕಾಣೆಯಾಗಿರುವ ನಟಿ ಅನು ಜನಾರ್ಧನ್; ಸ್ನೇಹಿತರೊಂದಿಗೆ ಹೋಗಿದ್ದು ಎಲ್ಲಿಗೆ?
'ಸತ್ಯ' ಧಾರಾವಾಹಿಯಲ್ಲಿ ನಟಿಸಿದ್ದ ಅನು ಜನಾರ್ಧನ್ ಅವರು ಸದ್ಯ ಕಿರುತೆರೆಯಿಂದ ಮಾಯವಾಗಿದ್ದಾರೆ. ಮೂಲತಃ ಸಕ್ಕರೆ ನಾಡು ಮಂಡ್ಯದವರಾಗಿದ್ದು. ತೆರೆ ಮೇಲೆ ತುಂಬಾ ಸ್ಟೈಲ್ ಆಗಿ ಮಾತನಾಡುವ ಅನು ಜನಾರ್ಧನ್, ಸ್ಟೈಲ್ ಐಕಾನ್ ಕೂಡ ಹೌದು.
ಚಿಕ್ಕವರಿದ್ದಾಗಿನಿಂದಲೂ ಡ್ಯಾನ್ಸರ್ ಆಗಬೇಕೆಂದು ಕನಸು ಕಾಣುತ್ತಿದ್ದ ಇವರು, ನಟನೆಗೆ ಬರುವ ಮುನ್ನ ಅನು ಜನಾರ್ಧನ್ ಪೂಮಾ ಸ್ಪೋರ್ಟ್ಸ್ ಕಂಪನಿಯಲ್ಲಿ ಹೆಚ್ ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಗ ಅನು ಗಿನ್ನಿಸ್ ರೆಕಾರ್ಡ್ ಕೂಡ ಮಾಡಿದ್ದಾರೆ. ಅದೇನೆಂದರೆ, ಮಹಿಳೆಯರಿಗಾಗಿ ಡುಯು ಕ್ಯಾಂಪೇನ್ ಮಾಡಿದ್ದರು. ಇದಕ್ಕೆ ಅನುಶ್ರೀ ಜನಾರ್ಧನ್ ಅವರಿಗೆ ಗಿನ್ನಿಸ್ ಅವಾರ್ಡ್ ಅನ್ನು ತಮ್ಮದಾಗಿಸಿಕೊಂಡಿದ್ದರು.
ಫಿಟ್ ಆಂಡ್ ಸ್ಟೈಲಿಷ್ ಬೆಡಗಿ
ಅನು ಜನಾರ್ಧನ್ ಅವರು ಸದಾ ಫಿಟ್ ಆಗಿರಲು ಬಯಸುತ್ತಾರೆ. ಅನು ಜನಾರ್ಧನ್ ಅನಗತ್ಯ ಕ್ಯಾಲರಿ ಇರುವ ಆಹಾರಗಳಿಗೆ ಗುಡ್ ಬೈ ಹೇಳಿ ಹದಿನೈದು ವರ್ಷ ಆಗಿದ್ಯಂತೆ. ಕಟ್ಟು ನಿಟ್ಟಾಗಿ ಡಯೆಟ್ ಮಾಡುವ ಅನು ಜನಾರ್ಧನ್ ಅವರು ಡ್ಯಾನ್ಸ್ ಮಾಡಿ ಫಿಟ್ನೆಸ್ ಅನ್ನು ಕಾಪಾಡಿಕೊಂಡಿದ್ದಾರೆ. ನೋಡಲು ಬಳುಕುವ ಬಳ್ಳಿಯಂತೆ ಕಾಣುವ ಅನು ಸ್ಟೈಲಿಷ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಮಾರ್ಡನ್ ವಿಲನ್ ನಟಿಯರ ಪೈಕಿ ಫೇಮಸ್ ಎಂದರೆ, ಅದು ಅನು ಜನಾರ್ಧನ್. ಅವರ ಫ್ಯಾಷನ್, ಅವರ ಸ್ಟೈಲ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಸೀರೆ ಕಲೆಕ್ಷನ್‌ನಲ್ಲೂ ಅನು ಜನಾರ್ಧನ್ ಬಹಳ ಚ್ಯೂಸಿ ಆಗಿರುತ್ತಾರೆ. ಫ್ಯಾಷನ್ ವಿಚಾರಕ್ಕೆ ಬಂದರೆ ಅವರನ್ನು ಫಾಲೋ ಮಾಡಲೇಬೇಕು ಎನ್ನುವಷ್ಟು ಕ್ಯೂಟ್ ಆಗಿ ಡ್ರೆಸ್, ಮೇಕಪ್ ಮಾಡಿಕೊಳ್ಳುತ್ತಾರೆ.
ಕೀರ್ತನಾ ಪಾತ್ರದಿಂದ ಹೊರ ಬಂದ ಅನು
ಅನು ಜನಾರ್ಧನ್ ಅವರು ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದಾರೆ. 'ಮಹಾಕಾಳಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಅನು 'ಬ್ರಹ್ಮಗಂಟು', 'ಜೈ ಹನುಮಾನ್','ಶ್ರೀವಿಷ್ಣು ದಶಾವತಾರ', 'ರಂಗನಾಯಕಿ', 'ಸತ್ಯ' ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ರಂಗನಾಯಕಿಯಲ್ಲಿ ಖಡಕ್ ವಿಲನ್ ಲುಕ್‌ನಲ್ಲಿ ಕಾಣಿಸಿಕೊಂಡ ಅನು ಪೌರಾಣಿಕ ಹಾಗೂ ಸಾಮಾಜಿಕ ನಟನೆ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. 'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಇದ್ದಕ್ಕಿದ್ದ ಹಾಗೆಯೇ ಧಾರಾವಾಹಿಯಿಂದ ಹೊರ ನಡೆದರು. ಆದರೆ, ಇದಕ್ಕೆ ಕಾರಣವನ್ನು ಕೊಡಲಿಲ್ಲ.
ಪ್ರವಾಸದಲ್ಲಿ ಸಕ್ರಿಯ
ಆದರೆ, ಸೋಶಿಯಲ್ ಮೀಡಿಯಾದಿಂದ ಮಾತ್ರ ಕೊಂಚವೂ ದೂರ ಸರಿಯದೇ, ಅಭಿಮಾನಿಗಳಿಗೆ ನಿತ್ಯ ಒಂದಲ್ಲ ಒಂದು ರೀಲ್ಸ್, ಫೋಟೋ ಅಥವಾ ಸ್ಟೋರಿಗಳನ್ನು ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ಅನುಗೆ ಕೊಂಚ ಬಿಡುವು ಸಿಕ್ಕರೂ ಸಾಕು ಅಡ್ವೆಂಚರ್ ಮಾಡಲು ಹೊರಟು ಬಿಡುತ್ತಾರೆ. ಟ್ರಾವೆಲ್ ಮಾಡುವುದನ್ನು ಹೆಚ್ಚು ಇಷ್ಟಪಡುವ ಅನು ಆಗಾಗ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಕಳೆದ ವರ್ಷವೂ ಕೂಡ ಸ್ನೇಹಿತರ ಜೊತೆ ಗೋವಾ ಟ್ರಿಪ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.
ಟ್ರಪ್ ಮೂಡ್‌ನಲ್ಲಿ ಅನು ಜನಾರ್ಧನ್
ಈಗ ಜೂನ್ ತಿಂಗಳಿನಿಂದ ಬಿಡುವಿಲ್ಲದಂತೆ ಉತ್ತರ ಭಾರತ ಪ್ರವಾಸದಲ್ಲಿ ಅನು ಅವರು ಬ್ಯುಸಿಯಾಗಿದ್ದಾರೆ. ಹಿಮಾಲಯದ ತಪ್ಪಲುಗಳಲ್ಲಿ ಎಂಜಾಯ್ ಮಾಡಿದ ಅನು ಅವರು ಸಾಕಷ್ಟು ಫೋಟೋಸ್ ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಲೇ ಲಡಾಕ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷವೂ ಅನು ಅವರು ಗೋವಾ ಟ್ರಿಪ್‌ಗೆ ತೆರಳಿದ್ದಾರೆ. ಇವರೂ ಸೇರಿದಂತೆ ಒಟ್ಟು 11 ಜನರಿರುವ ಹುಡುಗಿಯರ ತಂಡ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಬೀಚ್‌ನಲ್ಲಿ ಎಂಜಾಯ್ ಮಾಡಿದ್ದಾರೆ. ಇದೆಲ್ಲದರ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದು, ಅನು ಅವರು ಸಿಕ್ಕಾಪಟ್ಟೆ ಎಂಜಾಯ್ ಮೂಡ್‌ನಲ್ಲಿ ಇದ್ದಾರೆ.


Click it and Unblock the Notifications











