'ಸತ್ಯ' ಧಾರಾವಾಹಿಯಿಂದ ಹೊರಬಂದ 'ರಂಗನಾಯಕಿ'; ಅನು ಜನಾರ್ಧನ್ ಮುಂದಿನ ನಡೆಯೇನು?

By ಅನಿತಾ ಬನಾರಿ

ಅನು ಜನಾರ್ಧನ್.. ಕಿರುತೆರೆ ವೀಕ್ಷಕರಿಗೆ ಅದರಲ್ಲೂ ಜೀ ಕನ್ನಡ ವಾಹಿನಿಯ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಸತ್ಯ'ದಲ್ಲಿ ಕೀರ್ತನಾ ಆಗಿ ನಟಿಸಿ ಸೈ ಎನಿಸಿಕೊಂಡವರು. ಅದ್ಭುತ ತಿರುವುಗಳೊಂದಿಗೆ ವೀಕ್ಷಕರನ್ನು ರಂಜಿಸುತ್ತಿರುವ 'ಸತ್ಯ'ದಲ್ಲಿ ನಾಯಕ ಕಾರ್ತಿಕ್ ಅಕ್ಕ ಕೀರ್ತನಾ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದ ನಟಿ ಅನು ಜನಾರ್ದನ್. ಇದೂವರೆಗೂ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.

ಖಳನಾಯಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಅನು ಜನಾರ್ಧನ್ ಇದೀಗ ಕೀರ್ತನಾ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಕಾರಣಾಂತರಗಳಿಂದ ತನ್ನ ಪಾತ್ರದಿಂದ ಅನು ಜನಾರ್ಧನ್ ಹೊರಬಂದಿದ್ದಾರೆ . ತಮ್ಮ ಸಹಜ ಅಭಿನಯಕ್ಕಷ್ಟೇ ಅಲ್ಲದೆ ವಿಶೇಷವಾದ ಸ್ಟೈಲ್ ಮೂಲಕ ಅನು ಜನಾರ್ಧನ್ ಹೆಸರು ವಾಸಿಯಾಗಿದ್ದರು. ಇದೀಗ ಈಕೆ ಧಾರಾವಾಹಿಯಿಂದ ಹೊರಬಂದಿದ್ದು ಕಿರುತೆರೆ ವೀಕ್ಷಕರಿಗೆ ಬೇಸರ ತಂದಿದೆ.

 Actress Anu Janardhan who came out of Zee Kannada Sathya serial

ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ನಟಿ ಅನು ಜನಾರ್ದನ್ ತಾವು ಧಾರಾವಾಹಿಯಿಂದ ಹೊರಬಂದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. "ಕೆಲ ವೈಯಕ್ತಿಕ ಕಾರಣಗಳಿಂದ ನಾನು ಈ ಪಾತ್ರದಿಂದ ಹೊರ ಬರುತ್ತಿದ್ದೇನೆ. ಆದರೂ ಎಂದಿಗೂ ನಿಮ್ಮ ಸಂಪರ್ಕದಲ್ಲಿ ಇರುತ್ತೇನೆ. ಹೆಚ್ಚೆಚ್ಚು ಸ್ಟೈಲಿಂಗ್ ಟಿಪ್ಸ್‌ಗಳೊಂದಿಗೆ ನಿಮ್ಮ ಮುಂದೆ ಬರುತ್ತೇನೆ" ಎಂದು ಆಕೆ ಬರೆದುಕೊಂಡಿದ್ದರು.

ಈ ವಿಚಾರ ತಿಳಿದು ಅನು ಜನಾರ್ಧನ್ ಫಾಲೋವರ್ಸ್ ಹಾಗೂ ಪ್ರೇಕ್ಷಕರು ಬಹಳಷ್ಟು ಬೇಸರ ವ್ಯಕ್ತಪಡಿಸಿದ್ದಾರೆ. ಒಂದೆಡೆ ನಟಿ ಅನು ಜನಾರ್ಧನ್ ಅವರನ್ನು ಸದ್ಯಕ್ಕೆ ಟಿವಿಯಲ್ಲಿ ನೋಡಲಾಗುವುದಿಲ್ಲ ಎಂಬ ಬೇಸರ ಕೆಲವರಿಗಿದ್ದರೆ, ಇನ್ನೊಂದೆಡೆ ಆಕೆಯ ವೈಯಕ್ತಿಕ ಸಮಸ್ಯೆಗಳೇನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

 Actress Anu Janardhan who came out of Zee Kannada Sathya serial

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಮಹಾಕಾಳಿ'ಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಅನು ಜನಾರ್ಧನ್ ನಂತರ 'ಬ್ರಹ್ಮಗಂಟು' ಧಾರಾವಾಹಿಯಲ್ಲಿಯೂ ಅಭಿನಯಿಸಿದರು. ಮುಂದೆ ಪೌರಾಣಿಕ ಧಾರಾವಾಹಿ 'ಜೈ ಹನುಮಾನ್' ಮತ್ತು 'ಶ್ರೀ ವಿಷ್ಣು ದಶಾವತಾರ'ದಲ್ಲಿ ನಟಿಸಿದ ಅನು ಜನಾರ್ಧನ್ ಅವರಿಗೆ ಜನಪ್ರಿಯತೆ ನೀಡಿದ್ದು 'ರಂಗನಾಯಕಿ' ಧಾರಾವಾಹಿ.

'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿ ವಿಭಾ ಆಗಿ ನಟಿಸಿದ್ದ ಈಕೆಗೆ ಆ ಧಾರಾವಾಹಿ ಕೊಟ್ಟ ನೇಮ್, ಫೇಮ್ ಅಷ್ಟಿಷ್ಟಲ್ಲ. 'ರಂಗನಾಯಕಿ'ಯ ವಿಭಾ ಎಂದೇ ಈಗಲೂ ಗುರುತಿಸಿಕೊಂಡಿದ್ದಾರೆ. 'ರಂಗನಾಯಕಿ' ಧಾರಾವಾಹಿ ಬಳಿಕ ನಟಿ ಅನು ಜನಾರ್ಧನ್ 'ಸತ್ಯ'ದಲ್ಲಿ ನಟಿಸಿದ್ದರು. ಖಡಕ್ ಕೀರ್ತನಾ ಆಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಅನು ಜನಾರ್ಧನ್ ಈಗ ಧಾರಾವಾಹಿಯಿಂದ ಹೊರಬಂದಿದ್ದು ಕೊಂಚ ಬೇಸರ ತಂದಿದೆ. ಆದರೂ, ಆಕೆ ಬೇರೆ ಧಾರಾವಾಹಿಯಲ್ಲಿ ನಟಿಸಲಿದ್ದಾರಾ ಎಂಬ ಕುತೂಹಲಕ್ಕೆ ಮಾತ್ರ ಬ್ರೇಕ್ ಸಿಗಬೇಕಿದೆ.

More from Filmibeat

English summary
Actress Anu Janardhan said goodbye to the role of Keertana in Sathya Serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X