Anu Prabhakar: ದಸರಾ ಸಂಭ್ರಮದಲ್ಲಿ ದೇವಿ ಅವತಾರವೆತ್ತಿದೆ ಅನು ಪ್ರಭಾಕರ್.. ಪಾತ್ರದ ಬಗ್ಗೆ ಹೇಳಿದ್ದೇನು?
ನಾಡಹಬ್ಬ ದಸರಾ ಬಹಳ ಸಂಭ್ರಮದಿಂದ ಆಚರಣೆಯಾಗಿದೆ. ಈ ಸಂದರ್ಭದಲ್ಲಿ ಹಲವಾರು ಧಾರಾವಾಹಿಗಳು ತಮ್ಮ ಕಥೆಯಲ್ಲಿಯೂ ಹಬ್ಬವನ್ನು ಆಚರಿಸಿದ್ದಾರೆ. ಅಂತೆಯೇ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಧಾರಾವಾಹಿಯಲ್ಲಿಯೂ ವಿಭಿನ್ನವಾಗಿ ದಸರಾ ಹಬ್ಬದ ಸಂಭ್ರಮಾಚಾರಣೆ ನಡೆದಿದೆ. ಈ ಪ್ರಯುಕ್ತ ಪಾರ್ವತಿ ದೇವಿಯ ವೇಷ ಧರಿಸಿ ನಟಿ ಅನು ಪ್ರಭಾಕರ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ದಸರಾ ಹಬ್ಬ ಬಂತೆಂದರೆ ಎಲ್ಲೆಡೆಯೂ ಖುಷಿ ಹಾಗೂ ಸಡಗರ ತುಂಬುತ್ತದೆ. ಇದರ ಜೊತೆಗೆ ಅನುಪ್ರಭಾಕರ್‌ಗೆ ಈ ಪಾತ್ರ ಸಿಕ್ಕಿದ್ದು ಬಹಳ ಖುಷಿಯ ವಿಚಾರವಂತೆ. ಆಕೆ ಮನಸಾರೆ ದೇವಿ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆಯಂತೆ. ಆಕೆ ಈ ಪಾತ್ರವನ್ನು ಮಾಡಲು ಮುಖ್ಯವಾಗಿ ಎರಡು ಕಾರಣಗಳಿವೆಯಂತೆ. ಮೊದಲನೆಯದು ಇದು ದೇವಿಯ ಪಾತ್ರ ಅವರ ಮನಸ್ಸಿಗೆ ಬಹಳ ಹತ್ತಿರವಾಗಿರುವಂತದ್ದು. ಇನ್ನೊಂದು ಈ ಧಾರಾವಾಹಿಯ ನಿರ್ದೇಶಕ ಚೈತನ್ಯ ಕೆ.ಎಂ ನಟಿ ಅನುಪ್ರಭಾಕರ್ ಅವರ ಸ್ನೇಹಿತರಂತೆ.

ಅಂದ ಹಾಗೇ ಅನು ಪ್ರಭಾಕರ್ ಅವರು ದೇವಿಯ ಪಾತ್ರ ಮಾಡಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ಆಕೆ ದಾನಮ್ಮ ದೇವಿಯ ಪಾತ್ರ ಮಾಡಿದ್ದರು. ದಾನಮ್ಮ ದೇವಿ ಎಂಬ ಸಿನಿಮಾದಲ್ಲಿ. ಇಂದಿಗೂ ಉತ್ತರ ಕರ್ನಾಟಕದ ಜನರು ಅನು ಪ್ರಭಾಕರ್ ಅವರನ್ನು ದಾನಮ್ಮ ದೇವಿ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆಯಂತೆ. ಎಷ್ಟೋ ಜನ ತಮ್ಮ ದೇವರ ಮನೆಯಲ್ಲಿ ಅವರ ದೇವಿ ಪಾತ್ರದ ಫೋಟೋಗಳನ್ನು ಇಟ್ಟುಕೊಂಡಿದ್ದಾರಂತೆ.
ನಟಿ ಜಯಂತಿ ಅಮ್ಮ ಒನಕೆ ಒಬವ್ವ ನ ಪಾತ್ರಕ್ಕೆ ಹೆಸರಾದಂತೆ, ನಟಿ ಸರೋಜ ದೇವಿ ಅಮ್ಮ ಕಿತ್ತೂರು ಚೆನ್ನಮ್ಮನ ಪಾತ್ರಕ್ಕೆ ಹೆಸರುವಾಸಿಯಾದಂತೆ ಇದೀಗ ಅನು ಪ್ರಭಾಕರ್ ಅವರನ್ನು ಜನ ದಾನಮ್ಮ ದೇವಿಯಾಗಿ ಗುರುತಿಸುವುದು ಸ್ವತಃ ಅನು ಪ್ರಭಾಕರ್ ಅವರಿಗೆ ಖುಷಿ ತಂದಿದೆಯಂತೆ.

ಅಂದಹಾಗೆ ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ ನಟಿಯರ ಪೈಕಿ ಅನು ಪ್ರಭಾಕರ್ ಕೂಡಾ ಒಬ್ಬರು. ಕನ್ನಡದ ಸ್ಟಾರ್ ನಟ ರಮೇಶ್ ಅರವಿಂದ್ ಹಾಗೂ ಇವರ ಜೋಡಿಯನ್ನು ಹಲವಾರು ಸಿನಿಮಾಗಳಲ್ಲಿ ಕನ್ನಡದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಇದೀಗ ಈಕೆ ಸಿನಿಮಾಗಳಿಂದ ತುಸು ದೂರ ಉಳಿದಿದ್ದು ನಮ್ಮಮ್ಮ ಸೂಪರ್ ಸ್ಟಾರ್, ಸೂಪರ್ ಜೋಡಿ ಇತ್ಯಾದಿ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ನಟ ರಘು ಮುಖರ್ಜಿ ಅವರನ್ನು ಮದುವೆಯಾಗಿರುವ ಇವರಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ.


Click it and Unblock the Notifications











