For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ ನಿರೂಪಕಿ ಅನುಪಮಾ ಗೌಡ!

  By Priyadarshini
  |

  ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಮೊದಲು 'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಹಳ್ಳಿ ದುನಿಯಾ ಸೇರಿದಂತೆ ಕೆಲವು ರಿಯಾಲಿಟಿ ಶೋಗಳಲ್ಲಿ ಅನುಪಮಾ ಗೌಡ ಸ್ಪರ್ಧಿಸಿದರು. ಬಳಿಕ 'ಅಕ್ಕ' ಧಾರಾವಾಹಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿ ಮನೆ ಮಾತಾದರು.

  'ಅಕ್ಕ' ಧಾರಾವಾಹಿ ಮುಗಿದ ಮೇಲೆ ಅನುಪಮಾ ಗೌಡ ಮತ್ತೆ ಸೀರಿಯಲ್‌ಗಳಲ್ಲಿ ನಟಿಸಲಿಲ್ಲ. ಬದಲಿಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು. ಬಿಗ್‌ ಬಾಸ್ ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ಭಾಗವಹಿಸಿದ್ದರು. ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್ ಪಡೆದು ಮತ್ತೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು.

  'ಜೊತೆ ಜೊತೆಯಲಿ' ಸೀರಿಯಲ್‌ಯಿಂದ ಹೊರಗೆ: ನಿಜವಲ್ಲ ಎಂದ ಅನಿರುದ್ಧ'ಜೊತೆ ಜೊತೆಯಲಿ' ಸೀರಿಯಲ್‌ಯಿಂದ ಹೊರಗೆ: ನಿಜವಲ್ಲ ಎಂದ ಅನಿರುದ್ಧ

  ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ನಿರೂಪಣೆ ಮಾಡಿದ್ದಾರೆ. ಮೊದಮೊದಲು ಆಂಕರಿಂಗ್ ಮಾಡಲು ಕಷ್ಟಪಡುತ್ತಿದ್ದ ಅನುಪಮಾ ದನಂತರ ಸೈ ಎನಿಸಿಕೊಂಡಿದ್ದಾರೆ. ಸದ್ಯ ಬಣ್ಣದ ಲೋಕದಿಂದ ಬ್ರೇಕ್ ಪಡೆದು ಗೋವಾ, ಥೈಲ್ಯಾಂಡ್ ಪ್ರವಾಸ ಮಾಡಿ ಬಂದಿದ್ದಾರೆ.

  ಕಾರು ಖರೀದಿ ಮಾಡಿದ ಅನುಪಮ ಗೌಡ!

  ಕಾರು ಖರೀದಿ ಮಾಡಿದ ಅನುಪಮ ಗೌಡ!

  ಅನುಪಮಾ ಗೌಡ ಸದ್ಯ ಹೊಸ ಕಾರು ಖರೀದಿಸಿ ಸುದ್ದಿ ಆಗಿದ್ದಾರೆ. 'ಮಹೀಂದ್ರಾ ಥಾರ್' ಕಾರು ಖರೀದಿಸಿದ್ದು ಖುಷಿ ಹಂಚಿಕೊಂಡಿದ್ದಾರೆ. 17 ಲಕ್ಷ್ಮದಿಂದ 21 ಲಕ್ಷ ಮೌಲ್ಯದ ಕೆಂಪು ಬಣ್ಣದ ಥಾರ್ ಖರೀದಿಸಿದ್ದಾರೆ. ಇದರ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಜೀವನದಲ್ಲಿ ಕಾರಿನ ಜೊತೆಗಿನ ಸಂಬಂಧವನ್ನೂ ಶೇರ್ ಮಾಡಿಕೊಂಡಿದ್ದಾರೆ. ಅನುಪಮಾ ಮೊದಲು ಖರೀದಿಸಿದ್ದು, ಡಿಯೋ ಬೈಕ್ ಅಂತೆ. ಕಾರಾಣಾಂತರಗಳಿಂದ ಅದನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.

  ಅನುಪಮಾ ಹಾಗೂ ಕಾರಿನ ಜರ್ನಿ!

  ಅನುಪಮಾ ಹಾಗೂ ಕಾರಿನ ಜರ್ನಿ!

  ಅನುಪಮಾ ಗೌಡ 2014 ಆಗಸ್ಟ್ 16 ರಲ್ಲಿ ಹುಂಡೈ i10 ಕಾರನ್ನು ಖರೀದಿಸಿದ್ದರಂತೆ. ಇದನ್ನು ಖರೀದಿಸಿದಾಗ ಅನುಪಮಾಗೆ ಅಷ್ಟಾಗಿ ಡ್ರೈವಿಂಗ್ ಬರುತ್ತಿರಲಿಲ್ಲವಂತೆ. ಹುಂಡೈ i10 ಕಾರಿನಿಂದಲೇ ಕಾರು ಓಡಿಸುವುದನ್ನು ಕಲಿತರಂತೆ. ನಿತ್ಯ ಶೂಟಿಂಗ್‌ಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಬಳಿಕ ಈ ಕಾರನ್ನು ತಮ್ಮ ಸ್ನೇಹಿತರಿಗೆ ಕೊಟ್ಟುಬಿಟ್ಟರಂತೆ. ನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕ್ರೇಟಾ ಕಾರನ್ನು ಬುಕ್ ಮಾಡಿದರಂತೆ. ಆದರೆ ಈ ಕಾರು ಸಮಯಕ್ಕೆ ಸರಿಯಾಗಿ ಕೈ ಸೇರಲಿಲ್ಲವಂತೆ. ಬದಲಿಗೆ ಅವರ ತಂದೆ ತೀರಿಕೊಂಡ ಒಂದು ತಿಂಗಳ ಬಳಿಕ ಸಿಕ್ಕಿತಂತೆ. ಈ ಕಾರನ್ನು ಅವರು ಬೇಡ ಎಂದಿದ್ದರು. ಆದರೆ ಅದಾಗಲೇ ಒಂದು ತಿಂಗಳ ಇಎಂಐ ಕಟ್ಟಿದ್ದರಿಂದ ಅನಿವಾರ್ಯವಾಗಿತ್ತಂತೆ. ಇದೀಗ ಥಾರ್ ಖರೀದಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ!

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ!

  ನಿರೂಪಕಿ ಅನುಪಮಾ ಗೌಡ, ಆಗಾಗ ತಮ್ಮ ದಿನಚರಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಅನುಪಮಾ ಅವರದ್ದೇ ಯೂಟ್ಯೂಬ್ ಚಾನೆಲ್ ಕೂಡ ಇದ್ದು, ಇದರಲ್ಲಿ ತಮ್ಮ ಆಗು-ಹೋಗುಗಳ ಬಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸದಾ ಸಕ್ರಿಯರಾಗಿರುವ ಅನುಪಮಾ ತಮ್ಮ ದಿನದ ಶೂಟಿಂಗ್ ಪ್ಲಾನ್‌ಗಳ ಬಗ್ಗೆಯೂ ಅಪ್ ಡೇಟ್ ಮಾಡುತ್ತಿದ್ದರು. ಅಲ್ಲದೇ, ರೀಲ್ಸ್ ಮಾಡುತ್ತಿರುತ್ತಾರೆ. ಡ್ಯಾನ್ಸ್ ಮಾಡುವುದು, ಹೀಗೆ ಯಾವುದಾದರೂ ಒಂದು ಆಕ್ಟಿವಿಟಿಯನ್ನು ಮಾಡುತ್ತಿರುತ್ತಾರೆ.

  ಹಬ್ಬದ ಸಂಭ್ರಮ ಹಂಚಿಕೊಂಡ ನಟಿ!

  ಹಬ್ಬದ ಸಂಭ್ರಮ ಹಂಚಿಕೊಂಡ ನಟಿ!

  ಅನುಪಮಾ ಗೌಡ ವರಮಹಾಲಕ್ಷ್ಮೀ ಹಬ್ಬವನ್ನು ಮಾಡಿದ್ದರು. ಹಬ್ಬಕ್ಕೆ ತಿಂಡಿ-ತಿನಿಸುಗಳನ್ನು ಮಾಡಿದ ಅನುಪಮಾ ಹಬ್ಬದ ದಿನದ ಸಂಪೂರ್ಣ ವಿಡಿಯೋವನ್ನು ಮಾಡಿ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಿದ್ದರು. ಹಬ್ಬಕ್ಕಾಗಿ ಸ್ವತಃ ಅನು ಅವರೇ ಮಾರ್ಕೆಟ್‌ಗೆ ಹೋಗಿ ಹೂವು, ಹಣ್ಣು ತಂದಿದ್ದರು. ಚೆಂಡು ಹೂವನ್ನು ಪೋಣಿಸಿ ಮನೆಯನ್ನು ಸಿಂಗರಿಸಿದ್ದರು. ವೀಳ್ಯೆದೆಲೆಯಿಂದ ಲಕ್ಷ್ಮೀ ಕೂರಿಸುವ ವಾಲ್ ಬಳಿ ಅಲಂಕಾರ ಮಾಡಿದ್ದರು. ಪೂಜೆ ಮಾಡಿದ ಸಂಪೂರ್ಣ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು.

  English summary
  Actress Anupama Gowda Buys New Car, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X