ಲಂಗ ದಾವಣಿಯಲ್ಲಿ ಮಿಂಚಿದ ನಟಿ ಅನುಪಮಾ ಗೌಡ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಕಿರುತೆರೆಯಲ್ಲಿ ಕಮಾಲ್ ಮಾಡಿ ಹಿರಿತೆರೆಯತ್ತ ಮುಖ ಮಾಡಿದ ನಟಿ ಅನುಪಮಾ ಗೌಡ. ಕನ್ನಡದಲ್ಲಿ ನಿರರ್ಘಳವಾಗಿ ಮಾತಾನಡುವ ನಟಿ ನಿರೂಪಣೆಯಲ್ಲಿ ಕೂಡ ಸೈ ಎನಿಸಿಕೊಂಡು ಇದ್ದಾರೆ. ಇನ್ನೂ ಅನುಪಮಾ ಗೌಡ ಒಂದಲ್ಲ ಒಂದು ಸುದ್ದಿಯಲ್ಲಿ ಸದಾ ಇರುತ್ತಾರೆ. ಹೌದು ಅನುಪಮಾ ಗೌಡ ಮಾತಿನ ಮೋಡಿಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ.
ಇನ್ನೂ ಅಕ್ಕ ಧಾರಾವಾಹಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಅನುಪಮಾ. ಅನುಪಮಾ ಇತ್ತೀಚಿಗಷ್ಟೇ ಕೆಂಪು ಉಡುಗೆಯಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದರು. ಇದೀಗ ಅನುಪಮಾ ಲಂಗ ದಾವಣಿ ತೊಟ್ಟು ನೋಡುಗರ ಮನ ಸೆಳೆದಿದ್ದಾರೆ. ಅಷ್ಟು ಅದ್ಭುತವಾಗಿ ನಟಿ ಕಾಣಿಸುತ್ತಿದ್ದಾರೆ.

ಲಂಗ ದಾವಣಿ ಹಾಕಿ ಮಿರ ಮಿರ ಮಿಂಚುತ್ತಿರುವಾ ಅನುಪಮಾ ಅಂದ ನೋಡುವುದೆ ಕಣ್ಣಿಗೆ ಒಂದು ರೀತಿಯ ಹಬ್ಬ. ಇನ್ನೂ ಅನುಪಮಾ ನಿಜ ಜೀವನದಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡ ನಟಿ. ಹೌದು ಆಕೆ ಬಹಳ ಕಷ್ಟ ಪಟ್ಟು ತನ್ನ ಜೀವನವನ್ನು ತಾನೇ ಕಟ್ಟಿಕೊಂಡ ನಟಿ ಎಂದು ಹೇಳಿದರೆ ತಪ್ಪಾಗದು.
ಅನುಪಮಾನನ್ನು ನೋಡಿದ ಅಭಿಮಾನಿಗಳು ಫಿದಾ
ಇದೀಗ ಅನುಪಮಾ ಗೌಡ ಲಂಗ ದಾವಣಿ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ದರ್ಶನ ಅಭಿನಯದ ಗಜ ಚಿತ್ರದ, ಏನು ಹೇಳಿ ಅಂದನಾ.... ಸಾಲುತಿಲ್ಲ ವ್ಯಾಕರಣ... ಕಣ್ಣಿನ ಬಾಣನಾ.. ಬೀಸುತ್ತಾಳೆ ನೋಡಣ್ಣ ಎಂಬ ಅದ್ಭುತ ಹಾಡಿನ ಸಾಲುಗಳನ್ನು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಅನುಪಮಾರನ್ನು ಲಂಗ ದಾವಣಿಯಲ್ಲಿ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿ ಪಟ್ಟಿದ್ದಾರೆ.

ಫೋಟೋಗೆ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು
ಅನುಪಮಾ ಫೋಟೋಗೆ ಕಾಮೆಂಟ್ ಹಾಗೂ ಲೈಕ್ ಗಳು ಹರಿದು ಬರುತ್ತಿವೆ. ಹಲವಾರು ಅಭಿಮಾನಿಗಳು ಗುಳಿಕೆನ್ನೆಯ ಚೆಲುವೆ.. ಸುಂದರಿಯ ಹಾಗೆ ಕಾಣಿಸುತ್ತಾ ಇದ್ದಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ. ಅನುಪಮಾ ಗೌಡ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ
ಇತ್ತೀಚಿನ ದಿನಗಳಲ್ಲಿ ಅನುಪಮಾ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತ ಇದ್ದು ನೋಡುಗರಿಗೆ ಬಹಳ ಖುಷಿ ಆಗುತ್ತಿದೆ. ಅನುಪಮಾ ಗೌಡ ಕಿರುತೆರೆಯಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡಿ ಹಿರಿತೆರೆ ಮತ್ತು ನಿರೂಪಣೆಯಲ್ಲೂ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











