Anupama Gowda: ಕಪ್ಪು ಬಟ್ಟೆಯಲ್ಲಿ ನಕ್ಷತ್ರದಂತೆ ಹೊಳೆದ ನಟಿ ಅನುಪಮಾ ಗೌಡ
ಅಕ್ಕ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟಿ ಅನುಪಮಾ ಗೌಡ. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದ ನಟಿ ಎಂದರೆ ಅನುಪಮಾ ಗೌಡ. ನಿರೂಪಕಿಯಾಗಿ ಎಲ್ಲರ ಗಮನ ಸೆಳೆದ ನಟಿ ಅನುಪಮಾ, ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ತಾನು ಮನಸ್ಸನ್ನು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ರೀತಿ ಸಾಧಿಸಿ ತೋರಿಸಿದ್ದಾರೆ.
ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಆಗಮಿಸಿದ ಬಳಿಕ ಬಹಳ ಫೇಮಸ್ ಆದರು. ಇದರಿಂದ ಸಾಕಷ್ಟು ಅವಕಾಶಗಳು ಅನುಪಮಾ ಅವರನ್ನು ಅರಸಿ ಬಂದವು ಎಂದರೆ ತಪ್ಪಾಗದು. ಅನುಪಮಾ ಗೌಡ ನಿರೂಪಕಿಯಾಗಿ ಸಖತ್ ಸದ್ದು ಮಾಡಿದ ನಟಿ. ಏನೇ ಒಂದು ಟಾಪಿಕ್ ಕೊಟ್ಟರು ಅದರ ಬಗ್ಗೆ ಸುಲಲಿತವಾಗಿ ಮಾತನಾಡುತ್ತಾರೆ 'ಅಕ್ಕ' ನಟಿ.

ಇದೀಗ ಅನುಪಮಾ ಗೌಡ ಕಪ್ಪು ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದಾರೆ. ಈಗಾಗಲೇ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಅಭಿಮಾನಿಗಳು ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಅನುಪಮಾ ಅವರ ಪೋಟೋಗಳನ್ನು ಇಷ್ಟಪಟ್ಟಿದ್ದಾರೆ.
ಅನುಪಮಾ ನೋಟಕ್ಕೆ ಫಿದಾ ಆದ ಫ್ಯಾನ್ಸ್!
ಬ್ಲ್ಯಾಕ್ ಕಲರ್ ಉದ್ದದ ಗೌನ್‌ನಲ್ಲಿ ಅನುಪಮಾ ಗೌಡ ಮಿಂಚಿದ್ದು, ಅನುಪಮಾ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿರುವುದು ಖಚಿತ. ಇದೀಗ ಅಭಿಮಾನಿಗಳು ಅನುಪಮಾ ಅವರ ಫೋಟೋಗಳಿಗೆ ನಾನಾ ರೀತಿಯ ಕಾಮೆಂಟ್ ಮಾಡುತ್ತಾ ಇದ್ದು, ಗೂಳಿ ಕೆನ್ನೆಯ ಚೆಲುವೆ ಬಹಳ ಇಷ್ಟ ಪಟ್ಟಿದ್ದಾರೆ. ಹಲವಾರು ಅಭಿಮಾನಿಗಳು ಗುಳಿಕೆನ್ನೆಯ ಚೆಲುವೆ.. ಸುಂದರಿಯ ಹಾಗೆ ಕಾಣಿಸುಸುತ್ತಾ ಇದ್ದಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ.
ಹಿರಿತೆರೆಯಲ್ಲಿ ಮಿಂಚಿದ ನಟಿ ಅನುಪಮಾ ಗೌಡ
ಇನ್ನೂ ಅನುಪಮಾ ಗೌಡ ಕಿರುತೆರೆಯಲ್ಲಿ ಮಾತ್ರ ಮಿಂಚದೆ ಹಿರಿತೆರೆಯಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಹೌದು ಕಿರುತೆರೆಯಲ್ಲಿ ಅನೇಕ ಧಾರಾವಾಹಿಯಲ್ಲಿ ನಟನೆ ಮಾಡಿದ ಈ ನಟಿಗೆ ಅನೇಕ ಅಭಿಮಾನಿಗಳಿದ್ದಾರೆ. ಹಾಗೆಯೇ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲಿ ಕೂಡ ಬಹಳ ಅದ್ಭುತವಾಗಿ ಮಿಂಚಿದ್ದಾರೆ ಈ ನಟಿ. ನಗಾರಿ, ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದಾರೆ.

ಸೋಲೋ ಟ್ರಿಪ್ ಹೋಗಲು ಅನುಪಮಾಗೆ ಖುಷಿ
ಇನ್ನೂ ಅನುಪಮಾಗೆ ಸೋಲೋ ಟ್ರಿಪ್ ಹೋಗುವುದು ಎಂದರೆ ಬಹಳ ಇಷ್ಟವಂತೆ. ಹಾಗೆಯೇ ಹಲವಾರು ಬಾರಿ ಟ್ರಿಪ್‌ಗಳಿಗೂ ಹೋಗಿದ್ದಾರೆ. ಟ್ರಿಪ್‌ನಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದಾರೆ. ಹೌದು.. ಅಷ್ಟರ ಮಟ್ಟಿಗೆ ಟ್ರಿಪ್‌ಗಳನ್ನು ಎಂಜಾಯ್ ಮಾಡುತ್ತಾ ಇರುತ್ತಾರೆ. ಇನ್ನೂ ಅನುಪಮಾ ಗೌಡ ಎರೆಡೆರಡು ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾಗಿದ್ದರು.


Click it and Unblock the Notifications











