Anupama Gowda: ನೀಲಿ ಸೀರೆಯುಟ್ಟು 'ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ' ಎಂದ ನಟಿ ಅನುಪಮಾ ಗೌಡ
ಅನುಪಮಾ ಗೌಡ ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಹೌದು ಅಕ್ಕ ಧಾರಾವಾಹಿ ಮೂಲಕ ಎಲ್ಲರ ಮನಗೆದ್ದ ಸುಂದರಿ ಈ ನಟಿ ಎಂದರೆ ತಪ್ಪಾಗದು. ಅಷ್ಟರ ಮಟ್ಟಿಗೆ ಈ ನಟಿ ನಟನೆ ಮಾಡಿ ಜನರ ಮನದಲ್ಲಿ ಮನೆ ಮಾಡಿದ್ದಾರೆ. ನಟನೆ ಮಾತ್ರ ಅಲ್ಲ ನಿರೂಪಕಿಯಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇದೀಗ ಇನ್ನೊಂದು ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ ಅನುಪಮಾ ಗೌಡ.
ಅನುಪಮಾ ಗೌಡ ಇತ್ತೀಚಿಗೆ ಫೋಟೋಶೂಟ್ ಮಾಡಿಸಿಕೊಂಡು ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ನೀಲಿ ಬಣ್ಣದ ಸೀರೆಯನ್ನು ಉಟ್ಟು ಬಹಳ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ನೋಟಕ್ಕೆ ಅಭಿಮಾನಿಗಳು ಮಾತ್ರ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹೌದು ನೀಲಿ ಸೀರೆಯುಟ್ಟ ಅನುಪಮ ಅವರನ್ನು ನೋಡಿದ ಅಭಿಮಾನಿಗಳು ಸಕತ್ ಲೈಕ್ ಕಾಮೆಂಟ್ ಮಾಡುತ್ತಿದ್ದಾರೆ.

ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ನೋಡುಗರ ಮನ ಸೆಳೆದಿದ್ದರು. ಇದೀಗ ಸೀರೆಯುಟ್ಟು ಬಹಳ ಸುಂದರವಾಗಿ ಕಾಣಿಸುತ್ತ ಇದ್ದಾರೆ ಈ ನಟಿ.
ಅನುಪಮಾ ಗೌಡ ಫೋಟೋ ನೋಡಿ ಫಿದಾ ಆದ ಅಭಿಮಾನಿಗಳು
ಶಿವರಾಜ್‌ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ 'ಸೀರೆ ಸೀರೆ ಸೀರೆ ಎಲ್ಲೆಲ್ಲೋ ಹಾರೈತೇ' ಎಂಬ ಹಾಡಿನ ಸಾಲುಗಳನ್ನು ಶೀರ್ಷಿಕೆಯಾಗಿ ಬರೆದುಕೊಂಡಿದ್ದಾರೆ. ಈ ಸಾಲುಗಳು ಜನರ ಮನ ಗೆದ್ದಿದೆ. ಹೌದು ನೀಲಿ ಸೀರೆಗೆ ನೀಲಿ ರವಿಕೆ ತೊಟ್ಟು ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಇವರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ.
ನವಿಲು ಮರಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು
ಈ ಸುದ್ದಿ ಬರೆಯುವ ವೇಳೆಗೆ ಅನುಪಮಾ ಗೌಡ ಶೇರ್ ಮಾಡಿದ ಫೋಟೋಗಳಿಗೆ 39 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೀಲಿ ಚೆಲುವೆ, ಸೂಪರ್, ನವಿಲು ಮರಿ ನೀನು ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. " ನನ್ನ ಮುದ್ದು ದೇವತೆ ನೀಲಿ ಬಣದಲ್ಲಿ ಅಪ್ಸರೆ ತರ ಕಾಣಿಸ್ತಾಳೆ. ಲವ್ ಯು ಜಾಸ್ತಿ ಅನು ಡಾರ್ಲಿಂಗ್', 'ನೀ ಚಂದನೇ... ನಿನ್ನ ಸೀರೆ ಚಂದನೇ..' ಅಂತ ಹಾಡು ಹಾಡುತ್ತಿದ್ದಾರೆ ನೆಟ್ಟಿಗರು.

ಬ್ಲೂ ಕಲರ್ ಸೀರೆಯುಟ್ಟು ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ
ಇತ್ತೀಚಿನ ದಿನಗಳಲ್ಲಿ ಅನುಪಮಾ ಗೌಡ ಅವರು ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಇವರು ಸಿನಿಮಾದಲ್ಲಿ ನಟನೆ ಮಾಡುತ್ತಾರೋ ಅಥವಾ ಧಾರಾವಾಹಿಯಲ್ಲಿ ನಟನೆ ಮಾಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ. ಧಾರಾವಾಹಿ ಬಳಿಕ ಅನುಪಮಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಸಖತ್ ಫೇಮಸ್ ಆಗಿದ್ದಾರೆ.
ಬಿಗ್ ಬಾಸ್ ಮೂಲಕ ಫೇಮಸ್ ಆದ ನಟಿ
ಅನುಪಮಾ ಗೌಡ ಅನೇಕ ಶೋಗಳ ನಿರೂಪಣೆ ಮಾಡುವಲ್ಲಿ, ಶೋಗಳಲ್ಲಿ ಭಾಗಿಯಾಗುವ ಮೂಲಕ ಸಕತ್ ಬ್ಯುಸಿ ಆಗಿದ್ದಾರೆ. ಹಾಗೆಯೇ ಇವರಿಗೆ ಸೋಲೋ ಟ್ರಿಪ್ ಅಂದರೆ ಬಹಳ ಇಷ್ಟವಂತೆ..ಇನ್ನೂ ಅನುಪಮಾ ಫೋಟೋಗ್ರಫಿ ಮಾಡುವುದು ಎಂದರೆ ಬಹಳ ಅಚ್ಚುಮೆಚ್ಚು. ಇನ್ನು, ಅಭಿಮಾನಿಗಳು ಮಾತ್ರ ಅನುಪಮಾ ಗೌಡ ಅವರನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











