ಲವ್ ಬ್ರೇಕಪ್, ಬ್ಯುಸಿನೆಸ್‌ನಲ್ಲಿ ಲಾಸ್: ಖಿನ್ನತೆ ಜಾರಿದ್ದ ನಟಿ ಅನುಪಮಾ ಗೌಡ

By ಅನಿತಾ ಬನಾರಿ

ನಟಿ ನಿರೂಪಕಿ ಅನುಪಮಾ ಗೌಡ ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯ. ಹಲವಾರು ವರ್ಷಗಳಿಂದ ಈಕೆ ಕಿರುತೆರೆಯಲ್ಲಿ ಬಹಳ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಅಕ್ಕ' ಧಾರಾವಾಹಿಯಲ್ಲಿ ಡಬಲ್ ಆ್ಯಕ್ಟಿಂಗ್ ಮಾಡಿ ಸೈ ಎನಿಸಿಕೊಂಡ ನಟಿ ಅನುಪಮಾ ಗೌಡ ನಂತರ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಅದಾದ ಮೇಲೆ ಇದೀಗ ನಿರೂಪಕಿಯಾಗಿ ಮಿಂಚುತ್ತಿರುವ ಈಕೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ.

ಹೊರಗಿನ ಜಗತ್ತಿಗೆ ಬಹಳ ಯಶಸ್ವಿ ಕಲಾವಿದೆಯಾಗಿ ಕಾಣುವ ನಟಿ ಅನುಪಮಾ ಗೌಡ ಅವರು ಒಂದು ಕಾಲದಲ್ಲಿ ಬಹಳ ಖಿನ್ನತೆಯಿಂದ ಒದ್ದಾಡಿದ್ದರಂತೆ. ಅದಕ್ಕೆ ಕಾರಣ ಅವರ ಲವ್ ಬ್ರೇಕ್ ಅಪ್. ಜೊತೆಗೆ ಅವರು ಆರಂಭಿಸಿದ ಬಿಸಿನೆಸ್‌ನಲ್ಲಿ ಆದ ಲಾಸ್. ಈ ಬಗ್ಗೆ ನಟಿ ಅನುಪಮ ಗೌಡ ಅವರೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Actress Anupama Gowda spoke about her depression

"ನಾನು ಹಲವಾರು ವರ್ಷಗಳಿಂದ ಪ್ರೀತಿಸಿ ಇನ್ನೇನು ಮದುವೆಯಾಗಿ ಸೆಟಲ್ ಆಗಬೇಕು ಎನ್ನುವಾಗ ನನ್ನ ಲವ್ ಬ್ರೇಕ್ ಅಪ್ ಆಯ್ತು. ದುಡಿದ ಹಣವನ್ನೆಲ್ಲ ಹಾಕಿ ಒಂದು ಹೊಸ ಬ್ಯುಸಿನೆಸ್ ಆರಂಭಿಸಿದಾಗ ಅದರಲ್ಲೂ ತುಂಬಾ ಲಾಸ್ ಆಯ್ತು. ಈ ಎಲ್ಲ ಕಾರಣಕ್ಕೆ ನನಗೆ ಜೀವನದಲ್ಲಿ ನೀನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದು ಸಾಯುವ ಯೋಚನೆ ಮಾಡಿದ್ದೆ. ಸೂಸೈಡ್ ಅಟ್ಟೆಂಪ್ಟ್ ಕೂಡ ಮಾಡಿದೆ ಆದರೆ ಸಾಯಲಿಲ್ಲ. ಬಹಳ ಖಿನ್ನತೆಯಲ್ಲಿದ್ದೆ. ಅಂತಹ ಸಂದರ್ಭದಲ್ಲಿ ನನ್ನ ಜೊತೆಗಿದ್ದವರು ನನ್ನ ಗೆಳೆಯರು" ಎಂದು ತಮ್ಮ ನೋವು ಹಾಗೂ ಖಿನ್ನತೆ ಬಗ್ಗೆ ಮಾತನಾಡಿದ್ದಾರೆ ಅನುಪಮ ಗೌಡ.

"ಲವ್ ಬ್ರೇಕ್ ಅಪ್ ಆದಾಗ ಬಿಸಿನೆಸ್ ಲಾಸ್ ಆದಾಗ ನನ್ನ ಜೊತೆಗೆ ಯಾರು ಇರಲಿಲ್ಲ. ನನಗೆ ಜೀವನವೇ ಬೇಡ ಎನಿಸಿತ್ತು. ಆಗ ನನ್ನ ಒಂದು ಫ್ರೆಂಡ್ ಸರ್ಕಲ್ ನನ್ನ ಜೊತೆಗೆ ನಿಂತು ನನ್ನನ್ನು ಸಪೋರ್ಟ್ ಮಾಡಿದರು. ಪ್ರತಿದಿನ ನನ್ನನ್ನು ನೋಡಲು ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ನಾನು ಅವರಿಗೆ ಫೋನ್ ಮಾಡಿ ಗಂಟೆಗಟ್ಟಲೆ ಅತ್ತಿದ್ದಿದೆ. ಆಗೆಲ್ಲ ತಾಳ್ಮೆಯಿಂದ ನನ್ನೊಂದಿಗೆ ಇದ್ದರೂ ನನ್ನ ಗೆಳೆಯರು, ಆ ರೀತಿಯ ಒಂದು ಫ್ರೆಂಡ್ಸ್ ಸರ್ಕಲ್‌ನ ಇಟ್ಕೊಂಡಿರೋದಿಕ್ಕೆ ನಾನು ಬಹಳ ಸಂತೋಷ ಪಡ್ತೀನಿ. ಅವರೆಲ್ಲರ ಸಹಾಯದಿಂದ ನಾನು ಮತ್ತೆ ಜೀವನವನ್ನು ಎದುರಿಸಲು ತಯಾರಾದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ಅನುಪಮಾ ಗೌಡ.

Actress Anupama Gowda spoke about her depression

ಖಿನ್ನತೆ ಹಾಗೂ ಸೋಲಿನ ಸಮಯದಲ್ಲಿ ಪ್ರೀತಿ ಜೊತೆಗೆ ಬರಲಿಲ್ಲ. ಬದಲಾಗಿ ಸ್ನೇಹಿತರೇ ತಮ್ಮ ಕೈ ಹಿಡಿದಿದ್ದು ಎಂದು ಬಹಳ ಹೆಮ್ಮೆ ಹಾಗೂ ಸಂತೃಪ್ತಿಯಿಂದ ಹೇಳಿಕೊಂಡಿದ್ದಾರೆ ನಟಿ ಅನುಪಮಾ ಗೌಡ. ಅಂದ ಹಾಗೆ ನಟಿ ಅನುಪಮಾ ಗೌಡ ಅವರಿಗೆ ಕಿರುತೆರೆಯಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಬಿಗ್ ಬಾಸ್ ನಲ್ಲಿಯೂ ಸ್ಪರ್ಧಿಸಿ ಒಳ್ಳೆಯ ಹೆಸರು ತೆಗೆದುಕೊಂಡ ಈ ನಟಿಗೆ ನೇಹಾ ಗೌಡ ಆಪ್ತ ಸ್ನೇಹಿತ ಅಂತೆ. ಸದ್ಯಕ್ಕೆ ನಟಿ ಅನುಪಮಾ ಗೌಡ ಅವರು ರಾಜಾರಾಣಿ ರಿಲೋಡೆಡ್ ಸೀಸನ್ ನಲ್ಲಿ ನಿರೂಪಕಿಯಾಗಿ ಬರಲು ತಯಾರಿ ನಡೆಸುತ್ತಿದ್ದಾರೆ.

More from Filmibeat

English summary
Anupama Gowda said that my friends helped me when I was mentally depressed,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X