ಮತ್ತೆ ನಿರೂಪಕಿಯಾಗಿ ಕಾಣಿಸಿಕೊಂಡ ಅನುಪಮಾ ಗೌಡ
ನಟಿ, ನಿರೂಪಕಿ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 9ರಲ್ಲಿ ಭಾಗವಹಿಸಿದ ನಂತರ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಅಭಿಮಾನಿಗಳ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದರು.
ಎರಡು ಬಾರಿ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಅನುಪಮಾ ಅವರು ಮೊದಲ ಬಾರಿಗಿಂತಲೂ ಎರಡನೇ ಬಾರಿ ಅದ್ಭುತವಾಗಿ ಆಟವಾಡಿದರು. ಈ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.
'ಅಕ್ಕ' ಧಾರಾವಾಹಿಯ ಮೂಲಕವೇ ಕಿರುತೆರೆಯಲ್ಲಿ ಗುರುತಿಸಿಕೊಂಡ ಅನುಪಮಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಬಳಿಕ ಆಂಕರಿಂಗ್ ಮಾಡುತ್ತಾ ಮನೆ ಮಾತಾದರು.

ಮೊದ ಮೊದಲು ತೊದಲುತ್ತಿದ್ದ ನಟಿ
'ಅಕ್ಕ' ಧಾರಾವಾಹಿ ಬಳಿಕ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೊನೆಯ ದಿನದವರೆಗೂ ಆಟವಾಡಿ ಹೊರಬಂದಿದ್ದರು. ಬಳಿಕ ರಿಯಾಲಿಟಿ ಶೋಗಳಲ್ಲಿ ನಟಿ ಅನುಪಮಾ ಗೌಡ ಅವರು ಕಾನಿಸಿಕೊಂಡರು. ಅದು ಕೂಡ ನಿರೂಪಕಿಯಾಗಿ. 'ಮಜಾಭಾರತ' ಎಂಬ ಕಾಮಿಡಿ ಶೋ ಒಂದಕ್ಕೆ ಅನುಪಮಾ ಗೌಡ ಅವರು ನಿರೂಪಕಿಯಾಗಿ ಬಂದರು. ಆದರೆ, ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದ ಕಾರಣ ಅವರು ತೊದಲುತ್ತಿದ್ದರು. ಇದು ಎಲ್ಲರೂ ಸಾಮಾನ್ಯವಾಗಿ ನಿರೂಪಣೆ ಮಾಡುವಾಗ ನಡೆಯುತ್ತಿದ್ದದ್ದೇ. ಬಳಿಕ ಅನುಪಮಾ ಕೊಂಚ ಬ್ರೇಕ್ ಪಡೆದರು.

ಅನು ನಿರೂಪಣೆಗೆ ಹೆಚ್ಚಿದ ಬೇಡಿಕೆ
ಬಳಿಕ ಅನುಪಮಾ ಅವರು 'ರಾಜಾ-ರಾಣಿ' ಎನ್ನುವ ಕಪಲ್ ಶೋನಲ್ಲಿ ನಿರೂಪಣೆಯನ್ನು ಪ್ರಾರಂಭಿಸಿದರು. 'ರಾಜಾ-ರಾಣಿ' ಶೋ ಬಳಿಕ 'ನಮ್ಮಮ್ಮ ಸೂಪರ್ ಸ್ಟಾರ್' ಎಂಬ ರಿಯಾಲಿಟಿ ಶೋ ನಡೆಸಿಕೊಟ್ಟಿದ್ದರು. ಅನುಪಮಾ ನಿರೂಪಣೆಯನ್ನು ಸಾಕಷ್ಟು ಮಂದಿ ಇಷ್ಟ ಪಟ್ಟರು. ನಂತರ ಮತ್ತೆ 'ರಾಜಾ-ರಾಣಿ' ಸೀಸನ್ 2 ಆರಂಭವಾದಾಗ ಆಂಕರ್ ಆಗಿ ಅನು ಕಾಣಿಸಿಕೊಳ್ಳಲಿಲ್ಲ. ಆಗ ಅನುಪಮಾ ಅವರೇ ತಮಗೆ ವಾಹಿನಿ ಯಾವುದೇ ರೀತಿಯಲ್ಲೂ ಆಹ್ವಾನ ನೀಡಿಲ್ಲ ಎಂದು ಅನುಪಮಾ ಅವರೇ ಸ್ಪಷ್ಟನೆಯನ್ನು ನೀಡಿದ್ದರು. '

ನಿರೂಪಕಿಯಾಗಿ ರೀ ಎಂಟ್ರಿ
ಆದರೆ ಸ್ವಲ್ಪ ದಿನದಲ್ಲೇ ಅನುಪಮಾ ಅವರು ಬಿಗ್ ಬಾಸ್ ಮನೆಗೆ ಪ್ರವೀಣೆಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ, ಇದೀಗ ಅನುಪಮಾ ಅವರು ಆಂಕರಿಂಗ್ ಮಾಡುವ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೂಡ ಪುನಃ ಜೋಡಿಗಳ ನಡುವೆ ಕಾಣಿಸಿಕೊಳ್ಳುತ್ತಿದ್ದಾರೆ. ವ್ಯಾಲೆನ್ ಟೈನ್ಸ್ ಡೇಗೆ ಇನ್ನು ಒಂದೇ ವಾರ ಬಾಕಿ ಇದೆ. ಇದಕ್ಕಾಗಿ ಸ್ಟಾರ್ ಸುವರ್ಣ ವಾಹಿನಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಈ ಶೋಗೆ ಅನುಪಮಾ ಅವರೇ ಆಂಕರಿಂಗ್ ಮಾಡುತ್ತಿದ್ದಾರೆ. ಆ ಕಾರ್ಯಕ್ರಮದ ಹೆಸರೇ ಸುವರ್ಣ ಪ್ರೇಮೋತ್ಸವ.

ವ್ಯಾಲೆಟೈನ್ಸ್ ಡೇ ಸ್ಪೆಷಲ್ ಶೋ
'ಸುವರ್ಣ ಪ್ರೇಮೋತ್ಸವ' ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದಾರೆ. ಇದರ ಪ್ರೋಮೋ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ. ಈ ಪ್ರೋಮೋದಲ್ಲಿ ಅನಿಪಮಾ ನಿರೂಪಕಿಯಾಗಿದ್ದು, ನಟ-ನಟಿಯರಾದ ಪ್ರಿಯಾ ಜೆ ಆಚಾರ್ - ಸಿದ್ದು ಮೂಲಿಮನಿ, ಸ್ವಪ್ನಾ ದೀಕ್ಷಿತ್- ಅಶ್ವಿನ್ ದೀಕ್ಷಿತ್ ಸೇರಿದಂತೆ ಹಲವು ಜೋಡಿಗಳು ಕಾಣಿಸಿಕೊಂಡಿದ್ದಾರೆ. ಈ ಜೋಡಿಗಳನ್ನು ಅನುಪಮಾ ಗೌಡ ಅವರು ಆಟಾಡಿಸಿದ್ದಾರೆ. ಪ್ರೋಮೋ ನೋಡಿದ ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಲು ಕಾಯುತ್ತಿದ್ದಾರೆ.


Click it and Unblock the Notifications











