ನಟಿ, ನಿರೂಪಕಿ ಅನುಪಮಾ ಗೌಡ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಅನುಪಮಾ ಗೌಡ ಸಿಕ್ಕಾ ಪಟ್ಟೆ ಮಿಂಚುತ್ತಾರೆ. ಹಲವು ಕಾರ್ಯಕ್ರಮ ಮತ್ತು ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಈಕೆ. ಆದರೆ ಇತ್ತೀಚೆಗೆ ಅನುಪಮ ಗೌಡ ಕಾಣೆಯಾಗಿದ್ದಾರೆ!

ಆದರೆ ಅವರು ಎಲ್ಲೂ ಹೋಗಿಲ್ಲ, ನಿತ್ಯವೂ ಒಂದೊಂದು ಪ್ರಯೋಗಗಳನ್ನು ಮಾಡುತ್ತಾ, ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಜನರ ಮುಂದೆ ಬರುತ್ತಾ ಇರುತ್ತಾರೆ. ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ಕೂಡ ಹಂಚಿಕೊಳ್ಳುತ್ತಾ ಇರುತ್ತಾರೆ.

ತಮ್ಮ ದಿನಚರಿ, ವೈಯಕ್ತಿಕ ಜೀವನದ ಬಗ್ಗೆ ಅವರೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ತಮಗೆ ಏನಿಷ್ಟ, ಎಲ್ಲಿಗೆ ಹೋಗಿದ್ದಾರೆ ಎಲ್ಲ ವಿಚಾರವೂ ಕ್ಷಣಾರ್ಧದಲ್ಲಿ ಅಪ್ಡೇಟ್‌ ಆಗುತ್ತದೆ. ನಿರೂಪಕಿ ಅನುಪಮಾ ಗೌಡ ಅವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಮುಂದೆ ಓದಿ...

ಸಿನಿಮಾದಿಂದ ಕಿರುತೆರೆಗೆ ಬಂದ ಅನುಪಮಾ!

ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಮೊದಲು ಲಂಕೇಶ್‌ ಪತ್ರಿಕೆ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಹಳ್ಳಿ ದುನಿಯಾ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಅನುಪಮಾ ಗೌಡ ಅವರು ಸ್ಫರ್ದಿಸಿದರು. ನಂತರ ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡಿ ಮನೆ ಮಾತಾದರು. ಅಕ್ಕ ಧಾರಾವಾಹಿ ಮುಗಿದ ಮೇಲೆ ಅನುಪಮಾ ಗೌಡ ಮತ್ತೆ ಸೀರಿಯಲ್‌ಗಳಲ್ಲಿ ನಟಿಸಲಿಲ್ಲ. ಬದಲಿಗೆ ಮತ್ತೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.

ನಟನೆಯಿಂದ ನಿರೂಪಣೆವರೆಗೆ!

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ಅವರು ಭಾಗವಹಿಸಿದರು. ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್‌ ಪಡೆದು ಮತ್ತೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಕೆಲ ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದರು. ಮೂರರಿಂದ ನಾಲ್ಕು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ಅವರು ಹೋಸ್ಟ್ ಮಾಡಿದ್ದಾರೆ.

ಅನುಪಮ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ!

ಅನುಪಮಾ ಗೌಡ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರ ದಿನಚರಿಗಳ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಯನ್ನೂ ನೀಡುತ್ತಿರುತ್ತಾರೆ. ಅನುಪಮಾ ಗೌಡ ಅವರದ್ದೇ ಯೂಟ್ಯೂಬ್ ಚಾನೆಲ್‌ ಇದು. ಇದರಲ್ಲಿ ತಮ್ಮ ದಿನಚರಿ, ಪ್ರವಾಸ, ಶೂಟಿಂಗ್ ಎಲ್ಲದರ ಬಗ್ಗೆ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಸದ್ಯ ತಮ್ಮ ಯೂಟ್ಯೂಬ್ ಚಾನೆಲ್‌ ಅನ್ನು ಫಾಲೋ ಮಾಡುವವರ ಸಂಖ್ಯೆ ಕೂಡ ಕಡಿಮೆ ಏನು ಇಲ್ಲ. ಸಾಕಷ್ಟು ಮಂದಿ ಅವರನ್ನು ಫಾಲೋ ಮಾಡ್ತಿದ್ದಾರೆ.

ಪ್ರವಾಸದಲ್ಲಿ ಅನುಪಮಾ ಬ್ಯುಸಿ!

ಸದ್ಯ ಶೂಟಿಂಗ್‌ಗಳಿಂದ ಬ್ರೇಕ್‌ ಪಡೆದಿರುವ ಅನುಪಮಾ ಗೌಡ ಅವರು ಫ್ರೀಯಾಗಿದ್ದಾರೆ. ಹೀಗಾಗಿ ಗೋವಾ, ಥೈಲ್ಯಾಂಡ್‌ ಅಂತೆಲ್ಲಾ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಸ್ನೇಹಿತೆಯರ ಜೊತೆಗೆ ಗೋವಾ ಟ್ರಿಪ್‌ ಹೋಗಿದ್ದರು. ಇದೀಗ ಕಳೆದ ವಾರ ಥೈಲ್ಯಾಂಡ್ ಟ್ರಿಪ್ ಹೋಗಿದ್ದ ಅನುಪಮಾ ಗೌಡ, ಊರು ಸುತ್ತಿ ಬಂದಿದ್ದಾರೆ. ಥೈಲ್ಯಾಂಡ್‌ನಲ್ಲಿ ಒಂದು ವಾರಗಳ ಕಾಲ ಉಳಿದುಕೊಂಡಿದ್ದ ಅನುಪಮಾ, ಸ್ಕೂಬಾ ಡೈವಿಂಗ್ ಟ್ರೈನಿಂಗ್ ಮಾಡಿದ್ದಾರೆ. ಒಂದು ಇಡೀ ದಿನ ಆನೆ ಕ್ಯಾಂಪ್‌ನಲ್ಲಿದ್ದು, 70 ವರ್ಷ ಯೋಯೋ ಎಂಬ ಆನೆಗೆ ಊಟ ಕೊಟ್ಟು, ಸ್ನಾನ ಮಾಡಿಸಿ ಖುಷಿ ಪಟ್ಟಿದ್ದಾರೆ. ಓಪನ್‌ ವಾಟರ್‌ ಮತ್ತು ಅಡ್ವಾನ್ಸ್ ಓಪನ್‌ ಡ್ರೈವಿಂಗ್ ಮಾಡಿ ಸರ್ಟಿಫಿಕೇಟ್‌ ಅನ್ನೂ ಪಡೆದುಕೊಂಡಿದ್ದಾರೆ.

More from Filmibeat

English summary
Actress Anupama Gowda Took Break From Shooting And Enjoying Trip,
Read more about: anupama gowda actress ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X