ಕಿರುತೆರೆಯಲ್ಲಿ ಮಿಂಚುತ್ತಿರುವ ಗುಂಗುರು ಕೂದಲಿನ ಈ ಸುಂದರಿ ಯಾರು ಗೊತ್ತೇ? ಹಿನ್ನೆಲೆಯೇನು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಗಂಗೆ ಗೌರಿ' ಧಾರಾವಾಹಿಯೂ ಕೂಡಾ ಒಂದು. 'ಗಂಗೆ ಗೌರಿ' ಧಾರಾವಾಹಿಯಲ್ಲಿ ಅಖಿಲಾ ಆಗಿ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ಅಪೂರ್ವ ಭಾರಧ್ವಾಜ್ ಅಂದ ಹಾಗೇ ಅಖಿಲಾ ಪಾತ್ರ ಸಂಪೂರ್ಣ ನೆಗೆಟಿವ್ ಛಾಯೆಯನ್ನು ಒಳಗೊಂಡಿರುವ ಪಾತ್ರ. ಸಂಕ್ಷಿಪ್ತವಾಗಿ ಹೇಳಬೇಕು ಎಂದಾದರೆ, ಅದು ಖಳನಾಯಕಿಯ ಪಾತ್ರ ಎಂದರೆ ತಪ್ಪಾಗಲಾರದು.

"ಅಖಿಲಾ ಪಾತ್ರ ಕೊಂಚ ವಿಭಿನ್ನವಾದುದು. ಮುಖ್ಯವಾಗಿ ಅದು ನೆಗೆಟಿವ್ ಪಾತ್ರ. ಮೊದಲಿನಿಂದಲೂ ನನಗೆ ಇಂತಹ ಒಂದು ಪಾತ್ರಕ್ಕೆ ಜೀವ ತುಂಬಬೇಕು ಎಂಬ ಆಸೆಯಿತ್ತು. ಯಾಕೆಂದರೆ, ನೆಗೆಟಿವ್ ರೋಲ್‌ನಲ್ಲಿ ನಟನೆಗೆ ಅವಕಾಶ ಜಾಸ್ತಿ. ಪ್ರತಿಯೊಂದು ಸಂಚಿಕೆಯೂ ಸಾಕಷ್ಟು ಸವಾಲುಗಳನ್ನು ಒಳಗೊಂಡಿರುತ್ತದೆ" ಎಂದು ನಟಿ ಅಪೂರ್ವ ಭಾರಧ್ವಾಜ್ ಹೇಳುತ್ತಾರೆ.

Actress Apoorva says that it is fun to act in a role that is not mine

"ಅಭಿನಯಿಸಲು ಯಾವುದೇ ಪಾತ್ರವಾದರೂ ಸರಿ, ಸವಾಲಿನದ್ದಾಗಿರಬೇಕು. ಜೊತೆಗೆ ಪ್ರತಿ ಪಾತ್ರದಿಂದಲೂ ನಾವು ಹೊಸತನ್ನು ಏನಾದರೂ ಕಲಿಯಬೇಕು. ಖಳನಾಯಕಿಯ ಪಾತ್ರ ನನಗೆ ಹೊಸದೇನಲ್ಲ. ಈ ಹಿಂದೆ ಧಾರಾವಾಹಿಯೊಂದರಲ್ಲಿ ಖಳನಾಯಕಿಯಾಗಿ ನಾನು ಕಾಣಿಸಿಕೊಂಡಿದ್ದೆ. ಇದೀಗ ಮತ್ತೆ ಖಳನಾಯಕಿಯಾಗಿ ನಟಿಸುತ್ತಿದ್ದೇನೆ. ನನ್ನದಲ್ಲದ ಪಾತ್ರಕ್ಕೆ ಜೀವ ತುಂಬಲು ಖುಷಿಯಿದೆ" ಎಂದು ಹೇಳುತ್ತಾರೆ ಅಪೂರ್ವ.

'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ನಾಯಕಿ ಇಷ್ಟ ಆಗಿ ನಟಿಸಿದ್ದ ಅಪೂರ್ವ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಹಿರಿತೆರೆಗೆ ಹಾರಿದ ಈಕೆ 'ಬ್ಯಾಡ್', 'ನೋಡಿದವರು ಏನಂತಾರೆ' ಸಿನಿಮಾಗಳಲ್ಲಿ ಅಭಿನಯಿಸಿದ ಅಪೂರ್ವ ಇದೀಗ ಅಖಿಲಾ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದರು. 'ಅನುರೂಪ' ಧಾರಾವಾಹಿಯ ಸುನೈನಾ ಆಗಿ ಕಿರುತೆರೆ ನಂಟು ಬೆಳೆಸಿಕೊಂಡಿರುವ ಈಕೆ ರೆಡಿಯೋ ಆರ್ ಜೆ ಯಾಗಿ ಮೋಡಿ ಮಾಡಿದ ಬೆಡಗಿ.

Actress Apoorva says that it is fun to act in a role that is not mine

ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಪೂರ್ವ ಯಾವತ್ತೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಟೆಕ್ನಿಷಿಯನ್ ಆಗಿ ಕಿರುತೆರೆಗೆ ಕಾಲಿಟ್ಟ ಈಕೆ ಮೊದಲ ಬಾರಿ ನಟಿಸಿದ್ದು 'ಅನುರೂಪ' ಧಾರಾವಾಹಿಯಲ್ಲಿ. ನಂತರ 'ಚಕ್ರವ್ಯೂಹ', 'ಗಿರಿಜಾ ಕಲ್ಯಾಣ' ಧಾರಾವಾಹಿಗಳಲ್ಲಿ ನಟಿಸಿದ್ದ ಈಕೆ 'ವಾರಸ್ದಾರ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದರು‌.

'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಇಷ್ಟ ಆಗಿ ಕಾಣಿಸಿಕೊಂಡ ಅಪೂರ್ವ ಭಾರಧ್ವಾಜ್ ಹಿರಿತೆರೆಯಲ್ಲಿಯೂ ಮೋಡಿದ ಬೆಡಗಿ‌. 'ಮಿರ್ಚಿ ಮಂಡಕ್ಕಿ ಖಡಕ್ ಚಾಯ್', 'ಡಬಲ್ ಧಮಾಕಾ', 'ಅಭ್ಯಂಜನ', 'ಉಪ್ಪಿನ ಕಾಗದ', 'ನೋಡಿ ಸ್ವಾಮಿ ಇರೋದು ಹೀಗೆ', 'ಕ್ರಿಟಿಕಲ್ ಕೀರ್ತನೆಗಳು' ಹಾಗೂ 'ನಾನು ಅವನು ಮತ್ತೆ ಸರೋಜ', 'ಬ್ಯಾಡ್' ಸಿನಿಮಾಗಳಲ್ಲಿ ಈಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Apoorva says that it is fun to act in a role that is not mine:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X