ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರೋ ಈ ನಟಿ ಯಾರು ಗೊತ್ತೇ?

By ಅನಿತಾ ಬನಾರಿ

ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಈಗಾಗಲೇ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಚಿಕ್ಕ ಪಾತ್ರವನ್ನು ಮಾಡಿದರೂ ಸಹ ನಟಿ ಅರ್ಚನಾ ಕೊಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಬೆನ್ನಲ್ಲೇ ಈಗ ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಇದುವರೆಗೂ ಈ ನಟಿ ಸುಮಾರು 12 ಸಿನಿಮಾಗಳಲ್ಲಿ ನಟಿಸಿದ್ದು ಇನ್ನೂ ಎರಡು-ಮೂರು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಈವರೆಗೆ 'ಅರಣ್ಯಕಾಂಡ', 'ಡಿಯರ್‌ ಸತ್ಯ', 'ಟ್ರಿಪಲ್‌ ರೈಡಿಂಗ್‌' ಸೇರಿದಂತೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಬ ಸಿನಿಮಾದಲ್ಲಿ ನಟಿಸಿರುವ ನಟಿ ಅರ್ಚನಾ ಕೊಟ್ಟಿಗೆ ಸದ್ಯಕ್ಕೆ 'ಫಾರೆಸ್ಟ್' ಎಂಬ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿ ಇದ್ದಾರಂತೆ.

Actress Archana Kottige has spoken about her next projects

ಹೌದು, ನಟಿ ಅರ್ಚನಾ ಕೊಟ್ಟಿಗೆ ನಟಿಸುತ್ತಿರುವ 'ಫಾರೆಸ್ಟ್' ಎಂಬ ಸಿನಿಮಾ ಶೂಟಿಂಗ್ ಈಗಾಗಲೇ ನಡೆಯುತ್ತಿದ್ದು, ಈ ಬಗ್ಗೆ ಅವರು ಮುಕ್ತವಾಗಿ ಒಂದಷ್ಟು ಮಾಹಿತಿಯನ್ನು ಈಕೆ ಹಂಚಿಕೊಂಡಿದ್ದಾರೆ. "ಫಾರೆಸ್ಟ್ ಎಂಬ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದರಲ್ಲಿ ನಾನು ರಂಗಾಯಣ ರಘು ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಈ ಬಗ್ಗೆ ನನಗೆ ಬಹಳ ಸಂತೋಷವಿದೆ. ಈ ಸಿನಿಮಾದಲ್ಲಿ ನಾನು ಮೊದಲ ಬಾರಿಗೆ ಒಂದಷ್ಟು ಸ್ಟಂಟ್‌ಗಳನ್ನು ಮಾಡಿದ್ದೇನೆ. ಆ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಈವರೆಗೂ ನಾನು ಮಾಡಿರುವ ಎಲ್ಲಾ ಪಾತ್ರಗಳಿಗೂ ನ್ಯಾಯವಾಗಿ ಒದಗಿಸಿದ್ದೇನೆ ಎಂಬ ನಂಬಿಕೆಯಲ್ಲಿದ್ದೇನೆ. ಇದೀಗ ಮೊದಲ ಬಾರಿಗೆ ಬಹಳ ವಿಭಿನ್ನವಾದ ಪಾತ್ರವನ್ನು ಮಾಡುತ್ತಿರುವುದರ ಬಗ್ಗೆ ಬಹಳ ಸಂತೋಷವಿದೆ. ಹೆಚ್ಚಿನ ಶೂಟಿಂಗ್ ಎಲ್ಲವೂ ಅರಣ್ಯದಲ್ಲೇ. ಸದ್ಯಕ್ಕೆ ಶೂಟಿಂಗ್ ಹೆಚ್ಚು ಕಮ್ಮಿ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಗೊಳ್ಳಲಿದೆ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿದೇ ತೆಲುಗು ಚಿತ್ರರಂಗದಲ್ಲೂ ಅವಕಾಶಗಳನ್ನು ಪಡೆಯುತ್ತಿರುವ ನಟಿ ಅರ್ಚನಾ ಕೊಟ್ಟಿಗೆ ಅದಕ್ಕೆ ಮಾತನಾಡಿದ್ದು "ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ಲೀಡ್ ನಟಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಸಿನಿಮಾದ ಶೂಟಿಂಗ್ ಈಗಾಗಲೇ ಪ್ರಾರಂಭಗೊಂಡಿದ್ದು, ಸಿನಿಮಾಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ಕನ್ನಡವಲ್ಲದ ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ನನಗೆ ಖುಷಿ ತಂದಿದೆ" ಎಂದು ಹೇಳಿದ್ದಾರೆ.

ಇದರ ಜೊತೆಗೆ "ಕನ್ನಡ ನಮಗೆ ಗೊತ್ತಿರುವ ಭಾಷೆ ಆದ್ದರಿಂದ ಡೈಲಾಗ್‌ಗೆ ಸರಿಯಾದ ಭಾವವನ್ನು ತೋರಿಸಲು ಸಾಧ್ಯವಾಗುತ್ತದೆ. ಬೇರೆ ಭಾಷೆಯಲ್ಲಿ ನಟಿಸುವಾಗ ಭಾಷೆಯನ್ನು ಚೆನ್ನಾಗಿ ತಿಳಿದರೆ ಮಾತ್ರ ಭಾವವನ್ನು ವ್ಯಕ್ತಪಡಿಸಲು ಸಾಧ್ಯ. ಹಾಗಾಗಿ ಈಗ ತೆಲುಗು ಕಲಿಕೆಯಲ್ಲಿ ತೊಡಗಿದ್ದೇನೆ. ನಮಗೆ ಭಾಷೆಯಲ್ಲಿ ಕೆಲ ಪದಗಳು ಹೆಚ್ಚು ಕಮ್ಮಿಯಾದರೂ ನಮಗೆ ಅದನ್ನು ಸರಿಪಡಿಸಲು ತಿಳಿಯುತ್ತದೆ. ಬೇರೆ ಭಾಷೆಗಳಲ್ಲಿ ಆ ಸ್ವಾತಂತ್ರ್ಯವಿರುವುದಿಲ್ಲ. ಏನೇ ಹೆಚ್ಚು ಕಮ್ಮಿಯಾದರೂ ಸಹ ನಮಗೆ ಭಾಷೆ ಬಾರದ ಕಾರಣ ಸಮಸ್ಯೆಯಾಗುತ್ತದೆ"ಎಂದು ತಮ್ಮ ಅನುಭವವನ್ನು ನಟಿ ಅರ್ಚನಾ ಕೊಟ್ಟಿಗೆ ಹೇಳಿಕೊಂಡಿದ್ದಾರೆ.

Actress Archana Kottige has spoken about her next projects

ಕನ್ನಡದಲ್ಲಿ 'ಗಾಳಿಗುಡ್ಡ' ಎಂಬ ಸಿನಿಮಾದಲ್ಲೂ ಅರ್ಚನ ಕೊಟ್ಟಿಗೆ ನಟಿಸುತ್ತಿದ್ದು ಇನ್ನು ಹಲವಾರು ಸಿನಿಮಾಗಳ ಆಫರ್ ಬಂದಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Actress Archana Kottige will be acting in a Telugu movie for the first time:
Read more about: actress anitha banari ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X