Archana: ವಿದೇಶದಲ್ಲಿ 'ಮನೆದೇವ್ರು' ನಟಿ ಅರ್ಚನಾಗೆ ಸೀಮಂತ, ಮುದ್ದಾದ ಫೋಟೋಸ್ ನೋಡಿ

By Poorva

ನಟಿ ಅರ್ಚನಾ ಲಕ್ಷ್ಮಿನರಸಿಂಹ ಸ್ವಾಮಿ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಇದೀಗ ಅದ್ದೂರಿಯಾಗಿ ಸೀಮಂತ ಮಾಡಿಕೊಂಡಿದ್ದು ಅರ್ಚನಾ ಅವರನ್ನು ನೋಡಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.. ಅರ್ಚನಾ ಬೇಬಿ ಶವರ್ ದಿನವೇ ಮಗುವಿನ ಲಿಂಗ ಬಹಿರಂಗ ಪಡಿಸಿದ್ದಾರೆ. ಹೌದು ಮದುವೆ ಆದ ಬಳಿಕ ಈ ನಟಿ ನಟನೆಯಿಂದ ದೂರ ಉಳಿದಿದ್ದಾರೆ.

ವಿಘ್ನೇಶ್ ಶರ್ಮಾ ಅವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿರುವ ನಟಿ ಅರ್ಚನಾ, ಕನ್ನಡ ತೆಲುಗು ಹೀಗೆ ಹಲವು ಭಾಷೆಗಳಲ್ಲಿ ನಟನೆ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು. ಅರ್ಚನಾ ಮೊದಲಿಗೆ 'ಮಿಸ್ ಕರ್ನಾಟಕ 2013' ಪಟ್ಟ ಪಡೆದಿದ್ದರು . ಅದಾದ ಬಳಿಕ ಮಧುಬಾಲ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಕೂಡ ಇವರು ಛಾಪು ಮೂಡಿಸಿದ್ದಾರೆ.

Actress Archana Lakshminarasimhaswamy baby shower in abroad, see pics

ಮನೆದೇವ್ರು ಎಂಬ ಧಾರಾವಾಹಿಯಲ್ಲಿ ಇವರು ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದರು. ಅದಾದ ಬಳಿಕ 'ಆ ದಿನಗಳು' ಖ್ಯಾತಿಯ ಚೇತನ್ ಜೊತೆ ಅರ್ಚನಾ ಅವರು 'ನೂರೊಂದು ನೆನಪು' ಸಿನಿಮಾದಲ್ಲಿಯೂ ಅಭಿನಯಿಸಿದ್ದರು. ಹಲವಾರು ತೆಲುಗು ಕಿರುತೆರೆ ಧಾರಾವಾಹಿಯಲ್ಲಿ ಮಿಂಚಿದ್ದರು. ಇದೀಗ ವಿದೇಶದಲ್ಲಿ ಸೀಮಂತ ಶಾಸ್ತ್ರ ಮಾಡಿಸಿಕೊಂಡು ಖುಷಿ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ನಟಿ ಸೀಮಂತದ ಜೊತೆ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂಬ ವಿಚಾರವನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿದ್ದ ಅರ್ಚನಾ ಈಗ ಫ್ಲೋರಿಡಾಗೆ ಶಿಫ್ಟ್ ಆಗಿದ್ದಾರೆ. ವಿದೇಶಕ್ಕೆ ಹೋಗಿ 6 ತಿಂಗಳುಗಳ ಕಾಲ ಇವರು ಮನೆಯಲ್ಲಿ ಸುಮ್ಮನೆ ಇದ್ದರಂತೆ. ಇದೀಗ ಅವರು ಎಚ್ ಆರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಜೂನ್ ನಲ್ಲಿ ತಾನು ತಾಯಿ ಆಗುತ್ತಾ ಇರುವ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

ಮೈಸೂರಿನ ಹುಡುಗಿ ಅರ್ಚನಾ

ವಿದೇಶದಲ್ಲಿ ಸೀಮಂತವನ್ನು ಆಚರಣೆ ಮಾಡಿ ಜನರ ಮೆಚ್ಚುಗೆ ಗಳಿಸಿರುವ ನಟಿ ಅರ್ಚನಾ ಮೂಲತಃ ಮೈಸೂರಿನವರು. ಸೀಮಂತ ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋ ನೋಡಿ ಅಭಿಮಾನಿಗಳು ಖುಷಿ ಪಡುತ್ತಾ ಇದ್ದಾರೆ.. ಇನ್ನೂ ವಿದೇಶದಲ್ಲಿ ಇರುವ ಅರ್ಚನಾಗೆ ತಾಯಿ ಪ್ರೀತಿಯು ಸಿಗುತ್ತಿದೆ.

Actress Archana Lakshminarasimhaswamy baby shower in abroad, see pics

ಮಗಳ ಮನೆಗೆ ಹೋದ ಅರ್ಚನಾ ತಾಯಿ

ಹೌದು.. ಮಗಳು ಗರ್ಭಿಣಿ ಎಂದು ತಿಳಿದ ಬಳಿಕ ಮಗಳ ಮನೆಗೆ ಅರ್ಚನಾ ತಾಯಿ ಕೂಡ ಆಗಮಿಸಿದ್ದಾರೆ.. ಅರ್ಚನಾ ತನ್ನ ತಾಯಿ ಜೊತೆ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ. ಪಿಂಗ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಅರ್ಚನಾ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಮತ್ತು ಮಾಡ್ರನ್ ಎರಡೂ ರೀತಿಯಲ್ಲಿ ಸೀಮಂತ ಮಾಡಿಸಿಕೊಂಡಿದ್ದಾರೆ.

More from Filmibeat

English summary
Actress Archana Lakshminarasimhaswamy baby shower in abroad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X