'ಶ್ರೀಗೌರಿ' ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿ ಯಾರು? ಹಿನ್ನೆಲೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀಗೌರಿ' ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. 'ಶ್ರೀಗೌರಿ' ಧಾರಾವಾಹಿಯಲ್ಲಿ ನಾಯಕ ಅಪ್ಪುವಿನ ತಂಗಿ ಅರ್ಚನಾ ಪಾತ್ರದಲ್ಲಿ ನಟಿ ಆರೋಹಿ ನೈನಾ ನಟಿಸುತ್ತಿದ್ದಾರೆ. ಆರಂಭದಲ್ಲಿ ಪಾಸಿಟಿವ್ ಎಂದೆನಿಸಿದರೂ ಸಂಪೂರ್ಣ ನೆಗೆಟಿವ್ ಛಾಯೆಯನ್ನು ಒಳಗೊಂಡಿರುವ ಅರ್ಚನಾ ಪಾತ್ರದ ಮೂಲಕ ನಟಿ ಆರೋಹಿ ನೈನಾ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.
ಕಥೆಯ ನಾಯಕ ಹಾಗೂ ನಾಯಕಿಗೆ ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಅರ್ಚನಾಗೆ ತನ್ನ ಸ್ವಾರ್ಥವೇ ಮುಖ್ಯ. ತನಗೇನು ಬೇಕೊ ಅದನ್ನು ಸುಲಭವಾಗಿ ಪಡೆಯುವ ನೈಪುಣ್ಯತೆಯು ಆಕೆಯಾಗಿದೆ. ತಾನು ತನ್ನ ಜೀವನ ಹಾಗೂ ತನ್ನ ಸುಖವಷ್ಟೇ ಅರ್ಚನಾಳಿಗೆ ಮುಖ್ಯ. ಇಂತಹ ಅರ್ಚನಾ ಎಂಬ ಪಾತ್ರಕ್ಕೆ ಬಣ್ಣ ತುಂಬುತ್ತಿರುವ ಆರೋಹಿ ನೈನಾ ಕಾಫಿ ನಾಡಿನ ಕುವರಿ ಹೌದು.

ಚಿಕ್ಕಮಗಳೂರಿನ ಚೆಲುವೆ ಆರೋಹಿ ನೈನಾ ಅವರು ನಟನೆಗೆ ಹೊಸಬರೇನಲ್ಲ. 'ಶ್ರೀ ಗೌರಿ' ಧಾರಾವಾಹಿಯ ಮೊದಲು 'ಕನ್ನಡತಿ' ಧಾರಾವಾಹಿಯಲ್ಲಿ ಸಾನಿಯಾ ಎಂಬ ನೆಗೆಟಿವ್ ರೋಲ್ ಮಾಡಿದ್ದರು. ಹೌದು ಬಹಳ ಜನಪ್ರಿಯತೆಯನ್ನು ಗಳಿಸಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿ ಬಹಳಷ್ಟು ಹೆಸರು ಗಳಿಸಿದ್ದರು ಈ ನಟಿ.
ಅದಕ್ಕೂ ಮೊದಲು 'ಹೂ ಮಳೆ' ಧಾರಾವಾಹಿಯಲ್ಲಿ ಈಕೆ ನಟಿಸಿದ್ದರು. ಸದ್ಯ 'ಶ್ರೀಗೌರಿ' ಧಾರಾವಾಹಿಯಲ್ಲಿ ತಮ್ಮ ನಟನೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಷ್ಟಕ್ಕೂ ಈ ನಟಿ ಆರೋಹಿ ನೈನಾ ಅವರಿಗೆ ಕೇವಲ 24 ವರ್ಷ, ಮೂಲತಃ ಚಿಕ್ಕಮಗಳೂರಿನವರಾದ ಇವರು ಪಕ್ಕ ಮಲೆನಾಡ ಹುಡುಗಿ. ಇವರ ತಂದೆ ತಾಯಿ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು ಇವರು ವೃತ್ತಿಗಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿರುವ ಇವರು, ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿದ್ದಾರೆ.

ತಮ್ಮ 18ನೇ ವಯಸ್ಸಿನಲ್ಲಿ ನಟಿಯಾಗಬೇಕೆಂದು ಕನಸು ಹೊತ್ತ ನಟಿ ಆರೋಹಿಯವರು ಇದೀಗ ಹೆಚ್ಚಾಗಿ ನೆಗೆಟಿವ್ ರೋಲ್‌ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಹದ್ದೇನು ಹವ್ಯಾಸ ಇರದ ಇವರಿಗೆ ಸುತ್ತಾಡೋದು ಅಂದರೆ ಅಷ್ಟಕಷ್ಟೇ ಅಂತೆ.
ಶೂಟಿಂಗ್ ಮುಗಿದ ನಂತರ ಮನೆಗೆ ಹೋಗಿ ರೆಸ್ಟ್ ಮಾಡುವುದೇ ಅವರಿಗೆ ಇಷ್ಟವಂತೆ. ತಮ್ಮ ಕಾಲೇಜಿನ ದಿಗಳನ್ನು ಮಾತ್ರ ತುಂಬಾ ಮಿಸ್ ಮಾಡಿಕೊಳ್ಳುತ್ತಾರಂತೆ. ಕಾಲೇಜು ದಿನಗಳು ಅವರ ಜೀವನದ ಗೋಲ್ಡನ್ ಇಯರ್ಸ್ ಎಂದಿದ್ದಾರೆ ನಟಿ ಆರೋಹಿ ನೈನಾ!
ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಇವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟಿನಲ್ಲಿ ಆಗಾಗ ಫೋಟೋ ಶೂಟ್ ಗಳು ಮತ್ತೆ ಇತರೆ ಫೋಟೋಗಳನ್ನು ಪೋಸ್ಟ್ ಮಾಡಿ ತಮ್ಮ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಎಂಗೇಜಿಂಗ್ ಆಗಿ ಇಡುತ್ತಾರೆ.


Click it and Unblock the Notifications











