ಶೂಟಿಂಗ್ ನೋಡಲು ಹೋದ ಕೊಡಗಿನ ಆರೋಹಿ ನಟಿಯಾಗಿದ್ದು ಹೇಗೆ ಗೊತ್ತಾ?

By ಪೂರ್ವ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂಮಳೆ' ಧಾರಾವಾಹಿಯಲ್ಲಿ ನಾಯಕಿ ಪಾತ್ರಧಾರಿಯಾದ ಲಹರಿಯ ಅತ್ತಿಗೆ, ಕಾರ್ಪೋರೆಟ್ ಕಾವೇರಿ ಸೊಸೆ ಶೋಭಾ ಆಗಿ ನಟಿಸಿದ್ದ ಕಾಫಿನಾಡಿನ ಕುವರಿಯ ಹೆಸರು ಆರೋಹಿ ನೈನಾ.

ಸದ್ಯ ಶೋಭಾ ಆಗಿ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಆರೋಹಿ ಎಂದಿಗೂ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಂಡವರಲ್ಲ. ಬದಲಿಗೆ ಆಕಸ್ಮಿಕವಾಗಿ ನಟನಾ ಲೋಕಕ್ಕೆ ಕಾಲಿಟ್ಟರು. ಇಂದು ತಮ್ಮ ಮನೋಜ್ಞ ನಟನೆಯ ಮೂಲಕ ನಟನಾ ಲೋಕದಲ್ಲಿ ಛಾಪು ಮೂಡಿಸುತ್ತಿದ್ದಾರೆ.

ಚಿಕ್ಕಮಗಳೂರಿನ ಎಸ್ಟೇಟ್ ಒಂದರಲ್ಲಿ ಒಂದು ಧಾರಾವಾಹಿಯ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ಎನ್ನುವ ಶಬ್ಧ ಕಿವಿಗೆ ಬಿದ್ದದ್ದೇ ತಡ ಶೂಟಿಂಗ್ ನೋಡಲು ಹೋದರು ಆರೋಹಿ. ಶೂಟಿಂಗ್ ನೋಡಲು ಹೋದ ಆರೋಹಿ ಇದು ತನ್ನ ಜೀವನದ ಪಥವನ್ನೇ ಬದಲಿಸಲಿದೆ ಎಂದು ಯಾವತ್ತಿಗೂ ಅಂದುಕೊಂಡಿರಲಿಲ್ಲ.

ನೈನಾ ಪ್ರಯತ್ನಕ್ಕೆ ದೊರೆತ ಪ್ರತಿಫಲ

ನೈನಾ ಪ್ರಯತ್ನಕ್ಕೆ ದೊರೆತ ಪ್ರತಿಫಲ

ಧಾರಾವಾಹಿ ಶೂಟಿಂಗ್ ನೋಡಲು ಹೋದ ಆರೋಹಿ ಅವರನ್ನು ಕಂಡ ಸೀರಿಯಲ್ ಮ್ಯಾನೇಜರ್ ನೀವ್ಯಾಕೆ ನಟಿಸಬಾರದು ಎಂದು ಕೇಳಿದರು. ಒಂದು ವೇಳೆ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಡ್ಕೋಬೇಡಿ ಎಂದು ಸಲಹೆ ನೀಡಿದ್ದರು. ಅವರು ಹೇಳಿದ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಆರೋಹಿ ಮುಂದೆ ಧಾರಾವಾಹಿಗಳ ಆಡಿಶನ್‌ಗಳಿಗೆ ಹೋಗುವ ನಿರ್ಧಾರ ಮಾಡಿದರು. ಒಂದಷ್ಟು ಆಡಿಶನ್‌ಗಳಿಗೆ ಹೋದ ಆರೋಹಿ ನೈನಾ ಪ್ರಯತ್ನಕ್ಕೆ ಸರಿಯಾದ ಪ್ರತಿಫಲವೂ ದೊರೆಯಿತು.

ಸಣ್ಣವೆಂದು ತಿರಸ್ಕರಿಸಲಿಲ್ಲ ಆರೋಹಿ ನೈನಾ

ಸಣ್ಣವೆಂದು ತಿರಸ್ಕರಿಸಲಿಲ್ಲ ಆರೋಹಿ ನೈನಾ

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇವಳು ಸುಜಾತಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವ ಅವಕಾಶ ದೊರೆತಾಗ ಸಣ್ಣ ಪಾತ್ರ ಎಂದು ಬೇಡ ಎನ್ನಲಿಲ್ಲ ಆರೋಹಿ. ಬದಲಿಗೆ ದೊರೆತಿರುವಂತಹ ಅವಕಾಶ ಸಣ್ಣದೋ, ದೊಡ್ಡದೋ ಅದನ್ನು ತಿರಸ್ಕರಿಸಬಾರದು. ಬದಲಿಗೆ ಬಂದ ಅವಕಾಶವನ್ನು ಸದುಪಯೋಗಪಡಿಸಬೇಕು ಎಂದು ನಿರ್ಧರಿಸಿದ ನಟನಾ ಕ್ಷೇತ್ರಕ್ಕೆ ಕಾಲಿಟ್ಟೆ ಬಿಟ್ಟರು. 'ಇವಳು ಸುಜಾತಾ' ಧಾರಾವಾಹಿಯ ನಂತರ 'ಹೂಮಳೆ' ಧಾರಾವಾಹಿಯಲ್ಲಿ ಶೋಭಾ ಆಗಿ ಅಭಿನಯಿಸುವ ಅವಕಾಶ ಪಡೆದುಕೊಂಡ ಆರೋಹಿ ಶೋಭಾ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ .

ಕಿರುತೆರೆ ಮನೆಮಾತಾದ ನಟಿ

ಕಿರುತೆರೆ ಮನೆಮಾತಾದ ನಟಿ

ಮೊದಲ ಬಾರಿಗೆ ಶೋಭಾ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಾಗ ನನಗಾದ ಸಂತಸ ಅಷ್ಟಿಷ್ಟಲ್ಲ. ಅದೇ ಕಾರಣದಿಂದ ವಯಸ್ಸಿಗೂ ಮೀರಿದ ಪಾತ್ರವಾದರೂ ಸಿಕ್ಕಿದ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಎಂದು ನಟಿಸಲು ಒಪ್ಪಿಕೊಂಡೆ. ಆದರೆ ಇದೀಗ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದೇನೆ ಎಂದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೆ ಏನಿಲ್ಲ ಎಂದು ಹೇಳುತ್ತಾರೆ ಆರೋಹಿ ನೈನಾ.

ಸಣ್ಣ ಅಳುಕಿನಲ್ಲಿ ಕಿರುತೆರೆ ಪ್ರವೇಶಿಸಿದ ನಟಿ

ಸಣ್ಣ ಅಳುಕಿನಲ್ಲಿ ಕಿರುತೆರೆ ಪ್ರವೇಶಿಸಿದ ನಟಿ

ಮೊದಲ ಬಾರಿ ಶೋಭಾ ಪಾತ್ರದಲ್ಲಿ ಕಾಣಿಸಿಕೊಳ್ಳುವಾಗ ಸಣ್ಣ ಅಳುಕಿತ್ತು. ಯಾಕೆಂದರೆ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೇ ಎಂದು ಅನ್ನಿಸಿತ್ತು. ಆದರೆ ಇದೀಗ ಶೋಭಾ ಪಾತ್ರಕ್ಕೆ ದೊರೆತಿರುವ ಮನ್ನಣೆ ಕಂಡು ಖುಷಿಯಾಗುತ್ತಿದೆ ಎಂದು ಹೇಳುವ ಆರೋಹಿ ಇಂದು ನಟಿಯಾಗಿ ಕಿರುತೆರೆ ಲೋಕದಲ್ಲಿ ಮೋಡಿ ಮಾಡುತ್ತಿದ್ದಾರೆ ಎಂದರೆ ಅಪ್ಪ,ಅಮ್ಮ ಮತ್ತು ಅಕ್ಕ ನೀಡಿದ ಪ್ರೋತ್ಸಾಹವೇ ಕಾರಣವಂತೆ.

More from Filmibeat

English summary
Arohi Naina. And she is famous actor Kannada industry. Hear is more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X