ರಿಯಲ್ ಫೇಸ್ ರಿವೀಲ್ ಆಗಿದೆ.. 'ದೃಷ್ಟಿ ಬೊಟ್ಟು' ಬ್ಯೂಟಿಯನ್ನು ಕೊಂಡಾಡಿದ ನೆಟ್ಟಿಗರು

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ಉತ್ಪೇಕ್ಷೆ ಅಲ್ಲ. 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಹಾಗೂ ನಾಯಕ ನಟಿಯಾಗಿ ಅರ್ಪಿತಾ ಮೋಹಿತೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಸೂರ್ಯಗೆ ಈಗಾಗಲೇ ಬಹಳಷ್ಟು ಪಾಪ್ಯುಲಾರಿಟಿ ಇದ್ದು, ಕರ್ನಾಟಕದ ಹೆಂಗಳೆಯರ ಫೇವರೆಟ್ ಹೀರೋಗಳಲ್ಲಿ ಇವರು ಒಬ್ಬರು.

ಅರ್ಪಿತಾ ಮೋಹಿತೆ ಲೀಡ್ ಪಾತ್ರದಲ್ಲಿ ಮಾಡುತ್ತಿರುವ ಮೊದಲ ಧಾರಾವಾಹಿ 'ದೃಷ್ಟಿಬೊಟ್ಟು'. ವಿಪರ್ಯಾಸವೆನ್ನುವಂತೆ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ ದೃಷ್ಟಿ ಪಾತ್ರವನ್ನು ನಿಭಾಯಿಸುತ್ತಿರುವ ಅರ್ಪಿತಾ ಮೋಹಿತೆ ತಮ್ಮ ರಿಯಲ್ ಐಡೆಂಟಿಟಿಯನ್ನು ಮುಚ್ಚಿಟ್ಟುಕೊಳ್ಳಬೇಕಾಗಿದೆ. ಇಡೀ ಮುಖ ಕೈ ಕಾಲಿಗೆ ಮಸಿ ಬಳಿದುಕೊಂಡು ಧಾರಾವಾಹಿ ಹಾಗೂ ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಒಂದು ಮುಖ್ಯ ಕಾರಣವೂ ಇದೆ.

Actress Arpita Mohite of Drishti Bottu serial real face revealed

'ದೃಷ್ಟಿ ಬೊಟ್ಟು' ಧಾರಾವಾಹಿಯ ನಾಯಕ ನಟ ದತ್ತ ಬಾಯಿಗೆ ಸುಂದರವಾದ ಯುವತಿಯರನ್ನು ಕಂಡರೆ ಇಷ್ಟವಿಲ್ಲ. ಸುಂದರವಾದ ಯುವತಿಯರಿಂದ ಮೋಸ ಹೋಗಿರುವ ದತ್ತ ಭಾಯಿ, ಸೌಂದರ್ಯ ಎಂದರೆ ಅಹಂಕಾರ ಜಂಭ ಎಂದೇ ನಂಬಿದ್ದಾನೆ. ಇತ್ತ ಚಿಕ್ಕಂದಿನಿಂದಲೂ ಬಡತನ ಹಾಗೂ ಸಂಕಷ್ಟಗಳಲ್ಲಿ ಬೆಳೆದಿರುವ ದೃಷ್ಟಿ, ದುಷ್ಟ ಕಣ್ಣುಗಳಿಂದ ಪಾರಾಗಲು ತನ್ನ ಸೌಂದರ್ಯವನ್ನು ಮುಚ್ಚಿಕೊಳ್ಳುವ ಕಾರಣಕ್ಕೆ ಮಸಿ ಬಳೆದುಕೊಂಡಿದ್ದಾಳೆ.

ದೃಷ್ಟಿಯ ತಾಯಿ ಈ ರೀತಿಯ ಹೊಸ ಉಪಾಯವನ್ನು ಮಾಡಿ ಚಿಕ್ಕಂದಿನಿಂದಲೂ ದೃಷ್ಟಿ ಮೈ ಕೈ ಮುಖ ಪೂರ್ತಿ ಮಸಿ ಬಳಿಯುತ್ತಿದ್ದಾಳೆ. ಇದೀಗ ದೃಷ್ಟಿ ದತ್ತಭಾಯಿಯನ್ನು ಮದುವೆಯಾದರೂ ಮಸಿ ಬಳಿದುಕೊಂಡು ಓಡಾಡುತ್ತಿದ್ದಾಳೆ. ತನ್ನ ನಿಜವಾದ ಮುಖ ದತ್ತ ಬಾಯಿಗೆ ತಿಳಿದರೆ ಅವನು ತನ್ನನ್ನು ಒಪ್ಪಿಕೊಳ್ಳುತ್ತಾನೋ ಇಲ್ಲವೋ ಎಂಬ ಭಯದಿಂದ ದೃಷ್ಟಿ ಈ ರೀತಿ ಮಾಡಬೇಕಾಗಿದೆ.

ಇನ್ನು ಕಥೆಗೆ ನಾಯಕ ನಟಿ ಬದ್ಧರಾಗಿರುವುದಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕನೆಕ್ಟ್ ಆಗಬೇಕು ಎಂಬ ಕಾರಣಕ್ಕೆ 'ದೃಷ್ಟಿಬೊಟ್ಟು' ಧಾರಾವಾಹಿ ತಂಡದ ಕೋರಿಕೆಯ ಮೇರೆಗೆ ನಟಿ ಅರ್ಪಿತ ಮೋಹಿತೆ ಧಾರಾವಾಹಿ ಶೂಟಿಂಗನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮಗಳಿಗೆ ಹೋಗುವುದಾದರೂ ಮೈ ಕೈಗೆ ಮಸಿ ಬಳಿದುಕೊಂಡು ಓಡಾಡುತ್ತಾರಂತೆ.

Actress Arpita Mohite of Drishti Bottu serial real face revealed

ಆದರೆ, ಇದೀಗ ತಮ್ಮ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ನಟಿ ಅರ್ಪಿತಾ ಮೋಹಿತೆ ಸರ್ಪ್ರೈಸ್ ನೀಡಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಂತೂ ಸಕ್ಕತ್ ಆ್ಯಕ್ಟೀವ್ ಇರುವ ನಟಿ ಅರ್ಪಿತಾ ಮೋಹಿತೆ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ನಿಜವಾದ ಮುಖವನ್ನು ತೋರಿಸಿರುವ ನಟಿ ಅರ್ಪಿತಾ ಮೋಹಿತೆ ನೆಟ್ಟಿಗರಿಂದ ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಸೌಂದರ್ಯದ ಗಣಿ, ಸುಂದರಿ, ಎಂಬಿತ್ಯಾದಿ ಕಾಮೆಂಟ್‌ಗಳ ಸುರಿಮಳೆಯನ್ನೇ ಪಡೆದಿರುವ ನಟಿ ಅರ್ಪಿತಾ ಮೋಹಿತೆ, ಸಾಂಪ್ರದಾಯಿಕ ಹುಡುಗಿಯನ್ನು ತೊಟ್ಟು ಜನಮನ ಗೆದ್ದಿದ್ದಾರೆ. ಅರ್ಪಿತಾ ಮೋಹಿತೆ ಅವರ ಈ ಪೋಸ್ಟ್‌ನಲ್ಲಿ ಕೇಸರಿ ಬಣ್ಣದ ಸೀರೆಗೆ ನೀವಿ ಬ್ಲೂ ಬಣ್ಣದ ಬ್ಲೌಸ್ ಜೊತೆಗೆ ಭರ್ಜರಿ ಬಾರ್ಡರ್ ಇದ್ದು, ಚಂದದ ಜ್ಯುವೆಲರಿ ಸೆಟ್ ಮೂಲಕ ಬಹಳ ಮುದ್ದಾಗಿ ಕಾಣುತ್ತಿದ್ದಾರೆ ಈ ನಟಿ.

ಇಷ್ಟು ದಿನ ತಮ್ಮ ಐಡೆಂಟಿಟಿಯನ್ನು ರಿವೀಲ್ ಮಾಡದೆ ಮಸಿ ಮೆತ್ತಿಕೊಂಡೇ ಓಡಾಡುತ್ತಿದ್ದ ಈ ನಟಿ ಇದೀಗ ತಮ್ಮ ನಿಜ ಮುಖವನ್ನು ತೋರಿಸಿದರು. ಹಿಂದಿನ ಕಾರಣ ಏನು ಎಂಬುದು ಪ್ರೇಕ್ಷಕರ ಅಭಿಮಾನಿಗಳ ಹಾಗೂ ನೆಟ್ಟಿಗರ ಕುತೂಹಲವಾಗಿದೆ.

'ದೃಷ್ಟಿಬೊಟ್ಟು' ಧಾರಾವಾಹಿ ಕಥೆಯಲ್ಲಿಯೂ ದೃಷ್ಟಿ ಆದಷ್ಟು ಬೇಗ ತನ್ನ ನಿಜವಾದ ಮುಖವನ್ನು ತನ್ನ ಪತಿಯಾದ ದತ್ತ ಭಾಯಿಗೆ ತೋರಿಸುವಂತಾಗಲಿ ಎಂದು ಧಾರಾವಾಹಿ ಪ್ರೇಕ್ಷಕರು ಆಶಿಸಿದ್ದಾರೆ. ದತ್ತನ ಪತ್ನಿಯಾಗಿ ಅವನನ್ನು ಮೆಚ್ಚಿಸುವ ಪ್ರಯತ್ನದಲ್ಲಿರುವ ದೃಷ್ಟಿ, ತನ್ನ ನಿಜವಾದ ಐಡೆಂಟಿಟಿಯನ್ನು ರಿವೀಲ್ ಮಾಡಿದಾಗ ಪತಿ ದತ್ತಭಾಯ್ ಯಾವ ರೀತಿ ರಿಯಾಕ್ಟ್ ಮಾಡುತ್ತಾನೆ ಎಂಬುದೇ ಕಥೆಯ ಬಹುದೊಡ್ಡ ಕೌತುಕ ಹಂತವಾಗಿದೆ.

More from Filmibeat

English summary
Netizens praise the lead actress Arpitha Mohite for her role in the Drishti Bottu serial:
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X