ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡತಿ ಆಶಿಕಾ ಪಡುಕೋಣೆ!

By ಪ್ರಿಯಾ ದೊರೆ

ಕನ್ನಡದ ಹಲವು ನಟ-ನಟಿಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಕಿರುತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕರು ಇಂದು ಕೇವಲ ಕನ್ನಡ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.

ಮೂಲತಃ ಕನ್ನಡದವರಾದ ಆಶಿಕಾ ಪಡುಕೋಣೆ ಅವರು, ಪರಭಾಷೆಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ಜನಪ್ರಿಯ ಧಾರಾವಾಹಿ ತ್ರಿನಯನಿ ಅಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಆಶಿಕಾ ಅವರಿಗೆ ತ್ರಿನಯನಿ ಪಾತ್ರ ಬ್ರೇಕ್ ಕೊಟ್ಟ ಧಾರಾವಾಹಿ.

ಈ ಧಾರಾವಾಹಿ ಕನ್ನಡಕ್ಕೂ ಕೂಡ ಡಬ್ ಆಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿದೆ. ತ್ರಿನಯನಿ ಧಾರಾವಾಹಿಯಲ್ಲಿ ಆಶಿಕಾ ಜೊತೆಗೆ ನಾಯಕನ ಪಾತ್ರದಲ್ಲಿ ಚಂದು ಬಿ ಗೌಡ ಕಾಣಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ!

ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ!

'ರಾಜಕುಮಾರಿ‌' ಧಾರಾವಾಹಿ ಮೂಲಕ ಆಶಿಕಾ ಪಡುಕೋಣೆ ಅವರು ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ ತ್ರಿವೇಣಿ ಸಂಗಮ, ನಿಹಾರಿಕಾ, ತಮಿಳ್ ಸೆಲ್ವಿ ಸೇರಿದಂತೆ ಹಲವು ಧಾರಾವಅಹಿಗಳಲ್ಲಿ ಆಶಿಕಾ ಅವರು ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಒಳ್ಳೆಯ ಕಥೆ ಪಾತ್ರ ಸಿಕ್ಕರೆ ನಾನು ನಟಿಸುವುದಕ್ಕೆ ಸಿದ್ಧ ಎಂದೂ ಸಹ ಹೇಳಿದ್ದಾರೆ.

ಸೀರಿಯಲ್‌ಗಳಲ್ಲಿ ಆಶಿಕ ಪಡುಕೋಣೆ!

ಸೀರಿಯಲ್‌ಗಳಲ್ಲಿ ಆಶಿಕ ಪಡುಕೋಣೆ!

ಕನ್ನಡದಲ್ಲೂ ಆಶಿಕಾ ಅವರು ಕಾಣಿಸಿಕೊಳ್ಳಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿ ಆಶಿಕಾ ಪಡುಕೋಣೆಯವರು ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ತಮ್ಮ ಹೊಸ ಮನೆಯ ಹೋಮ್ ಟೂರ್, ಟ್ರಕ್ಕಿಂಗ್, ಗೋವಾ ಟ್ರಿಪ್, ಹನಿಮೂನ್ ರೂಮ್ ಬಗ್ಗೆಯೂ ವೀಡಿಯೋ ಮಾಡಿದ್ದಾರೆ. ಅಲ್ಲದೇ, ಪಿರಿಯಡ್ಸ್ ಬಗ್ಗೆಯೂ ವೀಡಿಯೋ ಮಾಡಿ ಟಿಪ್ಸ್ ನೀಡಿದ್ದಾರೆ.

ಮದುವೆಯಾದ ಆಶಿಕಾ!

ಮದುವೆಯಾದ ಆಶಿಕಾ!

ಇನ್ನು ಕಳೆದ ವರ್ಷ ಆಶಿಕಾ ಪಡುಕೋಣೆ ಅವರು ಉಡುಪಿಯಲ್ಲಿ ಮದುವೆಯಾದರು. ಬೇಗ ಮದುವೆಯಾಗಲು ಇಷ್ಟವಿರದ ಆಶಿಕಾ ಅವರು ಮನೆಯಲ್ಲಿ ತೋರಿಸಿದ ವರನನ್ನು ವರಿಸಿದ್ದಾರೆ. ಚೇತನ್ ಶೆಟ್ಟಿ ತುಂಬಾ ಸೌಮ್ಯ ಸ್ವಾಭಾವದವರು. ನನ್ನ ತಂದೆಯಷ್ಟೇ ತಾಳ್ಮೆ ಅವರಿಗೆ ಎಂದು ಕೂಡ ಹೇಳಿದ್ದರು. ಇನ್ನು ಮದುವೆಯಾದ ಮೇಲೆ ಆಶಿಕಾ ಹೊಸ ಮನೆಯನ್ನು ಖರೀದಿಸಿದ್ದಾರೆ. ಹೊಸ ಕಾರನ್ನು ಕೂಡ ತೆಗೆದುಕೊಂಡಿದ್ದಾರೆ. ಮದುವೆಯ ಬಳಿಕವೂ ಆಶಿಕಾ ನಟಿಸುತ್ತಿದ್ದರು ಇದಕ್ಕೆ ತಮ್ಮ ಮನೆಯವರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ!

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ!

ಆಶಿಕಾ ಪಡುಕೋಣೆ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ. ಮದುವೆಯಾದ ಬಳಿಕ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಕಳೆದ 8 ತಿಂಗಳಿನಿಂದ ಈ ಚಾನೆಲ್ ಸಕ್ರಿಯವಾಗಿಟ್ಟಿರುವ ಆಶಿಕಾ ತಮ್ಮ ಮದುವೆಯ ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾರೆ. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಮದುವೆಯ ವೀಡಿಯೋ ಹಾಗೆಯೇ ಮನೆಗೆ ಎಂಟ್ರಿ ಕೊಟ್ಟ ವೀಡಿಯೋ ಎಲ್ಲವನ್ನೂ ಶೇರ್ ಮಾಡಿದ್ದಾರೆ.

More from Filmibeat

English summary
Actress Ashika Padukone Biography And Life Style, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X