ಧಾರಾವಾಹಿಯಲ್ಲಿ ಕಾಣಿಸಿಕೊಂಡ ಆಶಿಕಾ ರಂಗನಾಥ್
Recommended Video

ಧಾರಾವಾಹಿಯಲ್ಲಿ ಆಶಿಕಾ ರಂಗನಾಥ್ ಮಿಂಚು..! | Filmibeat Kannada
ಸಾಮಾನ್ಯವಾಗಿ ಎಲ್ಲರೂ ಸೀರಿಯಲ್ ನಿಂದ ಸಿನಿಮಾಗೆ ಬರುತ್ತಾರೆ. ಆದರೆ, ನಟಿ ಆಶಿಕಾ ಸಿನಿಮಾದ ಜರ್ನಿಯ ನಡುವೆ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಹಾಗಂತ ಆಶಿಕಾ ರಂಗನಾಥ್ ಯಾವುದೇ ಹೊಸ ಧಾರಾವಾಹಿಯನ್ನು ಮಾಡುತ್ತಿಲ್ಲ. ಬದಲಿಗೆ ಒಂದು ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸರ್ವಮಂಗಳ ಮಾಂಗಲ್ಯೆ' ಧಾರಾವಾಹಿಯಲ್ಲಿ ಈಗ ಆಶಿಕಾ ಕಾಣಿಸಿಕೊಂಡಿದ್ದಾರೆ.
ಆಶಿಕಾ ಅವರ ಸಹೋದರಿ ಅನುಷಾ ಧಾರಾವಾಹಿ ಜಗತ್ತಿನಲ್ಲಿ ಹೆಸರು ಮಾಡಿದ್ದರು. ಆದರೆ, ಆಶಿಕಾ ನೇರವಾಗಿ ಸಿನಿಮಾ ಪಯಣ ಶುರು ಮಾಡಿದ್ದರು. ಆದರೆ, ಈಗ ಅವರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಕೂಡ ಸಿಕ್ಕಿದೆ.

ದಸರ ಹಬ್ಬದ ಪ್ರಯುಕ್ತ ಈ ಸಂಚಿಕೆ ಪ್ರಸಾರ ಆಗಲಿದೆ. ಈಗಾಗಲೇ ಚಿತ್ರೀಕರಣ ಮುಗಿದಿದೆ. ಮೊದಲ ಬಾರಿಗೆ ಧಾರವಾಹಿಯಲ್ಲಿ ನಟಿಸಿ ಆಶಿಕಾ ಹೊಸ ಅನುಭವ ಪಡೆದಿದ್ದಾರೆ.
English summary
kannada actress ashika ranganath did guest appearance in Star Suvarna's sarva mangala mangalye serial.


Click it and Unblock the Notifications