'ರಾಧಾ ರಮಣ'ದ ಆಶಿತಾ ಚಂದ್ರಪ್ಪ ಕೇವಲ ನಟಿಯಷ್ಟೇ ಅಲ್ಲ; ಅವರೊಬ್ಬ ಫ್ಯಾಷನ್ ಸ್ಟೈಲಿಸ್ಟ್

By ಅನಿತಾ ಬನಾರಿ

ಆಶಿತಾ ಚಂದ್ರಪ್ಪ.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ರಾಧಾ ರಮಣ' ಕೂಡಾ ಒಂದು. 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅವನಿ ಆಲಿಯಾಸ್ ರಾಣಿಯಾಗಿ ಅಭಿನಯಿಸಿದ್ದ ಚೆಂದುಳ್ಳಿ ಚೆಲುವೆಯ ಹೆಸರು ಆಶಿತಾ ಚಂದ್ರಪ್ಪ. 'ರಾಧಾ ರಮಣ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ಆಶಿತಾ ಚಂದ್ರಪ್ಪ ಮುಂದೆ ರೋಹನ್ ರಾಘವೇಂದ್ರ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

2023ರ ಸೆಪ್ಟೆಂಬರ್‌ನಲ್ಲಿ ಮುದ್ದು ಮಗಳಿಗೆ ಜನ್ಮ ನೀಡಿದ ನಟಿ ಆಶಿತಾ ಚಂದ್ರಪ್ಪ ಇದೀಗ ಸಂಪೂರ್ಣ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಹೌದು, ಸದ್ಯ ಬಣ್ಣದ ಲೋಕದಿಂದ ದೂರವಿರುವ ಆಶಿತಾ ಚಂದ್ರಪ್ಪ ಮಗಳು ಆರಿಕಾಳ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

Actress Ashita Chandrappa who charmed through acting was a fashion stylist

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಶಾಲಿನಿ ಆಗಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಆಶಿತಾ ಚಂದ್ರಪ್ಪ ಮೊದಲ ಧಾರಾವಾಹಿಯಲ್ಲಿ ಜವಾಬ್ದಾರಿಯುತ ಹೆಣ್ಣುಮಗಳಾಗಿ ತೆರೆಯ ಮೇಲೆ ಮೋಡಿ ಮಾಡಿದರು. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿಯಾಗಿ ಆಶಿತಾ ಅಭಿನಯಿಸಿದ್ದರು.

ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀಲಿ' ಧಾರಾವಾಹಿಯಲ್ಲಿ ಖಳನಾಯಕಿ ರೇಖಾಳಾಗಿ ಅಭಿನಯಿಸಿದ್ದ ಆಶಿತಾ ಕೊನೆಯದಾಗಿ ನಟಿಸಿದ್ದು 'ರಾಧಾ ರಮಣ' ಧಾರಾವಾಹಿಯಲ್ಲಿ. ಸದ್ಯ ನಟನೆಯಿಂದ ದೂರವೇ ಉಳಿದಿರುವ ಆಶಿತಾ ನಟನೆಯ ಹೊರತಾಗಿ ಫ್ಯಾಷನ್ ಸ್ಟೈಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬೆಡಗಿ.

Actress Ashita Chandrappa who charmed through acting was a fashion stylist

ಸಿನಿಮಾ ವಿತರಕ ಚಂದ್ರಪ್ಪ ಅವರ ಮಗಳು ಆಶಿತಾಗೆ ನಟಿಯಾಗುವ ಕನಸಿರಲಿಲ್ಲ. ಹೌದು, ಸಣ್ಣ ವಯಸ್ಸಿನಿಂದಲೂ ಸಿನಿಮಾ ಇಂಡಸ್ಟ್ರಿ ನೋಡುತ್ತಾ ಬೆಳೆದ ಆಶಿತಾ ಎಂದೂ ನಟಿಯಾಗಬೇಕು ಎಂದು ಬಯಸಿದವರಲ್ಲ. ಬದಲಿಗೆ ಅದು ಆಕಸ್ಮಿಕವಾಗಿ ದೊರಕಿದಂತಹ ಅವಕಾಶ ಹೌದು. ಬಯಸದೆ ಬಂದ ಅವಕಾಶದಿಂದ ನಟಿಯಾಗಿ ಭಡ್ತಿ ಪಡೆದ ಆಶಿತಾ ಅಭಿನಯಿಸಿದ್ದು ಬರೀ ಒಂದೆರಡು ಧಾರಾವಾಹಿಗಳಲ್ಲಷ್ಟೇ ಆದರೂ ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವುದಂತೂ ನಿಜ.

ಇದೀಗ ಮುದ್ದು ಮಗಳು ಆರಿಕಾಳ ಲಾಲನೆ ಪಾಲನೆಯಲ್ಲಿ ಸಕತ್ ಬ್ಯುಸಿಯಾಗಿರುವ ಆಶಿತಾ ಚಂದ್ರಪ್ಪ ಮುಂದೊಂದು ದಿನ ಮತ್ತೆ ಕಿರುತೆರೆಗೆ ಮರಳಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಲೇಟ್ ಆದರೂ ಪರವಾಗಿಲ್ಲ, ಮತ್ತೊಮ್ಮೆ ಆಶಿತಾರನ್ನು ಬಣ್ಣದ ಲೋಕದಲ್ಲಿ ನೋಡಲು, ನಟನೆಯನ್ನು ಆಸ್ವಾದಿಸಲು ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ.

More from Filmibeat

English summary
Ashita Chandrappa, who charmed as Avani in the serial Radha Ramana, is currently away from acting. Do you know the reason,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X