"ಪಾತ್ರದಲ್ಲಿ ಧಮ್ ಇರಬೇಕು.. ಚಾಲೆಂಜಿಂಗ್ ಆಗಿರಬೇಕು" ಅಂತಹ ಪಾತ್ರ ನಟಿ ಅಶ್ವಿನಿಗೆ ಇಷ್ಟವಂತೆ
2018ರಲ್ಲಿ ತೆರೆಕಂಡ 'ಮುದ್ದುಲಕ್ಷ್ಮಿ' ಧಾರಾವಾಹಿಯು ಒಂದು ವರ್ಷದ ಹಿಂದೆಯಷ್ಟೇ ಮುಗಿಯಿತು. ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಮುದ್ದುಲಕ್ಷ್ಮಿ ಒಂದು ಟ್ರಾಜಿಕ್ ಆಕ್ಸಿಡೆಂಟ್‌ನಲ್ಲಿ ತಮ್ಮ ಕೊನೆ ಉಸಿರು ಎಳೆಯುತ್ತಾರೆ. ಈ ರೀತಿಯಾಗಿ ಮುಕ್ತಾಯಗೊಂಡ ಧಾರಾವಾಹಿಯಲ್ಲಿ ನಟಿಸಿರುವ ನಟಿ ಅಶ್ವಿನಿ ಅವರು ಮುಂದೆ ಬಹಳಷ್ಟು ಅವಕಾಶಗಳಿಗೆ ಕಾದಿದ್ದರು.
ಅಶ್ವಿನಿಗೆ ಯಾವುದೇ ಅವಕಾಶಗಳು ಸಿಗದೇ, ಇದೀಗ ಒಂದು ವರ್ಷದ ನಂತರ ಮತ್ತೆ 'ಮುದ್ದುಲಕ್ಷ್ಮಿ' ಧಾರಾವಾಹಿಯ ಇನ್ನೊಂದು ಅವತರಣಿಕೆಯಾಗಿರೋ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಮುದ್ದು ಲಕ್ಷ್ಮಿಯ ಪುನರ್ಜನ್ಮದ ಕಥೆಯನ್ನು ಹೇಳಲು ಬಂದಿದ್ದರು ನಟಿ ಅಶ್ವಿನಿ.

ಜಾಹ್ನವಿಯಾಗಿ ಕಿರುತೆರೆಗೆ ಎಂಟ್ರಿ
ಅಂದ ಹಾಗೆ ಜಾಹ್ನವಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಶ್ವಿನಿ ತಮ್ಮ ಧಾರಾವಾಹಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ನನಗೆ 'ಮುದ್ದುಲಕ್ಷ್ಮಿ' ಧಾರಾವಾಹಿ ಒಂದು ಒಳ್ಳೆ ಭವಿಷ್ಯವನ್ನು ನೀಡುತ್ತದೆ ಎಂದು ತಿಳಿದಿದ್ದೆ. ಆದರೆ ಆ ಧಾರಾವಾಹಿ ನಂತರ ನನಗೆ ಹೆಚ್ಚೇನು ಅವಕಾಶಗಳು ಸಿಗಲೇ ಇಲ್ಲ. ಹಾಗಾಗಿ ಒಂದೊಮ್ಮೆ ತಾನು ತೆಗೆದುಕೊಂಡ ನಿರ್ಧಾರಗಳು ಸರಿಯೋ ತಪ್ಪೋ ಎಂಬ ಅನುಮಾನವೂ ತನಗೆ ಮೂಡಿತ್ತು ಎಂದು ಹೇಳಿಕೊಂಡಿದ್ದಾರೆ.
ಮುದ್ದು ಲಕ್ಷ್ಮಿ ಜಾಹ್ನವಿಯಾಗಿ ಬದಲಾಗಿದ್ದು ಹೇಗೆ?
ಒಂದು ವರ್ಷದ ಕಾಯುವಿಕೆಯ ನಂತರ ಮತ್ತೆ ಮುದ್ದುಮಣಿಗಳು ಧಾರಾವಾಹಿಯಲ್ಲಿ ಅಶ್ವಿನಿಗೆ ಜಾಹ್ನವಿಯ ಪಾತ್ರ ಸಿಕ್ಕಿರುವುದು ಬಹಳ ಸಂತೋಷ ತಂದಿದೆ. ಅಶ್ವಿನಿ ಅವರ ಪಾಲಿಗೆ ಇದೊಂದು ರೀತಿಯ ಅದ್ಭುತ ವಿಚಾರ. ಕಾಕಾತಾಳೀಯವೆಂದರೆ ಮುದ್ದು ಲಕ್ಷ್ಮಿ ಧಾರಾವಾಹಿಯನ್ನು 2018ರಲ್ಲಿ ಶುರು ಮಾಡಿದ ದಿನವೇ ನಟಿ ಅಶ್ವಿನಿ, ಜಾಹ್ನವಿ ಪಾತ್ರದ ಮೂಲಕ ನಟನೆಗೆ ಕಂ ಬ್ಯಾಕ್ ಮಾಡಿದ್ದರು.

ಚಾಲೆಂಜಿಗ್ ಪಾತ್ರಗಳಲ್ಲಿ ನಟಿಸುವುದು ಅಶ್ವಿನಿಗೆ ಇಷ್ಟ
ಯಾವುದೇ ಕಲಾವಿದರಾದರೂ ಹೊಸ ಹೊಸ ಚಾಲೆಂಜಿಂಗ್ ಪಾತ್ರಗಳನ್ನು ಮಾಡಲು ಇಷ್ಟಪಡುತ್ತಾರೆ. ಅಶ್ವಿನಿ ಅವರು ಕೂಡಾ ಇದಕ್ಕೆ ಹೊರತಾಗಿಲ್ಲ. ಹೊಸ ರೀತಿಯ ಪಾತ್ರಗಳ ಮೂಲಕ ಪ್ರಯೋಗ ಮಾಡಲು ನಟಿ ಅಶ್ವಿನಿಗೆ ಇಷ್ಟ. ಯಾವುದೇ ಲಿಮಿಟೇಶನ್ ಇಲ್ಲ. ಇದನ್ನು ಹೆಚ್ಚಿನ ಕಲಾವಿದರು ಒಪ್ಪುತ್ತಾರೆ.
ಹೀಗಿರುವಾಗ ಅಶ್ವಿನಿ ಅವರಿಗೆ ಇದೇ ಪಾತ್ರದ ಪುನರ್ಜನ್ಮದ ಒಂದು ಪಾತ್ರ ಸಿಕ್ಕಿರುವುದು ಬಹಳ ಸಂತೋಷದ ವಿಚಾರ. ಸಿಕ್ಕ ಅವಕಾಶ ಹಾಗೂ ದೊರೆತ ಪಾತ್ರಕ್ಕೆ ಜೀವ ತುಂಬುವ ಜವಾಬ್ದಾರಿ ಅವರದು. ಅದನ್ನು ಅವರು ಎಲ್ಲೂ ಚ್ಯುತಿ ಬರದಂತೆ ನಡೆದುಕೊಳ್ಳುತ್ತಿದ್ದಾರೆ. ವಿಶೇಷ ಅಂದ್ರೆ, ಈಗ ಮುದ್ದುಮಣಿಗಳು ಧಾರಾವಾಹಿ ಕೂಡ ಮುಕ್ತಾಯದ ಹಂತ ತಲುಪಿದೆ.


Click it and Unblock the Notifications











