For Quick Alerts
  ALLOW NOTIFICATIONS  
  For Daily Alerts

  'ನನ್ನ ಪ್ರೀತಿಯನ್ನು ನಾನು ಹುಡುಕಿಕೊಂಡಿದ್ದೇನೆ' ಎಂದು ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ ನಟಿ ಅವಿಕಾ

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ಅವಿಕಾ ಗೋರ್ ಇತ್ತೀಚಿಗೆ 13ಕೆಜಿ ತೂಕ ಇಳಿಸಿಕೊಂಡು ಸುದ್ದಿಯಾಗಿದ್ದರು. ಅವಿಕಾ ತೆಳ್ಳಗೆ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು. ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಬಾಲಿಕಾ ವಧು' ಧಾರಾವಾಹಿ ಮೂಲಕ ನಟಿ ಅವಿಕಾ ಗೋರ್ ಚಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು.

  ಆನಂದಿ ಪಾತ್ರದ ಮೂಲಕ ಅವಿಕಾ ಎಲ್ಲರ ಮನಗೆದ್ದಿದ್ದರು. ಆದರೆ ನಂತರ ಅವಿಕಾ ಕಿರುತೆರೆಯಿಂದ ದೂರವಾಗಿದ್ದರು. ಕಳೆದ ಒಂದು ವರ್ಷದಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಸ್ಟನಿಂಗ್ ಲುಕ್ ಮೂಲಕ ದಿಢೀರನೆ ದರ್ಶನ ನೀಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಸ್ಲಿಮ್ ಅಂಡ ಫಿಟ್ ಆಗಿರುವ ಅವಿಕಾ ಈಗ ಮತ್ತೊಂದು ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೌದು, ತಾನು ಡೇಟಿಂಗ್ ನಲ್ಲಿ ಇದ್ದೀನಿ ಎಂದು ಹೇಳುವ ಮೂಲಕ ಪ್ರೀತಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ..

  13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆಯ ಖ್ಯಾತ ನಟಿ ಅವಿಕಾ

  ಮಿಲಿಂದ್ ಚಂದ್ವಾನಿ ಪ್ರೀತಿಯ ಬಲೆಯಲ್ಲಿ ಅವಿಕಾ

  ಮಿಲಿಂದ್ ಚಂದ್ವಾನಿ ಪ್ರೀತಿಯ ಬಲೆಯಲ್ಲಿ ಅವಿಕಾ

  ರೋಡೀಸ್ ನ ಮಾಜಿ ಸ್ಪರ್ಧಿ ಮಿಲಿಂದ್ ಚಂದ್ವಾನಿ ಜೊತೆ ಡೇಟಿಂಗ್ ನಲ್ಲಿರುವುದಾಗಿ ಹೇಳಿದ್ದಾರೆ. ಪ್ರಿಯತಮ ಮಿಲಿಂದ್ ಜೊತೆ ಇರುವ ಫೋಟೋ ಶೇರ್ ಮಾಡಿ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿರುವ ಅವಿಕಾ, ಪ್ರಿಯತಮನ ಬಗ್ಗೆ ಹಾಡಿಹೊಗಳಿ ಬರೆದಿದ್ದಾರೆ. ಮಿಲಿಂದ್ ಆಗಮನವು ಜೀವನದ ಪ್ರಮುಖ ಅಧ್ಯಾಯವಾಗಲಿದೆ ಎಂದಿದ್ದಾರೆ. ಜೊತೆಗೆ ಅವಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಮಿಲಿಂದ್ ಗೆ ಧನ್ಯವಾದ ತಿಳಿಸಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿರುವ ನಟಿ

  ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿರುವ ನಟಿ

  'ನನ್ನ ಜೀವನದ ಪ್ರೀತಿಯನ್ನು ನಾನು ಕಂಡುಕೊಂಡಿದ್ದೇನೆ. ಅವನು ಯಾವಾಗಲು ನನ್ನವನು, ನಾನು ಶಾಶ್ವತವಾಗಿ ಅವನ ಪ್ರೀತಿ. ನಾವೆಲ್ಲರೂ ನಮ್ಮನ್ನು ಅರ್ಥಮಾಡಿಕೊಳ್ಳುವ, ನಮ್ಮನ್ನು ನಂಬುವ, ನಮಗೆ ಸ್ಫೂರ್ತಿ ನೀಡುವ, ಬೆಳೆಯಲು ಸಹಾಯ ಮಾಡುವ ಮತ್ತು ನಮ್ಮನ್ನು ನಿಜವಾಗಿಯೂ ಕಾಳಜಿ ವಹಿಸಿಸುವ ಪಾಲುದಾರನಿಗೆ ಅರ್ಹರು. ಆದರೆ ಅಂತಹ ಸಂಗಾತಿಯನ್ನು ಪಡೆಯುವುದು ಅಸಾಧ್ಯವೆಂದು ಭಾವಿಸುತ್ತಾರೆ. ಹಾಗಾಗಿ ಇದು ನನಗೆ ಕನಸಿನಂತೆ ಭಾಸವಾಗುತ್ತಿದೆ. ಆದರೆ ಇದು ನಿಜ.' ಎಂದು ಹೇಳಿದ್ದಾರೆ.

  ಸದ್ಯಕ್ಕಿಲ್ಲ ಮದುವೆ ಎಂದ ಅವಿಕಾ

  ಸದ್ಯಕ್ಕಿಲ್ಲ ಮದುವೆ ಎಂದ ಅವಿಕಾ

  ಸದ್ಯ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿರುವ ಅವಿಕಾ, ಸದ್ಯದಲ್ಲೇ ಮದುವೆಯಾಗುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಅವಿಕಾ ಪ್ರಿಯತಮ ಮಿಲಂದ್ ಸಹ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದೀರೆ. ಅವಿಕಾ ತನ್ನ ಜೊತೆ ಸದಾ ಇರುತ್ತಾರೆ ಎಂದು ಹೇಳಿದ್ದಾರೆ.

  ಕನ್ನಡ ಸಿನಿಮಾದಲ್ಲಿ ನಟಿಸಿರುವ ಅವಿಕಾ

  ಕನ್ನಡ ಸಿನಿಮಾದಲ್ಲಿ ನಟಿಸಿರುವ ಅವಿಕಾ

  ನಟಿ ಅವಿಕಾ ಕಿರುತೆರೆ ಜೊತೆಗೆ ಸಿನಿಮಾದಲ್ಲೂ ಮಿಂಚಿದ್ದಾರೆ. ವಿಶೇಷ ಎಂದರೆ ಕನ್ನಡ ಸಿನಿಮಾದಲ್ಲೂ ಬಾಲಿಕಾ ಮಧು ಆನಂದಿ ಕಾಣಿಸಿಕೊಂಡಿದ್ದಾರೆ. ಕೇರ್ ಆಫ್ ಫುಟ್ ಪಾತ್-2 ಮತ್ತು ನಟಸಾರ್ವಭೌಮ ಸಿನಿಮಾದಲ್ಲಿ ಅವಿಕಾ ಬಣ್ಣಹಚ್ಚಿದ್ದಾರೆ. ಜೊತೆಗೆ

  ತೆಲುಗು ಮತ್ತು ಹಿಂದಿಯಲ್ಲೂ ಮಿಂಚಿದ್ದಾರೆ.

  English summary
  Famous Tv Actress Avika Gor confirms her relationship with milind Chandwani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X