For Quick Alerts
  ALLOW NOTIFICATIONS  
  For Daily Alerts

  13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆಯ ಖ್ಯಾತ ನಟಿ ಅವಿಕಾ

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ಅವಿಕಾ ಗೋರ್ ತೂಕ ಇಳಿಸಿಕೊಂಡು ಬಳಕುವ ಬಳ್ಳಿಯಾಗಿದ್ದಾರೆ. ಅವಿಕಾ ತೆಳ್ಳಗೆ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಬಾಲಿಕಾ ವಧು ಧಾರಾವಾಹಿ ಮೂಲಕ ನಟಿ ಅವಿಕಾ ಗೋರ್ ಚಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದರು.

  ಆನಂದಿ ಪಾತ್ರದ ಮೂಲಕ ಅವಿಕಾ ಎಲ್ಲರ ಮನಗೆದ್ದಿದ್ದರು. ವರ್ಷದಿಂದ ಟವಿಯಿಂದ ಮಾಯವಾಗಿರುವ ಅವಿಕಾ ಸ್ಟನಿಂಗ್ ಲುಕ್ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಅವಿಕಾ ಬರೋಬ್ಬರಿ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತೂಕ ಇಳಿಸುವಿಕೆಯ ಕಷ್ಟದ ಪಯಣದ ಬಗ್ಗೆ ಅವಿಕಾ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಅವಿಕಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ..

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು ಗೌಡದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟ ಚಂದು ಗೌಡ

  ತೂಕ ಇಳಿಸಿಕೊಂಡ ಬಗ್ಗೆ ಅವಿಕಾ ಮಾತು

  ತೂಕ ಇಳಿಸಿಕೊಂಡ ಬಗ್ಗೆ ಅವಿಕಾ ಮಾತು

  "ಕಳೆದ ವರ್ಷ ಒಂದು ದಿನ ನನ್ನನ್ನು ಕನ್ನಡಿಯಲ್ಲಿ ನೋಡಿದಾಗ ನಾನು ಕುಸಿದು ಹೋದೆ. ನನ್ನನ್ನೇ ನನಗೆ ನೋಡಲು ಇಷ್ಟವಾಗಿಲ್ಲ. ದಪ್ಪ ಕೈಗಳು, ಕಾಲುಗಳು ಹಾಗೂ ಹೊಟ್ಟೆ. ಇದು ನನ್ನನ್ನು ಮತ್ತೆ ಕುಗ್ಗಿಸಿತು. ಅನಾರೋಗ್ಯ ಕಾರಣ ಇರಬಹುದಾ ಎಂದುಕೊಂಡೆ. ಆದರೆ ನಾನು ಹೀಗೆ ಆಗಲು ಕಾರಣ ಎಲ್ಲವನ್ನೂ ತಿನ್ನುತ್ತಿದ್ದೆ. ಮತ್ತು ನಾನು ವರ್ಕೌಟ್ ಮಾಡುತ್ತಿರಲಿಲ್ಲ. ನಮ್ಮ ದೇಹವನ್ನು ಉತ್ತಮವಾಗಿ ಟ್ರೀಟ್ ಮಾಡಬೇಕು. ಆದರೆ ನಾನು ಗೌರವ ಕೊಡುತ್ತಿರಲಿಲ್ಲ" ಎಂದಿದ್ದಾರೆ.

  ನನ್ನನ್ನು ನಾನು ಜಡ್ಜ್ ಮಾಡುವುದರಲ್ಲಿ ಬ್ಯುಸಿಯಾಗಿದ್ದೆ

  ನನ್ನನ್ನು ನಾನು ಜಡ್ಜ್ ಮಾಡುವುದರಲ್ಲಿ ಬ್ಯುಸಿಯಾಗಿದ್ದೆ

  "ಇದರಿಂದ ನಾನು ನೋಡುವ ರೀತಿ ನನಗೆ ಇಷ್ಟವಾಗಿಲ್ಲ. ಇದರಿಂದ ನಾನು ತುಂಬಾ ಇಷ್ಟಪಡುವ ನೃತ್ಯವನ್ನು ಸರಿಯಾಗಿ ಆನಂದಿಸಲು ಸಾಧ್ಯವಾಗಿಲ್ಲ. ನಾನು ನನ್ನನ್ನು ಜಡ್ಜ್ ಮಾಡುವುದರಲ್ಲಿ ಬ್ಯುಸಿಯಾಗಿದ್ದೆ. ಕೆಟ್ಟದನ್ನು ಅನುಭವಿಸುತ್ತಿದ್ದೇನೆ ಎಂದರೆ ಹೊರಗಿನವರಿಗೆ ನನ್ನನ್ನು ಕೆಟ್ಟದಾಗಿ ಭಾವಿಸಲು ನಾನು ಬಿಡಲಿಲ್ಲ"

  ಚಾಕು ಇರಿದ ಭಯಾನಕ ಘಟನೆ ವಿವರಿಸಿದ ನಟಿ ಮಾಲ್ವಿ ಮಲ್ಹೋತ್ರಾಚಾಕು ಇರಿದ ಭಯಾನಕ ಘಟನೆ ವಿವರಿಸಿದ ನಟಿ ಮಾಲ್ವಿ ಮಲ್ಹೋತ್ರಾ

  ನನ್ನನ್ನು ನೋಡಿ ನನಗೆ ಖುಷಿಯಾಗುತ್ತೆ

  ನನ್ನನ್ನು ನೋಡಿ ನನಗೆ ಖುಷಿಯಾಗುತ್ತೆ

  "ಒಂದು ದಿನ ನಾನು ಬದಲಾಗಬೇಕು ಎಂದು ನಿರ್ಧರಿಸಿದೆ. ರಾತ್ರೋರಾತ್ರಿ ಏನೂ ಬದಲಾಗಲ್ಲ. ನಾನು ಸರಿಯಾದ ವಿಷಯಗಳತ್ತ ಗಮನ ಹರಿಸಲು ಪ್ರಾರಂಭಿಸಿದೆ. ನಾನು ಹೆಮ್ಮೆಪಡಬೇಕಾದ ವಿಷಯಗಳು. ನಾನು ಉತ್ತಮವಾಗಿ ತಿನ್ನಲು ಪ್ರಯತ್ನಿಸುತ್ತಿದ್ದೇನೆ ಮತ್ತು ಚೆನ್ನಾಗಿ ವರ್ಕೌಟ್ ಮಾಡುತ್ತೇನೆ. ಈ ಪಯಣ ತುಂಬಾ ಕಷ್ಟವಾಗಿತ್ತು. ಆದರೆ ಮಾಡಲೇಬೇಕಾದ ಅನಿವಾರ್ಯವಾಗಿತ್ತು. ಈಗ ನಾನು ಕಂಫರ್ಟಬಲ್ ಆಗಿದ್ದೀನಿ. ನಾನು ಈಗ ಬೆಳಗ್ಗೆ ಎದ್ದು ಕನ್ನಡಿ ನೋಡಿದರೆ ದೂರ ಹೋಗುವ ಅವಶ್ಯಕತೆ ನನಗಿಲ್ಲ. ನನ್ನನ್ನು ನೋಡಿ ನಾನು ನಕ್ಕು, ಸುಂದರವಾಗಿದ್ದೇನೆ ಎಂದುಕೊಳ್ಳುತ್ತೇನೆ" ಎಂದಿದ್ದಾರೆ.

  ಕನ್ನಡ ಸಿನಿಮಾದಲ್ಲಿ ನಟಿಸಿರುವ ಅವಿಕಾ

  ಕನ್ನಡ ಸಿನಿಮಾದಲ್ಲಿ ನಟಿಸಿರುವ ಅವಿಕಾ

  ನಟಿ ಅವಿಕಾ ಕಿರುತೆರೆ ಜೊತೆಗೆ ಸಿನಿಮಾದಲ್ಲೂ ಮಿಂಚಿದ್ದಾರೆ. ವಿಶೇಷ ಎಂದರೆ ಕನ್ನಡ ಸಿನಿಮಾದಲ್ಲೂ ಬಾಲಿಕಾ ನಟಿಸಿದ್ದಾರೆ. ಕೇರ್ ಆಫ್ ಫುಟ್ ಪಾತ್-2 ಮತ್ತು ನಟಸಾರ್ವಭೌಮ ಸಿನಿಮಾದಲ್ಲಿ ಅವಿಕಾ ನಟಿಸಿದ್ದಾರೆ. ಜೊತೆಗೆ ತೆಲುಗು ಮತ್ತು ಹಿಂದಿಯಲ್ಲೂ ಮಿಂಚಿದ್ದಾರೆ.

  English summary
  Famous tv actress Avika Gor shares 13 kg weight loss journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X