Bhavya Gowda: ಸೀರೆಯುಟ್ಟು ಸಕತ್ ಆಗಿ ಕಾಣಿಸಿಕೊಂಡ ಗೀತಾ ಖ್ಯಾತಿಯ ಭವ್ಯ ಗೌಡ
ಗೀತಾ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ ಭವ್ಯ ಗೌಡ ನೋಡುಗರ ಮನ ಸೆಳೆಯುತ್ತಿದ್ದಾರೆ. ತನ್ನ ಅದ್ಭುತ ನಟನೆ ಮೂಲಕ ವೀಕ್ಷಕರ ಮನೆ ಮಾತಾಗಿದ್ದಾರೆ. ಇನ್ನೂ ಗೀತಾ ಧಾರಾವಾಹಿ ಕೂಡ ಬಹಳ ಸೊಗಸಾಗಿ ಮೂಡಿ ಬರುತ್ತಿದ್ದು ನೋಡುಗರನ್ನು ತಮ್ಮತ್ತ ಆಕರ್ಷಿಸುತ್ತಿದೆ.
ಭವ್ಯ ಗೌಡ ಅವರನ್ನು ಸಣ್ಣ ಮಕ್ಕಳು ಕೂಡ ಬಹಳ ಇಷ್ಟ ಪಡುವ ಪಾತ್ರ ಅವರದ್ದು. ನೋಡಲು ಮುದ್ದು ಮುದ್ದಾಗಿರುವ ಈ ನಟಿ ಮಾತ್ರ ಎಲ್ಲರ ಗಮನ ಸೆಳೆದಿರುವುದಂತು ಸತ್ಯ. ಭವ್ಯ ಗೌಡ ಅವರು ವರ ಮಹಾಲಕ್ಷ್ಮೀ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಈ ವೇಳೆ ಭವ್ಯ ಗೌಡ ಸೀರೆಯಲ್ಲಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

ಭವ್ಯ ಗೌಡ ಸೀರೆ ಕೊಂಚ ಟ್ರಾನ್ಸ್ಫರ್ ಆಗಿರುವುದರಿಂದ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನಿನ್ನನ್ನೇ ಫಾಲೋ ಮಾಡುತ್ತಾ ಇದ್ದಾರೆ. ನೀನು ಇಂತಹ ಡ್ರೆಸ್ ಯಾಕೆ ಹಾಕೋದು ನಮ್ಮ ಮಕ್ಕಳು ನಿನ್ನ ಫಾಲೋ ಮಾಡುತ್ತಾ ಇದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಭವ್ಯ ಬಟ್ಟೆ ಟ್ರೊಲ್ ಮಾಡಿದ ನೆಟ್ಟಿಗರು
ಹಬ್ಬದಂದು ಸೀರೆಯುಟ್ಟ ಭವ್ಯ ಬಹಳ ಅದ್ಭುತವಾಗಿ ಕಾಣಿಸಿಕೊಂಡು ಇದ್ದಾರೆ. ಗೀತಾ ಖ್ಯಾತಿಯ ಭವ್ಯ ಗೌಡ ನೇರಳೆ ಬಣ್ಣದ ಟ್ರ್ಯಾನ್‌ಪರೆಂಟ್ ಸೀರೆ ಧರಿಸಿದ್ದಾರೆ. ಅದಕ್ಕೆ ಹಸಿರು ಬಣ್ಣದ ಮಣಿಗಳ ಸರ ಧರಿಸಿ ಸಿಂಪಲ್ ಆಗಿ ಮಿಂಚಿದ್ದಾರೆ. ಅವರ ಲುಕ್‌ಗೆ ಹಲವಾರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಕೆಟ್ಟ ಕಾಮೆಂಟ್ ಗಳನ್ನು ಹಾಕಿದ್ದಾರೆ.

ಕಾಮೆಂಟ್ ಗಳಿಗೆ ತಲೆ ಕೆಡಿಸಿಕೊಳ್ಳದ ಭವ್ಯ
ಕಾಮೆಂಟ್‌ಗಳನ್ನು ನೋಡಿದ ಭವ್ಯ ಗೌಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ. ಇನ್ನೂ ಭವ್ಯ ಗೌಡ ತೊಟ್ಟ ಸೀರೆ ಟ್ರ್ಯಾನ್‌ಪರೆಂಟ್ ಆಗಿರುವುದನ್ನು ನೋಡಿದ ನೆಟ್ಟಿಗರು ಭವ್ಯ ನೀವು ಉಟ್ಟ ಸೀರೆಯಲ್ಲಿ ಸೇಫ್ಟಿ ಪಿನ್ ಕಾಣಿಸುತ್ತ ಇದೆ ಎಂದು ಹೇಳಿದ್ದಾರೆ. ಆದರೆ ನೆಟ್ಟಿಗರ ಮಾತಿಗೆ ಕ್ಯಾರೆ ಎನ್ನದ ಭವ್ಯ ಮಾತ್ರ ತನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.. ಇನ್ನೂ ಹಲವಾರು ಜನ ಭವ್ಯ ಗೌಡ ಅವರ ಬಳಿ ಹಲವು ಮನವಿ ಮಾಡಿದ್ದಾರೆ.
ಭವ್ಯ ಬಳಿ ಅಭಿಮಾನಿಗಳ ಕೋರಿಕೆ
ಭವ್ಯ ನೀವು ಇಂತಹ ಡ್ರೆಸ್ ಧರಿಸಬೇಡಿ.. ಈ ಡ್ರೆಸ್ ನಿಮಗೆ ಚೆನ್ನಾಗಿ ಕಾಣಿಸುವುದು ಇಲ್ಲ ಹಲವು ಅಭಿಮಾನಿಗಳು ಹೇಳಿದ್ದಾರೆ. ಭವ್ಯ ಬಗ್ಗೆ ಇನ್ನು ಕೆಲವರು ಬಹಳ ಪಾಸಿಟಿವ್ ಉತ್ತರಗಳನ್ನು ನೀಡಿದ್ದಾರೆ. ಇವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರ ಮನಸನ್ನು ಸೆಳೆಯುತ್ತಿದೆ. ಫೋಟೋ ನೋಡಿದ ಭವ್ಯ ಗೌಡ ಅಭಿಮಾನಿಗಳು ಕಾಮೆಂಟ್ ಹಾಗೂ ಲೈಕ್ ಗಳನ್ನು ಮಾಡುತ್ತಾ ಇದ್ದಾರೆ.
ಪ್ರತಿ ಹಬ್ಬಕ್ಕೂ ಭವ್ಯಾ ಗೌಡ ತುಂಬಾ ವಿಶೇಷವಾಗಿ ಸೀರೆ ಧರಿಸುತ್ತಾರೆ. ಪ್ರತಿ ಸಲವೂ ಫೋಟೋ ವೈರಲ್ ಆಗುತ್ತದೆ. ಒಟ್ಟಿನಲ್ಲಿ ಭವ್ಯ ಗೌಡ ಸೀರೆಯಲ್ಲಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.


Click it and Unblock the Notifications











