Actress Bhavya Gowda: ಗಗನಸಖಿಯಾಗಬೇಕಿದ್ದ ಭವ್ಯಾ ಗೌಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇಗೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ನಾಯಕಿ ಗೀತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಭವ್ಯಾ ಗೌಡ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.
ಹೌದು, ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಲಸಿಉಂಟೆ ಕಲದು ಸುಕ್ಕಂ' ಎನ್ನುವ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ ಭವ್ಯಾ ಗೌಡ.

ಗಗನಸಖಿಯಾಗಬೇಕು ಎಂಬ ಕನಸಿತ್ತು
ಎಲ್ಲವೂ ತಾನು ಅಂದುಕೊಂಡಂತೆ ನಡೆದಿದ್ದರೆ ಭವ್ಯಾ ಗೌಡ ಇಂದು ಗಗನಸಖಿಯಾಗಿ ಆಕಾಶದಲ್ಲಿ ಹಾರಾಡುತ್ತಿದ್ದರು. ಆದರೆ ಅಪ್ಪ ಅಮ್ಮನಿಗೆ ಮಗಳನ್ನು ಬಣ್ಣದ ಪರದೆಯ ಮೇಲೆ ನೋಡಬೇಕು ಎಂಬ ಬಯಕೆಯಿತ್ತು. ತನ್ನ ಆಸೆಯೋ, ಅಪ್ಪ ಅಮ್ಮನ ಬಯಕೆಯೋ ಎಂಬ ಪ್ರಶ್ನೆ ಎದುರಾದಾಗ ಭವ್ಯಾ ಅವರು ಆರಿಸಿಕೊಂಡಿದ್ದು ಅಪ್ಪ ಅಮ್ಮನ ಬಯಕೆಯನ್ನೇ. ಅದಕ್ಕೆ ಈಗ ಕಿರುತೆರೆ ಹಾಗೂ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಧಾರಾವಾಹಿಯಲ್ಲಿ ನಾಯಕಿ
ಅಪ್ಪ ಅಮ್ಮನ ಬಯಕೆಯಂತೆ ನಟನೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ ಭವ್ಯಾ ಗೌಡ ಆಡಿಶನ್‌ಗೆ ತೆರಳಿದರು. ಮೊದಲ ಆಡಿಶನ್‌ನಲ್ಲಿ ನಟಿಸುವ ಅವಕಾಶ ಪಡೆದುಕೊಂಡ ಭವ್ಯಾ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಭವ್ಯಾ ಗೌಡ ಈಗಾಗಲೇ ಸಿನಿಮಾಗೂ ಕಾಲಿಟ್ಟಾಗಿದೆ.

ಡಾಕ್ಟರ್ ಆಗಿ ಹಿರಿತೆರೆಗೆ ಹಾರಿದ ಭವ್ಯಾ ಗೌಡ
ವಿಸ್ಮಯಾ ಗೌಡ ನಿರ್ದೇಶನದಡಿಯಲ್ಲಿ ಮೂಡಿ ಬಂದಿರುವ 'ಡಿಯರ್ ಕಣ್ಮಣಿ' ಸಿನಿಮಾದಲ್ಲಿ ನಾಯಕಿಯಾಗಿ ಭವ್ಯಾ ಗೌಡ ಅವರು ನಟಿಸುತ್ತಿದ್ದು, ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ನಾಯಕನಾಗಿ ಡ್ಯಾನ್ಸರ್, ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ ಕೂಡ ತೆರೆ ಹಂಚಿಕೊಂಡಿದ್ದಾರೆ.
ಪರಭಾಷೆಯಲ್ಲಿ ಅವಕಾಶ
ಮುದ್ದಾದ ನಟನೆಯ ಮೂಲಕ ಕರುನಾಡಿನಾದ್ಯಂತ ಗುರುತಿಸಿಕೊಂಡಿರುವ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಮನೆ ಮಗಳು ಹೌದು. ಗೀತಾ ಪಾತ್ರದಲ್ಲಿ ಕನ್ನಡ ಕಿರುತೆರೆಯಲ್ಲಿ ಬ್ಯುಸಿ ಇರುವಾಗಲೇ ಇವರು ಪರಭಾಷೆಯ ಕಿರುತೆರೆಗೂ ಹಾರಿದ್ದಾಗಿದೆ. ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಲಸಿಉಂಟೆ ಕಲುದು ಸುಕ್ಕಂ'ನಲ್ಲಿ ನಾಯಕಿಯಾಗಿ ನಟಿಸಿರುವ ಈ ನಟಿ ಕನ್ನಡ ಹಾಗೂ ತೆಲುಗು ಕಿರುತೆರೆ ಎರಡನ್ನು ಸಂಭಾಳಿಸಿಕೊಂಡು ಸಾಗುತ್ತಿದ್ದಾರೆ.


Click it and Unblock the Notifications











