ಪೋಲ್ ಡಾನ್ಸ್ ಕಲಿಯಲು ಮುಂದಾದ 'ಕಿನ್ನರಿ'; ನಟಿ ಭೂಮಿ ಶೆಟ್ಟಿ ಡ್ಯಾನ್ಸ್ ವಿಡಿಯೋ ವೈರಲ್

By ಅನಿತಾ ಬನಾರಿ

ನಟಿ ಭೂಮಿ ಶೆಟ್ಟಿ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತ. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾ ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಈಕೆ ಫಿಟ್ನೆಸ್ ಬಗ್ಗೆ ಹಲವಾರು ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಅಷ್ಟೇ ಅಲ್ಲದೆ ತಾವು ಮಾಡಿಸುವ ಫೋಟೋಶೂಟ್‌ಗಳನ್ನು ತಮ್ಮ ಫಾಲೋವರ್ಸ್ ಜೊತೆಗೆ, ಅಭಿಮಾನಿಗಳೊಂದಿಗೆ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಇದರ ಜೊತೆಗೆ ಇದೀಗ ಪೋಲ್ ಡ್ಯಾನ್ಸ್ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹೌದು.. ನಟಿ ಭೂಮಿ ಶೆಟ್ಟಿ ಅವರು ಪೋಲ್ ಡ್ಯಾನ್ಸ್ ಕಲಿಕೆಯ ಎರಡನೇ ದಿನವೇ ಅದ್ಭುತವಾಗಿ ಒಂದಷ್ಟು ಮೂವ್‌ಗಳನ್ನು ಮಾಡಿದ್ದು, ಅದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Actress Bhoomi Shetty who is away from television caught attention with the pole dance

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಭೂಮಿ ಶೆಟ್ಟಿ "ಇದು ನನ್ನ ಎರಡನೇ ದಿನದ ಕ್ಲಾಸ್ ಎಂದರೆ ನಂಬುತ್ತೀರಾ?" ಎಂದು ತಮ್ಮ ಫಾಲೋವರ್ಸ್ ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ "ಪೋಲ್ ಡ್ಯಾನ್ಸ್ ಬಗ್ಗೆ ನನಗೆ ಬಹಳಷ್ಟು ಭಯವಿತ್ತು. ನನ್ನ ದೇಹ ಇದಕ್ಕೆ ಸಹಕಾರ ನೀಡುತ್ತಾ ಎಂಬ ಅನುಮಾನವೂ ಇತ್ತು. ಆದರೆ ಎರಡನೇ ದಿನವೇ ಇಷ್ಟೆಲ್ಲಾ ಚೆನ್ನಾಗಿ ಮೂವ್‌ಗಳನ್ನು ಮಾಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಈಗ ನಾನು ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂಬ ಆತ್ಮವಿಶ್ವಾಸ ಮೂಡಿದೆ. ತುಂಬಾ ಖುಷಿಯಾಗುತ್ತಿದೆ" ಎಂದು ಸಂಭ್ರಮದಿಂದ ಕಿರುತೆರೆ ನಟಿ ಭೂಮಿ ಶೆಟ್ಟಿ ಬರೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯ ಮಣಿಯಾಗಿ ಕಿರುತೆರೆಗೆ ಕಾಲಿಟ್ಟ ಭೂಮಿ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮನ ಸೆಳೆದಾಕೆ.

ಮುಂದೆ ತೆಲುಗಿನ 'ನಿನ್ನೆ ಪೆಳ್ಳಾಡಾತಾ' ಧಾರಾವಾಹಿಯಲ್ಲಿ ಮೃದುಲಾ ಆಗಿ ಅಭಿನಯಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿದ ಭೂಮಿ ಶೆಟ್ಟಿ ತೆಲುಗಿನ 'ಅಕ್ಕ ಚೆಲ್ಲುಲು' ಧಾರಾವಾಹಿಯಲ್ಲಿಯೂ ಮೋಡಿ ಮಾಡಿದರು. ಮುಂದೆ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡ 'ಇಕ್ಕಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. ತದ ನಂತರ 'ವಾಸಂತಿ' ಸಿನಿಮಾದಲ್ಲಿ ಅಭಿನಯಿಸಿರುವ ಈಕೆ 'ಕೆಂಡದ ಸೆರಗು' ಸಿನಿಮಾದಲ್ಲಿಯೂ ನಾಯಕಿಯಾಗಿ ಸೈ ಎನಿಸಿಕೊಂಡರು.

ಸಹಜ ನಟನೆಯ ಮೂಲಕ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮೋಡಿ ಮಾಡುತ್ತಿರುವ ಭೂಮಿ ಶೆಟ್ಟಿ ಬೈಕ್ ರೈಡರ್ ಕೂಡಾ ಹೌದು. ಬೆಂಗಳೂರಿನಿಂದ ತಮ್ಮೂರು ಕುಂದಾಪುರಕ್ಕೆ ಬೈಕ್‌ನಲ್ಲೇ ಪ್ರಯಾಣಿಸುವ ಭೂಮಿ ಶೆಟ್ಟಿಗೆ ರಾಯಲ್ ಎನ್ಫೀಲ್ಡ್ ಬೈಕ್ ಎಂದರೆ ತುಂಬಾ ಇಷ್ಟ. ಕೇವಲ ಕುಂದಾಪುರ ಮಾತ್ರವಲ್ಲದೇ ಬೇರೆ ಬೇರೆ ಊರುಗಳಿಗೂ ಈ ನಟಿ ಪ್ರಯಾಣ ಬೆಳೆಸಿದ್ದಾರೆ.

More from Filmibeat

English summary
Actress Bhoomi Shetty became a sensation through pole dancing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X