'ಲಕ್ಷ್ಮೀಬಾರಮ್ಮ' ಭೂಮಿಕಾಗೆ ಅಮ್ಮನೇ ಮುಖ್ಯ ಅನ್ನೋ ಹುಡುಗ ಬೇಕಂತೆ!
'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ ಕೂಡು ಕುಟುಂಬದ ಸೊಸೆಯಾಗಿದ್ದಾಳೆ. ಆದರೆ ಅತ್ತೆಯ ಕಿತಾಪತಿಯಿಂದ ಗಂಡ ಹೆಂಡತಿ ನೆಮ್ಮದಿಯಾಗಿ ಜೀವನ ಮಾಡುವುದಕ್ಕೆ ಆಗುತ್ತಿಲ್ಲ. ಕಾವೇರಿಯಿಂದ ದೂರವಾಗಿದ್ದ ಜೋಡಿ ಹಾಗೋ ಹೀಗೋ ಒಟ್ಟಿಗೆ ಕಾರ್ಯಕ್ರಮಕ್ಕೇನೋ ಹೋಗಿದ್ದಾರೆ. ಇನ್ಮೇಲಾದ್ರು ಇಬ್ಬರ ನಡುವಿನ ಮನಸ್ತಾಪ ಸರಿಯಾಗುತ್ತಾ ನೋಡಬೇಕಿದೆ.
ಈ ಧಾರಾವಾಹಿ ಆದ್ಮೇಲೆ ಭೂಮಿಕಾ ತೆಲುಗು ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ. ಲಕ್ಷ್ಮೀಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ವಿಶ್ವವಾಣಿ ಡಿಜಿಟಲ್‌ಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ಜರ್ನಿ ಬಗ್ಗೆ, ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ.

ಲಾಯರ್ ಮಗಳು ಲಕ್ಷ್ಮೀ
ಪ್ರಪೋಸಲ್ಸ್ ಅನ್ನೋದು ಎಲ್ಲರ ಲೈಫ್‌ನಲ್ಲೂ ಕಾಮನ್ ಅಲ್ವಾ. ಅದು ಬೇಡ ಅಂದ್ರು ಬಂದೇ ಬರುತ್ವೆ. ಕಾಲೇಜಲ್ಲಿ ಪ್ರಪೋಸ್‌ಗಳು ಬಂದಿದ್ದಾವೆ. ಆದರೆ ಡೈರೆಕ್ಟ್ ಆಗಿ ಪ್ರಪೋಸ್ ಮಾಡುವ ಧೈರ್ಯವನ್ನ ಯಾರೂ ಮಾಡಿರಲಿಲ್ಲ. ಯಾಕಂದ್ರೆ ನಮ್ಮ ತಂದೆ ಅಡ್ವೊಕೇಟ್ ಆಗಿದ್ದವರು. ಹೀಗಾಗಿ ಎಲ್ಲರಿಗೂ ಅದೊಂದು ಭಯ ಇತ್ತು. ಲಾಯರ್ ಮಗಳಿಗೆ ಪ್ರಪೋಸ್ ಮಾಡಿದರೆ ಹೇಗೆ ಅಂತ.
ಅಮ್ಮನನ್ನೇ ಇಷ್ಟಪಡುವ ಹುಡುಗ ಬೇಕು
ನಾನು ಮದುವೆ ಆಗುವ ಹುಡುಗನಿಗೆ ಒಂದಷ್ಟು ಕ್ವಾಲಿಟೀಸ್ ಇರಬೇಕು. ಈಗ ಎಲ್ಲರಿಗೂ ಇದ್ದಂತೆ ನಾನು ನಿರೀಕ್ಷೆ ಮಾಡ್ತೀನಿ. ನಾನು ಟ್ರೆಡಿಷನಲ್ ಆಗಿರೋದ್ರಿಂದ ಅವನು ಟ್ರೆಡಿಷನಲ್ ಆಗಿರಬೇಕು. ಹಾಗೇ ಯಾವತ್ತಾದ್ರೂ ಒಂದಿನ ಅಮ್ಮ ಬೇಕಾ ನಾನು ಬೇಕಾ ಅಂದ್ರೆ ಅವ್ನು ಅಮ್ಮನನ್ನೇ ಆಯ್ಕೆ ಮಾಡಬೇಕು. ನನ್ನ ಆಯ್ಕೆ ಮಾಡುದ್ರೆ ಮುಂದೊಂದು ದಿನ ನನ್ನನ್ನು ಬಿಟ್ಟು ಬಿಡ್ತಾನೆ ಅನ್ನೋದು ಗ್ಯಾರಂಟಿ. ಚಿಕ್ಕವನಿದ್ದಾಗಿನಿಂದ ಸಾಕಿದ ಅಮ್ಮನನ್ನೇ ಬಿಟ್ಟಿದ್ದಾನೆ ಅಂದ್ರೆ ಮುಂದೆ ನನ್ನ ಬಿಡಲ್ಲ ಅಂತ ಏನು ಗ್ಯಾರಂಟಿ.
ಧರ್ಮಸ್ಥಳದಲ್ಲಿ ಲಕ್ಷ್ಮೀಗೆ ಖುಷಿ ಅನುಭವ
'ಲಕ್ಷ್ಮೀಬಾರಮ್ಮ' ಡಿವೈಡ್ ಆದಾಗ ನಂಗೆ ಶೂಟಿಂಗ್ ಗ್ಯಾಪ್ ಸಿಕ್ಕಿತ್ತು. ಆಗ ಧರ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿನ ಅರ್ಚಕರು ನನ್ನನ್ನ ಗುರುತಿಸಿದ್ದರು. ನಿಮ್ಮನ್ನ ನೋಡಿದ್ದೀನಿ ಅಂತ ಹೇಳ್ತಾ ಇದ್ದರು. ಅವರಿಗೆ ಮಾತು ಬರ್ತಾ ಇರಲಿಲ್ಲ. ಆದರೆ ಸನ್ನೆ ಮಾಡುವ ಮೂಲಕವೇ ಟಿವಿ ಅಂತ ತೋರಿಸಿದ್ರು. ಲಕ್ಷ್ಮೀ ಅನ್ನೋದನ್ನ ಕಾಯಿನ್ ತೋರಿಸುವ ಮೂಲಕ ವಿವರಿಸಿದ್ರು. ಇದು ನಂಗೆ ತುಂಬಾ ಖುಷಿ ಆಯ್ತು. ಜನ ಎಷ್ಟು ಪ್ರೀತಿ ತೋರಿಸ್ತಾರೆ ಅಂತ.
ಫ್ಯಾಮಿಲಿ ಬಿಟ್ಟು ಹೋದಾಗ ಬೇಸರ
ಸೀರಿಯಲ್ ಡಿವೈಡ್ ಆದಾಗಂತೂ ರಿಯಲ್ ಆಗಿನೇ ಎಲ್ಲರೂ ಅತ್ತಿದ್ದೀವಿ. ನಮಗೆ ಕೊನೆ ಗಳಿಗೆಯ ತನಕ ಡಿವೈಡ್ ಆಗ್ತಾ ಇದೆ ಅನ್ನೋದು ಗೊತ್ತಿರಲಿಲ್ಲ. ಡೈರೆಕ್ಷನ್ ಡಿಪಾರ್ಟ್ಮೆಂಟ್‌ಗೆ ಮಾತ್ರ ಗೊತ್ತಿತ್ತು. ನಾನು ಮದುವೆಯಾಗಿ ಹೋಗುವ ದೃಶ್ಯ ಅದು. ಆಕ್ಚುಲಿ ನಾವೆಲ್ಲಾ ನಿಜವಾಗಲೂ ಅತ್ತಿದ್ದೀವಿ. ಯಾಕಂದ್ರೆ ನಾನು ತುಂಬಾ ಅಚ್ಚಿಕೊಂಡು ಬಿಟ್ಟಿದ್ದೆ. ಇನ್ನು ಒಟ್ಟಿಗೆ ಶೂಟ್ ಮಾಡೋದಕ್ಕೆ ಆವಲ್ಲ. ಅವತ್ತು ಎಲ್ಲರಿಗೂ ಅಳು ಬಂದಿತ್ತು.


Click it and Unblock the Notifications











