"ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬದಲಾಗುತ್ತಿದೆ"; ನಟಿ ಬೃಂದಾ ಆಚಾರ್ಯ

By ಅನಿತಾ ಬನಾರಿ

ನಟಿ ಬೃಂದಾ ಆಚಾರ್ಯ ಇದೀಗ ತಮ್ಮ ವೃತ್ತಿ ಬದುಕಿನ ಬೆಸ್ಟ್ ದಿನಗಳನ್ನು ಕಾಣುತ್ತಿದ್ದಾರಂತೆ. ಒಂದಲ್ಲ ಎರಡಲ್ಲ ಬರೋಬರಿ ನಾಲ್ಕಾರು ಚಿತ್ರಗಳನ್ನು ತಮ್ಮ ಕೈಲಿ ಇಟ್ಟುಕೊಂಡಿರುವ ನಟಿ ಬೃಂದಾ ತಮ್ಮ ನಟನಾ ಅನುಭವಗಳ ಬಗ್ಗೆ ಓಪ್‌ ಆಗಿ ಮಾತನಾಡಿದ್ದಾರೆ.

ನಟನೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಇದೇ ಸರಿಯಾದ ಸಮಯ. ಇದಕ್ಕಿಂತ ಒಳ್ಳೆಯ ಟೈಮ್ ಹಾಗೂ ಅವಕಾಶಗಳನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಸದ್ಯಕ್ಕೆ ನಾನು 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ', 'ಎಕ್ಸ್ ಅಂಡ್ ವೈ', 'ಒಂದು ಸಲ ಮೀಟ್ ಮಾಡೋಣ', 'ಸತ್ಯ ಸನ್‌ ಆಫ್ ಹರಿಶ್ಚಂದ್ರ' ಹೀಗೆ ನಾಲ್ಕು ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ತಮ್ಮ ಬ್ಯುಸಿ ಶೆಡ್ಯೂಲ್ ಬಗ್ಗೆ ಸಂತಸದಿಂದ ನಟಿ ಬೃಂದಾ ಆಚಾರ್ಯ ಹೇಳಿಕೊಂಡಿದ್ದಾರೆ.

Actress Brinda Acharya says that it is fun to work in the Kannada film industry

"ಇತ್ತೀಚೆಗೆ ಕಥೆಗಳು, ಸಿನಿಮಾ ಸ್ಕ್ರಿಪ್ಟ್‌ಗಳು ಬಹಳ ವಿಭಿನ್ನವಾಗಿರುತ್ತವೆ. ಸ್ತ್ರೀ ಪಾತ್ರಗಳಿಗೆ ಇರುವ ಹೆಚ್ಚಿನ ಮಹತ್ವವನ್ನು ನೋಡೋಕೆ ಖುಷಿಯಾಗುತ್ತದೆ. ನನಗೆ ಬೇರೆ ಬೇರೆ ಸಿನಿಮಾಗಳಲ್ಲಿ ಸಿಕ್ಕಿರುವ ವಿಭಿನ್ನ ಪಾತ್ರಗಳ ಬಗ್ಗೆ ಖುಷಿಯಿದೆ. ಪ್ರತಿ ದಿನ ಬೆಳಗ್ಗೆ ನನಗೆ ಸಿನಿಮಾ ಶೂಟಿಂಗ್‌ಗೆ ಹೋಗೋಕೆ ಇದೆ ಎನ್ನುವುದೇ ಬಹುದೊಡ್ಡ ಮೋಟಿವೇಶನ್" ಎಂದು ನಟಿ ಹೇಳಿದ್ದಾರೆ.

"ಈಗಿನ ಸಿನಿಮಾ ನಿರ್ದೇಶಕರು ಸ್ತ್ರೀ ಪಾತ್ರಗಳಿಗೆ ನೀಡುತ್ತಿರುವ ಪ್ರಾಧಾನ್ಯತೆಯ ಬಗ್ಗೆ ಬಹಳ ಹೆಮ್ಮೆ ಅನಿಸುತ್ತದೆ. ಬರೀ ಪಾತ್ರಗಳು ಗಟ್ಟಿಯಾಗಿದ್ದರೆ ಸಾಕಾಗೋಲ್ಲ ಚಿತ್ರಕಥೆ ಹಿಟ್ ಆಗಬೇಕು ಅದರಲ್ಲೂ ಕಮರ್ಷಿಯಲ್ ಹಿಟ್ಟಾದರೆ ಮಾತ್ರ ಇಂತಹ ಸಿನಿಮಾಗಳು ಮತ್ತೆ ಮತ್ತೆ ಬರಲು ಸಾಧ್ಯ. ಒಟ್ಟಿನಲ್ಲಿ ಕಾಲ ಬದಲಾಗುತ್ತಿದೆ ಎಂಬುದು ನನಗೆ ಖುಷಿಯ ವಿಚಾರ" ಎಂದಿದ್ದಾರೆ ನಟಿ ಬೃಂದಾ.

Actress Brinda Acharya says that it is fun to work in the Kannada film industry

ನಾನು ಮಾಡಿರುವ ಪ್ರತಿ ವಿಭಿನ್ನ ಪಾತ್ರಗಳನ್ನು ನಾನು ಬಹಳ ಎಂಜಾಯ್ ಮಾಡಿದ್ದೇನೆ. ಆ ಪಾತ್ರದ ಒಳಹೋಗುವುದಕ್ಕೆ ಜೀವ ತುಂಬಲು ನನ್ನ ಪೂರ್ಣ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಸರಿಯಾಗಿ ನನಗೆ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಂದ ಒಳ್ಳೆಯ ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿಯೇ ನನಗೆ ಇಂದು ಹೆಚ್ಚು ಪಾತ್ರಗಳು ಸಿಗುತ್ತಿದೆ ಎಂದು ನಂಬಿದ್ದೇನೆ ಎಂದು ತಾವು ಮಾಡಿರುವ ವಿಭಿನ್ನ ಪಾತ್ರಗಳ ಬಗ್ಗೆಯೂ ನಟಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿ ಹೊಸಬರನ್ನು ಬಹಳ ಪ್ರೀತಿಯಿಂದ ಕರೆದುಕೊಳ್ಳುತ್ತದೆ. ನಿರ್ದೇಶಕರಾಗಲಿ, ಸಹನಟರಾಗಲಿ, ಹೊಸಬರನ್ನು ಕೀಳಾಗಿ ನೋಡುವುದಿಲ್ಲ. ಬದಲಾಗಿ ನಮ್ಮನ್ನು ತಿದ್ದಿ ತೀಡಿ ಮುಂದೆ ಬರಲು ಸಹಾಯ ಮಾಡುತ್ತಾರೆ. ಈ ರೀತಿಯ ವಾತಾವರಣ ಯಾವುದೇ ವೃತ್ತಿಯಲ್ಲಾದರೂ ಬಹಳ ಮುಖ್ಯ. ಈಗಾಗಲೇ ನಾನು ನಟಿಸಿರುವ ಸಿನಿಮಾಗಳಲ್ಲಿ ನಟರಾದ ನಿರೂಪ್ ಭಂಡಾರಿ, ದುನಿಯಾ ವಿಜಯ್ ಮುಂತಾದವರು ನನ್ನನ್ನು ಬಹಳ ಪ್ರೀತಿಯಿಂದ ಒಳ್ಳೆ ಸ್ನೇಹಿತರಂತೆ ಟ್ರೀಟ್ ಮಾಡಿದ್ದಾರೆ. ಈಗಾಗಲೇ ನಾನು ನಟಿಸಿರುವ ಸಿನಿಮಾಗಳಾದ 'ಕೌಶಲ್ಯ ಸುಪ್ರಜಾ ರಾಮ', 'ಜೂಲಿಯೆಟ್ ಟು', ನನಗೆ ಒಳ್ಳೊಳ್ಳೆ ಪಾತ್ರಗಳನ್ನು ಕೊಟ್ಟಿವೆ ಎಂದು ತಮ್ಮ ಸಮಾಧಾನ ಸಂತೃಪ್ತಿಯನ್ನು ನಟಿ ಬೃಂದಾ ಆಚಾರ್ಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
Brinda Acharya, who started acting on television is now busy on the big screen.
Read more about: actress tv ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X