'ಮಹಾಕಾಳಿ'ಯ ಬೃಂದಾ ಆಚಾರ್ಯ ಸಿನಿಮಾದಲ್ಲಿ ಬ್ಯುಸಿ; ಈಕೆ ಕೈಯಲ್ಲಿರೋ 3 ಸಿನಿಮಾಗ್ಯಾವುವು?
ಹೌದು! 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದಲ್ಲಿ ಶಿವಾನಿಯಾಗಿ ನಟಿಸಿರುವ ಮುದ್ದು ಮುಖದ ಚೆಲುವೆ ಬೃಂದಾ ಆಚಾರ್ಯ. 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದ ನಂತರ ಬಹಳಷ್ಟು ಖ್ಯಾತಿಯನ್ನು ಪಡೆದಿರುವ ಈಕೆ ಈಗಾಗಲೇ ಮೂರು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.
'ಒಂದು ಸಲ ಮೀಟ್ ಮಾಡೋಣ', 'ಎಕ್ಸ್ ಅಂಡ್ ವೈ' ಹಾಗೂ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಎಂಬ ಮೂರು ಸಿನಿಮಾಗಳನ್ನು ಆಯ್ದುಕೊಂಡಿರುವ ನಟಿ ಬೃಂದಾ ಆಚಾರ್ಯ ಸದ್ಯಕ್ಕಂತೂ ನಟನೆಯಲ್ಲಿ ಫುಲ್ ಬ್ಯುಸಿ. ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟಿರುವ ಬೃಂದಾ ಆಚಾರ್ಯ ಸದ್ಯ ಸಿನಿಮಾಗಳಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.

ಇನ್ನು ತಾವು ಯಾವ ರೀತಿ ಸ್ಕ್ರಿಪ್ಟ್ ಅನ್ನು ಆರಿಸುತ್ತಾರೆ ಹಾಗೂ ಕಥೆಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿದ ನಟಿ ಬೃಂದಾ ಆಚಾರ್ಯ ಅವರು ಸಿನಿಮಾ ಮಾಡಬೇಕೆಂಬ ಸಲುವಾಗಿ ಯಾವುದೇ ಕಥೆಗಳನ್ನು ಒಪ್ಪಿಕೊಳ್ಳುವುದಿಲ್ಲವಂತೆ. ಬದಲಾಗಿ ಕಥೆಯನ್ನು ಓದಿ ಅವರಿಗೆ ಸ್ಕ್ರಿಪ್ಟ್ ಅರ್ಥವಾದರೆ ಮಾತ್ರ ಸಿನಿಮಾಗೆ ಸಹಿ ಮಾಡುತ್ತಾರಂತೆ.
ಮೊದಲಿಗೆ ಡೈರೆಕ್ಟರ್ ಹೇಳುವ ನರೇಶನನ್ನು ಒಮ್ಮೆ ಕೇಳಿ ಮತ್ತೆ ಸ್ಕ್ರಿಪ್ಟ್ ಅನ್ನು ಓದಿ ಅವೆಲ್ಲವೂ ಅವರು ಮಾಡುವ ಪಾತ್ರಕ್ಕೆ ಸರಿಹೊಂದುತ್ತದೆ ಎಂದೆನಿಸಿದರೆ ಮಾತ್ರ ಕಥೆಯನ್ನು ಒಪ್ಪಿಕೊಂಡು ನಟಿಸುತ್ತಾರಂತೆ. ಸಿನಿಮಾದಲ್ಲಿ ನಮಗೆ ಒಳ್ಳೆಯ ಹೆಸರು ಹಾಗೂ ಹಣ ಬರುತ್ತದೆ ಎಂಬ ಕಾರಣಕ್ಕೆ ಸಿಕ್ಕ ಕಥೆಗಳನ್ನೆಲ್ಲ ತೆಗೆದುಕೊಳ್ಳಲು ಸ್ವಲ್ಪವೂ ಇಷ್ಟವಿಲ್ಲದ ನಟಿ ಬೃಂದಾ ಆಚಾರ್ಯ ತೂಗಿ ಅಳೆದು ಒಳ್ಳೆ ಕಥೆಗಳನ್ನ ಅಷ್ಟೇ ತೆಗೆದುಕೊಳ್ಳುತ್ತಿದ್ದಾರಂತೆ. ತಮಗೆ ಕ್ಲಾರಿಟಿ ಸಿಕ್ಕಾಗ ಮಾತ್ರ ಕಥೆಗಳನ್ನು ಒಪ್ಪಿಕೊಳ್ಳುವ ಇವರು ಸದಾ ಕಾಲ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬ್ಯುಸಿಯಾಗಿರಲು ಇಚ್ಚಿಸುತ್ತಾರಂತೆ.

ಎಲ್ಲಾ ನಟ ನಟಿಯರಂತೆ ಯಶಸ್ಸಿನ ಬಗ್ಗೆ ಬಹಳಷ್ಟು ಯೋಚಿಸುವ ಹೀಗೆ ಯಶಸ್ಸಿಗಾಗಿ ಹಾತೊರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದೊಂದು ಗುರಿ ತಮ್ಮ ಸಿನಿಮಾ ಆಯ್ಕೆಯ ಪ್ರಕ್ರಿಯೆಯಲ್ಲಿ ಅಡ್ಡವಾಗದಂತೆ ನೋಡಿಕೊಳ್ಳುತ್ತಾರಂತೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಬಹಳ ಆಕ್ಟಿವ್ ಇರುವ ಈ ನಟಿ ಆಗಾಗ ತಮ್ಮ ಫೋಟೋಶೂಟ್‌ಗಳನ್ನು ಹಾಕಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಕಲರ್ಸ್ ಕನ್ನಡ ವಾಹಿನಿಯ 'ಮಹಾಕಾಳಿ' ಧಾರಾವಾಹಿಯಲ್ಲಿ ರತಿಯಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ಬೃಂದಾ ಆಚಾರ್ಯ. ಮುಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಈ ನಟಿ, ತದ ನಂತರ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. 'ಪ್ರೇಮಂ ಪೂಜ್ಯಂ' ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಈಕೆ ಈಗ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.


Click it and Unblock the Notifications











