ಚೈತ್ರಾ ಆಚಾರ್-ಕಿಶನ್ ಬಿಂದಾಸ್ ಸ್ಟೆಪ್ಟ್; ನೆಟ್ಟಿಗರು ಕಾಮೆಂಟ್ ನೋಡಿದ್ದೀರಾ?

By ಅನಿತಾ ಬನಾರಿ

ಸಪ್ತಸಾಗರದ ಚೆಲುವೆ ಸಿನಿಮಾ ಖ್ಯಾತಿಯ ನಟಿ ಚೈತ್ರ ಆಚಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆ್ಯಕ್ಟಿವ್. ನಟಿ ಅಷ್ಟೇ ಅಲ್ಲದೆ ಗಾಯಕಿ ಎಂದು ಹೆಸರು ಮಾಡಿರುವ ಈಕೆ ತಮ್ಮ ಹಾಡಾದ ಸೋಜುಗಾದ ಸೂಜು ಮಲ್ಲಿಗೆಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ನಟನೆ ಹಾಗೂ ಹಾಡಿನೊಂದಿಗೆ ಈಗ ಡಾನ್ಸ್‌ನಲ್ಲೂ ನಟಿ ಚೈತ್ರ ಆಚಾರ್ ಸೈ ಎನಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ಚೈತ್ರಾ ಆಚಾರ್ ಅವರು, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಒಂದಷ್ಟು ಫೋಟೋಶೂಟ್‌ಗಳನ್ನು ಪೋಸ್ಟ್ ಮಾಡಿಕೊಂಡಿದ್ದರು. ಬಿಳಿ ಉಡುಗೆ ತೊಟ್ಟಿದ್ದ ಇವರು ನಾನಾ ರೀತಿಯ ಪೋಸ್ಟ್‌ಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋಗೆ ಒಳ್ಳೆ ಕಮೆಂಟ್‌ಗಳು ಬಂದಿತ್ತು. ಆ ಪೋಸ್ಟ್ ಬಹಳ ವೈರಲ್ ಕೂಡ ಆಗಿತ್ತು. ಆದರೆ, ಇದೀಗ ಈ ಫೋಟೋ ಹಿಂದಿನ ವಿಚಾರ ಹೊರ ಬಂದಿದೆ.

Actress Chaithra J Achar steps for animal movie song with Kishen Bilagali

ಅದೇನೆಂದರೆ ನಟಿ ಚೈತ್ರಾ ಆಚಾರ್ ಅವರು ಬಿಗ್ ಬಾಸ್ ಖ್ಯಾತಿಯ ಡ್ಯಾನ್ಸರ್ ಕಿಶನ್ ಬಿಳಗಲಿ ಅವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.ಹೌದು, ಬಿಗ್ ಬಾಸ್‌ನಲ್ಲಿ ಬಹಳಷ್ಟು ಹೆಸರು ಮಾಡಿರುವ ಡ್ಯಾನ್ಸರ್ ಕಿಶನ್ ಬೆಳಗಲಿ ಆಗಾಗ ಸೆಲೆಬ್ರಿಟಿಗಳೊಂದಿಗೆ ಡ್ಯಾನ್ಸ್ ಸ್ಟೆಪ್ ಹಾಕುತ್ತಿರುತ್ತಾರೆ. ಅಂತಹ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಕೂಡ ಮಾಡುತ್ತಿರುತ್ತಾರೆ. ಇವರ ಡ್ಯಾನ್ಸ್ ಸ್ಟೆಪ್ಪು ಕೊರಿಯೋಗ್ರಾಫಿಗೆ ಬಹಳಷ್ಟು ಜನ ಫ್ಯಾನ್ಸ್‌ಗಳಿದ್ದಾರೆ.

ನಟಿ ನಮೃತಾ ಗೌಡ, ದೀಪಿಕಾ ದಾಸ್ ಸೇರಿದಂತೆ ಹಲವು ನಟಿಯರೊಂದಿಗೆ ಆಗಾಗ ಈ ರೀತಿ ಡ್ಯಾನ್ಸ್ ವೀಡಿಯೋಸ್ ಅನ್ನು ಕಿಶೋರ್ ಹಾಕುತ್ತಿದ್ದರು. ಅವರು ಇದೀಗ ನಟಿ ಚೈತ್ರಾ ಆಚಾರ್ ಜೊತೆಗೆ ಡ್ಯಾನ್ಸ್ ಮಾಡಿ ಆ ವಿಡಿಯೋವನ್ನು ತಮ್ಮ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂದ ಹಾಗೆ ಇವರಿಬ್ಬರು 'ಅನಿಮಲ್' ಸಿನಿಮಾ ಖ್ಯಾತಿಯ "ಪೆಹಲೆ ಬಿ ಮೇ.." ಎಂಬ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಚೈತ್ರಾ ಆಚಾರ್ ಅವರಿಗಂತೂ "ಅಂತ:ಪುರದ ರಾಣಿಯಂತೆ ಕಾಣುತ್ತೀರಿ" ಎಂದು ಕಾಮೆಂಟ್ಸ್ ಹಾಕಿರುವ ಅಭಿಮಾನಿಗಳು, ಅವರ ಮಾದಕ ಸ್ಟೆಪ್‌ಗಳು ಹಾಗೂ ಶೃಂಗಾರದ ಪೋಸ್‌ಗಳಿಗೆ ಫಿದಾ ಆಗಿದ್ದಾರೆ. ಇನ್ನು ಮುಖ್ಯವಾಗಿ ಒರಿಜಿನಲ್ ಕಮಾಲ್ ಹಾಡಿಗಿಂತ ಈ ಕೊರಿಯೋಗ್ರಾಫಿ ಸಕ್ಕತ್ತಾಗಿದೆ ಎಂದು ಬಹಳಷ್ಟು ಜನ ಶ್ಲಾಘಿಸಿದ್ದಾರೆ.

ಒಟ್ಟಿನಲ್ಲಿ ಈ ಮೂಲಕ ಚೈತ್ರಾ ಆಚಾರ್ ಸಖತ್ತಾಗಿ ಸ್ಟೆಪ್ ಹಾಕಿರುವುದು ತಿಳಿದು ಬಂದಿದೆ. ಜೊತೆಗೆ ಕಿಶನ್ ಬಿಳಗಲಿ ಅವರ ಈ ವಿಡಿಯೋ ಬಹಳಷ್ಟು ವೈರಲಾಗುತ್ತಿದೆ. ಅಭಿಮಾನಿಗಳು ಹಾಗೂ ಫ್ಯಾನ್ ಫಾಲೋವರ್ಸ್‌ಗೆ ಖುಷಿಯಾಗಿರುವುದು ಸತ್ಯ.

More from Filmibeat

English summary
Kishan Bilagali and Chaitra Aachar dance is wins the hearts of netizens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X