"ಆ ದೃಶ್ಯದಲ್ಲಿ ರಾಜ್‌ ಬಿ ಶೆಟ್ಟಿ ಬರೆದ ಡೈಲಾಗ್ ಹೇಳಲು ಬರಲೇ ಇಲ್ಲ"; ನಟಿ ಚೈತ್ರಾ ಆಚಾರ್

By ಅನಿತಾ ಬನಾರಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯಕ್ಕೆ ಬೋಲ್ಡ್ ನಟಿ ಎಂದು ಎನಿಸಿಕೊಂಡಿರುವ ನಟಿ ಚೈತ್ರ ಆಚಾರ್ ಅವರು ತಮ್ಮ ಬೆಸ್ಟ್ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ನಟಿ ಚೈತ್ರಾ ಆಚಾರ್ ಅವರು 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿನ ಸುರಭಿ ಪಾತ್ರದ ನಂತರ ಬಹಳಷ್ಟು ಖ್ಯಾತಿ ಪಡೆದಿದ್ದಾರೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿ ಗಳಿಂದ ಆಫರ್ ಕೂಡ ಬರುತ್ತಿದೆಯಂತೆ. ಈ ಸಂದರ್ಭದಲ್ಲಿ ಒಂದು ಇಂಟರ್ವ್ಯೂನಲ್ಲಿ ಮಾತನಾಡಿದ ಅವರು ತಮ್ಮ ಬೆಸ್ಟ್ ಸಿನಿಮಾ ಸೀನ್ ಅನ್ನು ನೆನಪಿಸಿಕೊಂಡಿದ್ದಾರೆ.

"ಟೋಬಿ ಸಿನಿಮಾದಲ್ಲಿ ಅಪ್ಪ-ಮಗಳ ಜಗಳದ ದೃಶ್ಯ ಒಂದಿದೆ. ಅದರಲ್ಲಿ ಮಗಳಾದ ನನಗೆ ಅಪ್ಪ ನನ್ನ ಸ್ವಂತ ಅಪ್ಪ ಇಲ್ಲ ಎಂಬ ವಿಚಾರ ಗೊತ್ತಾಗಿರುತ್ತದೆ. ಅದು ಅಲ್ಲದೆ ಆತ ನನಗೆ ತುಂಬಾ ಹರ್ಟ್ ಮಾಡಿರುತ್ತಾನೆ. ಮನೆ ಬಳಿ ಬರುವ ಅವನೊಂದಿಗೆ ನಾನು ಜಗಳ ಆಡಬೇಕಿತ್ತು. ಆದರೆ ಎಷ್ಟೇ ಪ್ರಯತ್ನಿಸಿದರೂ ರಾಜ್ ಬಿ ಶೆಟ್ಟಿ ಅವರು ಬರೆದ ಡೈಲಾಗ್‌ಗಳನ್ನು ನನಗೆ ಅಭಿನಯದ ಮೂಲಕ ಹೇಳಲು ಸಾಧ್ಯವಾಗಲಿಲ್ಲ. ಆಗ ರಾಜ್ ಬಿ ಶೆಟ್ಟಿ ಅವರು ನಾನು ಬರೆದ ಡೈಲಾಗ್‌ಗಳೇ ಬೇಕು ಎಂದೇನಿಲ್ಲ ಭಾವನೆಯನ್ನು ಚೆನ್ನಾಗಿ ಕೊಟ್ಟರೆ ಸಾಕು ಎಂದರು. ಸರಿ ಅಂತ ನಾನು ನನಗೆ ಅನಿಸಿದ ರೀತಿಯಲ್ಲಿ ಅಭಿನಯಿಸಿ ಡೈಲಾಗ್‌ಗಳನ್ನು ಡೆಲಿವರಿ ಮಾಡಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Actress Chaitra Achar remembers that this is an unforgettable movie scene

ಇದರ ಜೊತೆಗೆ "ಡೈಲಾಗ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಸೆರಗು ಕೆಳಗೆ ಜಾರಿತು. ಸಹಜವಾಗಿ ಅದನ್ನು ಮೇಲಕೆತ್ತಿಕೊಂಡು ನನ್ನ ಡೈಲಾಗ್ ಹಾಗೂ ಅಭಿನಯವನ್ನು ಮುಂದುವರಿಸಿದೆ. ಇವತ್ತು ಕೂತ್ಕೊಂಡು ಸ್ಕ್ರೀನ್ ಮೇಲೆ ಆ ದೃಶ್ಯವನ್ನು ನೋಡುವಾಗ ನನಗೆ ಇದೇ ಬೆಸ್ಟ್ ಸೀನ್ ಎಂದು ಅನಿಸುವುದು. ಬಹಳ ಸಹಜವಾಗಿ ನೈಜವಾಗಿ ನಾನು ನಟಿಸಿದ ಸೀನ್‌ಗಳಲ್ಲಿ ಅದು ಒಂದು" ಎಂದಿದ್ದಾರೆ ನಟಿ ಚೈತ್ರಾ ಆಚಾರ್.

ಅಂದ ಹಾಗೆ ನಟಿ ಚೈತ್ರಾ ಆಚಾರ್ ಅವರು 'ಟೋಬಿ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರ ಮಗಳು ಜೆನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೋಬಿ ಮಗಳು ಜೆನ್ನಿ ತನ್ನ ಅಪ್ಪನೊಂದಿಗೆ ಜಗಳ ಕಾಯಬೇಕಾದ ಸಂದರ್ಭ ಒಂದು ಬರುತ್ತದೆ. ಆಗ ಈ ರೀತಿಯೆಲ್ಲ ಅನುಭವ ಆಯ್ತು ಎಂದು ಹೇಳಿಕೊಂಡಿದ್ದಾರೆ. ಅಂದ ಹಾಗೆ 'ಟೋಬಿ' ಸಿನಿಮಾ ನೋಡಿದರೆ ಈ ದೃಶ್ಯದ ನೈಜತೆ ನಮ್ಮ ಕಣ್ಣೆದುರಿಗೆ ಬರುತ್ತದೆ.

Actress Chaitra Achar remembers that this is an unforgettable movie scene

'ಟೋಬಿ' ಸಿನಿಮಾ ಮುಗಿದ ಮೇಲೆಯೂ ಜೆನ್ನಿ ಪಾತ್ರ ಸಿನಿ ಪ್ರೇಕ್ಷಕರನ್ನು ಕಾಡುವುದಂತೂ ನಿಜ. ತಂದೆ ಟೋಬಿಯಿಂದ ಬೇಸತ್ತ ಸಾಕು ಮಗಳು ಜೆನ್ನಿ ಅಪ್ಪನನ್ನು ಮನೆಯಿಂದ ಹೊರ ನಡೆಯಲು ಹೇಳುತ್ತಾಳೆ. ಬಹಳ ಭಾವನಾತ್ಮಕವಾಗಿ ಬಂದಿರುವ ಈ ದೃಶ್ಯ ಎಂತವರಲ್ಲೂ ಒಮ್ಮೆ ಕಣ್ಣೀರು ತರಿಸುತ್ತದೆ.

ಇದೀಗ ಆ ದೃಶ್ಯವೇ ಚೈತ್ರ ಆಚಾರ್ ಅವರ ಫೇವರೆಟ್ ದೃಶ್ಯ ಎಂದು ಅವರು ಹೇಳಿಕೊಂಡಿದ್ದಾರೆ. ಅದ್ಭುತವಾಗಿ ಚಿತ್ರ, ಚಿತ್ರಕಥೆ, ಸಂಭಾಷಣೆ ಬರೆದಿರುವ ರಾಜ್ ಬಿ ಶೆಟ್ಟಿ ಅವರ ಈ ಟೋಬಿ ಸಿನಿಮಾವನ್ನು ನೋಡಿದವರಿಗೆ ಇದು ನಿಜ ಎನಿಸುವುದು ಹೌದು.

More from Filmibeat

English summary
Chaitra Achar, who acted as Jenny in the movie Toby. Remembering that one scene, do you know what Chaitra Achar said:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X