'ಭಾವ ತೀರ ಯಾನ'ದ ಮೂಲಕ ಸ್ಯಾಂಡಲ್‌ವುಡ್‌ಗೆ ನಟಿ ಚಂದನಾ ಅನಂತಕೃಷ್ಣ ಎಂಟ್ರಿ; 'ಲಕ್ಷ್ಮಿ ನಿವಾಸ' ಕಥೆಯೇನು?

By ಅನಿತಾ ಬನಾರಿ

ನಟಿ, ನಿರೂಪಕಿ, ಸಂಗೀತಗಾರ್ತಿ, ನೃತ್ಯಗಾರ್ತಿ ಚಂದನಾ ಅನಂತಕೃಷ್ಣ ಯಾರಿಗೂ ಗೊತ್ತಿಲ್ಲ ಹೇಳಿ!? ಕಳೆದ ಕೆಲವು ವರ್ಷಗಳಿಂದ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿರುವ ನಟಿ ಚಂದನಾ ಅನಂತಕೃಷ್ಣ ಅವರು ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಜಾಹ್ನವಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

'ರಾಜ ರಾಣಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನಾ ಅನಂತಕೃಷ್ಣ ಬಿಗ್ ಬಾಸ್ ಮೂಲಕ ಬಹಳಷ್ಟು ಸದ್ದು ಮಾಡಿದ್ದರು. ನಂತರ 'ಹೂ ಮಳೆ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ ಈಕೆ ಡ್ಯಾನ್ಸಿಂಗ್ ಶೋವಿನಲ್ಲಿ ಹೆಜ್ಜೆ ಹಾಕಿದರು. ಮುಂದೆ 'ಎದೆ ತುಂಬಿ ಹಾಡಿದೆನು' ರಿಯಾಲಿಟಿ ಶೋವಿನ ನಿರೂಪಕಿಯಾಗಿಯೂ ಈಕೆ ಕಾಣಿಸಿಕೊಂಡಿದ್ದರು.

Actress Chandana Ananthakrishna entered sandalwood through the movie Bhava Teera Yana

ಭರತನಾಟ್ಯ ಕಲಾವಿದೆ ಆಗಿರುವ ಇವರು ಚೆನ್ನಾಗಿ ಸಂಗೀತವನ್ನು ಕಲಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ಈಕೆ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಡ್ಯಾನ್ಸ್, ಸಂಗೀತ ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕಿರುತೆರೆ ಪ್ರೇಕ್ಷಕರಿಗಂತೂ ಚೆನ್ನಾಗಿ ಪರಿಚಯವಿರುವ ಚಂದನಾ ಅನಂತಕೃಷ್ಣ ಇದೀಗ ಹಿರಿತೆರಿಗೆ ಕಾಲಿಟ್ಟಿರುವುದು ವಿಶೇಷ.

"ನನ್ನ ಗುರಿಯು ಸಮುದ್ರಾನೇ ಆಗಿತ್ತು. ಆದರೆ, ಸಮುದ್ರದ ನೀರು ಎಲ್ಲಿ ಕುಡಿಯೋಕೆ ಹೇಗೆ ಆಗುತ್ತೆ ಹೇಳಿ?!" ಎಂಬ ಒಂದು ಮಾರ್ಮಿಕ ಡೈಲಾಗ್ ಮೂಲಕ ಚಂದನ ಅವರ ಮೊದಲ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ಹೌದು, ನಟಿ ಚಂದನಾ ಅನಂತಕೃಷ್ಣ 'ಭಾವ ತೀರ ಯಾನ' ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇದೀಗ ಹಿರಿತೆರೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಮಯೂರ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಅವರು ಸೇರಿ ನಿರ್ಮಿಸುತ್ತಿರುವ ಈ ಸಿನಿಮಾಗೆ ಚಂದನಾ ಅನಂತಕೃಷ್ಣ ಅವರೇ ಮುಖ್ಯ ಪಾತ್ರಧಾರಿ ಆಗಿದ್ದು ಧೃತಿ ಎಂಬ ಪಾತ್ರವನ್ನು ಮಾಡುತ್ತಿದ್ದಾರಂತೆ. ಈ ಮೊದಲು ಮಯೂರ ಅಂಬೆಕಲ್ಲು 'ಶಾಖಾಹಾರಿ' ಎಂಬ ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು.

Actress Chandana Ananthakrishna entered sandalwood through the movie Bhava Teera Yana

ತಮ್ಮ ಧೃತಿ ಪಾತ್ರದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ನಟಿ ಚಂದನಾ ಅನಂತಕೃಷ್ಣ, "ಸ್ಯಾಂಡಲ್‌ವುಡ್‌ಗೆ ಒಂದು ಒಳ್ಳೆಯ ಸಿನಿಮಾ ಮೂಲಕ ಕಾಲಿಡುತ್ತಿದ್ದೇನೆ ಎಂದು ನಂಬಿದ್ದೇನೆ. ಇಲ್ಲಿವರೆಗೂ ಧಾರಾವಾಹಿಗಳಲ್ಲಿ ನಾನು ಮಾಡಿರುವ ಪಾತ್ರಗಳು ನನ್ನ ಸ್ವಭಾವಕ್ಕೆ ಹತ್ತಿರದ್ದಾಗಿತ್ತು. ಆದರೆ ಈ ಸಿನಿಮಾದಲ್ಲಿ ಧೃತಿ ಪಾತ್ರ ಬಹಳ ಪ್ರೌಢವಾಗಿದೆ. ಧೃತಿ ಪಾತ್ರದ ಸುತ್ತ ವಿಭಿನ್ನವಾದ ಬೇರೆ ಬೇರೆ ಪಾತ್ರಗಳು ಸುತ್ತುತ್ತವೆ. ಇನ್ಮೇಲೆ ನಾನು ಒಂದೇ ರೀತಿ ಪಾತ್ರಗಳನ್ನೇ ಮಾಡಲು ತಯಾರಿಲ್ಲ, ವಿಭಿನ್ನ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಅದರಲ್ಲೂ ಸಂಗೀತ ಹಾಗೂ ನೃತ್ಯಕ್ಕೆ ಸಂಬಂಧಿಸಿದ ಪಾತ್ರಗಳನ್ನು ಮಾಡುವ ಉತ್ಸಾಹದಲ್ಲಿ ಇದ್ದೇನೆ"ಎಂದಿದ್ದಾರೆ.

ಸದ್ಯಕ್ಕೆ ಚಂದನ ಅನಂತಕೃಷ್ಣ ಅವರ ಫಸ್ಟ್ ಲುಕ್ ಇಂಟರ್ನೆಟ್‌ನಲ್ಲಿ ಬಹಳ ಸದ್ದು ಮಾಡುತ್ತಿದೆ. ಹಲವು ವರ್ಷಗಳಿಂದ ಕಿರುತೆರೆಯಲ್ಲಿದ್ದು ಮೊದಲ ಬಾರಿಗೆ ಹಿರಿತರೆಗೆ ಒಂದೊಳ್ಳೆಯ ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಡುವ ಪ್ರಯತ್ನದಲ್ಲಿರುವ ಚಂದನಾ ಅನಂತಕೃಷ್ಣ ಅವರು ಯಾವ ರೀತಿ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುತ್ತಾರೆ ಎಂಬುದು ಸದ್ಯಕ್ಕಂತೂ ಕುತೂಹಲ.

More from Filmibeat

English summary
Actress Chandana Ananthakrishna jumped to the big screen after the small screen:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X