For Quick Alerts
  ALLOW NOTIFICATIONS  
  For Daily Alerts

  ಗಾಯಕಿಯಾಗಿ ಗಮನ ಸೆಳೆದ ಅಭಿಮಾನಿಗಳ ಪ್ರೀತಿಯ ಚುಕ್ಕಿ ಚಂದನಾ!

  By ಪ್ರಿಯಾ ದೊರೆ
  |

  ಕನ್ನಡ ಕಿರುತೆರೆಯಲ್ಲಿ ಚುಕ್ಕಿ ಎಂದೇ ಖ್ಯಾತಿ ಪಡೆದಿರುವ ನಟಿ ಚಂದನಾ ಅನಂತಕೃಷ್ಣ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಡಿಫರೆಂಟ್ ಆಗಿ ಅಭಿಮಾನಿಗಳ ಎದುರು ಬರುವ ಚಂದನಾ ಅನಂತಕೃಷ್ಣ, ಈ ಬಾರಿ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳನ್ನು ಫುಲ್ ಖುಷ್ ಆಗುವಂತೆ ಮಾಡಿದೆ.

  ಇಷ್ಟು ದಿನ ಚಂದನಾ ಅನಂತಕೃಷ್ಣ ಅವರು ಕೇವಲ ನಟಿಯಷ್ಟೇ ಅಲ್ಲ. ಒಳ್ಳೆ ಡ್ಯಾನ್ಸರ್ ಎನ್ನುವುದು ಗೊತ್ತಿತ್ತು. ಅದರ ಜೊತೆಗೆ ಕೆಲ ಶೋಗಳನ್ನು ಹೋಸ್ಟ್ ಕೂಡ ಮಾಡಿದ್ದರು. ಆದರೆ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

  ನಟಿ ಚಂದನಾ ಅನಂತಕೃಷ್ಣ ಅವರು ತಮ್ಮ ಒಂದೊಂದೇ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕವಯಸ್ಸಿನಿಂದ ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ನಟಿಯಾಗಿ, ಕಿರುತೆರೆಯಲ್ಲಿ ಮಿಂಚಿ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡು, ಇದೀಗ ಬೆಳ್ಳಿ ಪರದೆ ಮೇಲೂ ಕಾಣಿಸಿಕೊಂಡಿದ್ದಾರೆ.

  ನಟಿಯಾಗುವ ಕನಸು ಚಂದನಾರದ್ದು

  ನಟಿಯಾಗುವ ಕನಸು ಚಂದನಾರದ್ದು

  ಮೂಲತಃ ತುಮಕೂರಿನವರಾದ ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಚಂದನಾ ಅವರಿಗೆ ನಟಿಯಾಗಬೇಕು ಎಂಬ ಕನಸು ಇತ್ತಂತೆ. ಮೊದಲಿನಿಂದಲೂ ಇದ್ದ ಈ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿಯೇ ರಂಗಭೂಮಿಯ ಭಾಗವಾದರಂತೆ. ನಟಿಯಾಗುವ ಕನಸನ್ನು ಬಳಿಕ ನನಸು ಮಾಡಿಕೊಂಡ ಚಂದನಾ, ತಮ್ಮ ಉಳಿದ ಆಸೆಗಳನ್ನು ಪೂರೈಸಿಕೊಳ್ಳುವತ್ತ ಸಾಗಿದ್ದಾರೆ. ಅಲ್ಲದೇ ಸಿನಿಮಾಗಳಲ್ಲೂ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆಯೇ 'ಜಾಲಿ ಬ್ಯಾಚುಲರ್ಸ್' ಎಂಬ ಸಿನಿಮಾದಲ್ಲಿ ನಟಿಸಿದ್ದು, ಇದು ಇತ್ತೀಚೆಗಷ್ಟೇ ರಿಲೀಸ್ ಆಗಿದೆ.

  ಕಿರುತೆರೆ ವೀಕ್ಷಕರ ನೆಚ್ಚಿನ ಚುಕ್ಕಿ

  ಕಿರುತೆರೆ ವೀಕ್ಷಕರ ನೆಚ್ಚಿನ ಚುಕ್ಕಿ

  ಚಂದನಾ ಅನಂತಕೃಷ್ಣ ಅವರು ರಂಗಭೂಮಿ ಕಲಾವಿದೆ. ಚಂದನಾ ನಟಿಸಿದ ನಾಟಕಗಳಲ್ಲಿ ಮಹಾಮಾಯಿ ನಾಟಕ ತುಂಬಾ ಪ್ರಸಿದ್ಧಿಯಾಗಿದೆ. ಚಂದನಾ ರಂಗಭೂಮಿ ಮೂಲಕವೇ ಹಲವು ನಾಟಕಗಳಿಗೆ ಬಣ್ಣ ಹಚ್ಚಿ, ನಂತರ ಕಿರುತೆರೆಗೆ ಎಂಟ್ರಿಕೊಟ್ಟರು. 'ರಾಜಾ ರಾಣಿ' ಧಾರಾವಾಹಿಯಲ್ಲಿ ಎಡವಟ್ಟು ಚುಕ್ಕಿ ಪಾತ್ರದಲ್ಲಿ ಚಂದನಾ ಪ್ರೇಕ್ಷಕರ ಮನ ಗೆದ್ದಿದ್ದರು. ರಾಜಾ ರಾಣಿ ಧಾರಾವಾಹಿಯಲ್ಲಿನ ಚುಕ್ಕಿ ಹೆಸರಿನಿಂದಲೇ ಖ್ಯಾತಿ ಪಡೆದಿರುವ ಚಂದನಾ ಅನಂತಕೃಷ್ಣ ಅವರು ಕೆಲ ಸಮಯ ಕಿರುತೆರೆಯಿಂದ ಮಾಯವಾಗಿದ್ದರು. ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಸೃಷ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಬಿಗ್‌ಬಾಸ್‌ ಮನೆಗೆ ಹೋಗಿ ಬಂದ ಚಂದನಾ

  ಬಿಗ್‌ಬಾಸ್‌ ಮನೆಗೆ ಹೋಗಿ ಬಂದ ಚಂದನಾ

  ಕಿರುತೆರೆಯಲ್ಲಿ ಮಿಂಚಿರುವ ಚಂದನಾ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದರು. ಬಿಗ್ ಬಾಸ್ ಬಳಿಕ ಚಂದನಾ ಅವರು ಡ್ಯಾನ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ್ದರು. ನಟನೆಗಷ್ಟೇ ಸೀಮಿತವಾಗಿರದ ಚಂದನಾ ನಿರೂಪಣೆಯನ್ನು ಮಾಡಿದ್ದಾರೆ. 'ಹಾಡು ಕರ್ನಾಟಕ' ಎಂಬ ಕಾರ್ಯಕ್ರಮವನ್ನು ಚಂದನಾ ಅವರು ಅದ್ಭುತವಾಗಿ ನಡೆಸಿಕೊಟ್ಟಿದ್ದರು. ಭರತನಾಟ್ಯ ಕಲಿತಿರುವ ಅನಂತಕೃಷ್ಣ ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಇದರ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದರು. ಇನ್ನು ಅಪ್ಪನ ನೆನಪಾದಾಗ, ಬೇಸರವಾದಾಗ, ಬೋರ್ ಎನಿಸಿದರೆ, ಖುಷಿಯಾಗಿದ್ದರೂ ಚಂದನಾ ಅವರು ಹಾಡನ್ನು ಗುನುಗುತ್ತಿರುತ್ತಾರೆ. ಭರತನಾಟ್ಯ ಕಲಾವಿದೆಯಾಗಿರುವುದರಿಂದ, ಡ್ಯಾನ್ಸ್‌ನಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಕಂಡಿದ್ದಾರೆ.

  ಹಾಡು ಹಾಡಿ ಎಲ್ಲರ ಗಮನ ಸೆಳೆದ ನಟಿ

  ಹಾಡು ಹಾಡಿ ಎಲ್ಲರ ಗಮನ ಸೆಳೆದ ನಟಿ

  ನಟಿ ಚಂದನಾ ಅನಂತ ಕೃಷ್ಣ ಅವರು ನಟಿ, ಡ್ಯಾನ್ಸರ್, ಆಂಕರ್ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅಲ್ಲದೇ, ಸಕಲಕಲಾವಲ್ಲಭೆಯಾಗಿರುವ ಚಂದನಾ ತಮ್ಮಲ್ಲಿರುವ ಯಾವ ಟ್ಯಾಲೆಂಟ್ ಅನ್ನು ನೆಗೆಲೆಕ್ಟ್ ಮಾಡುವುದಿಲ್ಲ. ಕಿರುತೆರೆಯಿಂದ ಕೊಂಚ ಮರೆಯಾದರೂ, ಚಂದನಾ ಹೊಸತೇನೋ ಮಾಡುತ್ತಿದ್ದಾರೆ ಎಂದೇ ಅರ್ಥ. ಇದೀಗ ಅವರು ಹಾಡಿ ನಟಿಸಿರುವ ಆಲ್ಬಂ ಒಂದು ರಿಲೀಸ್ ಆಗಿದೆ. 'ಎದುರಲಿ ಇರುವಾಗ ನೀನು' ಎಂಬ ಈ ಆಲ್ಬಂ ಹಾಡು ಈಗ ಎಲ್ಲರನ್ನು ಭಾವನಾ ಲೋಕಕ್ಕೆ ದೂಡುತ್ತಿದೆ. ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನ ಮಾಡಿದ್ದು, ಹಾಡು ನಿಧಾನವಾಗಿ ಸದ್ದು ಮಾಡುತ್ತಿದೆ. ಈ ಆಲ್ಬಂ ಸಾಂಗ್‌ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದರು.

  English summary
  Actress chandana ananthakrishna as became singer by singing for a album and the song is out now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X