Chandana Ananthakrishna: ಭರ್ಜರಿ ಬ್ಯಾಚುಲರ್ಸ್ ಶೋ ಗೆ ಗುಡ್ ಬೈ ಹೇಳಿದ ನಟಿ ಚಂದನ ಅನಂತಕೃಷ್ಣ!
ಮದುವೆಗೆ ಹೆಣ್ಣೇ ಸಿಗುತ್ತಿಲ್ಲ ಎಂಬುದೇ ದೊಡ್ಡ ಕಂಪ್ಲೇಂಟ್ ಆಗಿರುವ ಈ ಕಾಲದಲ್ಲಿ ಈ ರೀತಿ ಮದುವೆಗೆ ತಯಾರಾಗಿರುವ ಗಂಡು ಹುಡುಗರಿಗೆ ಸರಿಯಾದ ಸೂಕ್ತ ಹೆಣ್ಣು ಸಿಗುವುದೇ ಕಷ್ಟವಾಗಿದೆ. ಅಂತದ್ದರಲ್ಲಿ 'ಭರ್ಜರಿ ಬ್ಯಾಚುಲರ್' ರಿಯಾಲಿಟಿ ಶೋ ಅನ್ನು ನಡೆಸುತ್ತಿರುವ ಜೀ ವಾಹಿನಿಯು ಟಿವಿ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಬೇರೆ ಬೇರೆ ಟ್ಯಾಲೆಂಟ್ ವೇದಿಕೆ ಮೇಲೆ ತಂದಿದೆ.
ಮದುವೆ ವಯಸ್ಸಿಗೆ ಬಂದಿರುವ ಈ ಪ್ರತಿಭಾವಂತ ಹುಡುಗರಿಗೆ ತಮ್ಮ ಶೋನಲ್ಲಿ ಒಂದು ವೇದಿಕೆಯನ್ನು ಏರ್ಪಾಡು ಮಾಡಿ ಕೊಟ್ಟು ಅವರ ವೈವಿಧ್ಯ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ.

ಇಂತಹ ವಿಭಿನ್ನ ಶೋ ಈವರೆಗೂ ಕನ್ನಡದ ಯಾವುದೇ ವಾಹಿನಿಯಲ್ಲಿ ಬಂದಿರಲಿಲ್ಲ. ಈಗಾಗಲೇ ಶೋಗೆ ಬಹಳಷ್ಟು ಪಾಸಿಟೀವ್ ಕಮೆಂಟ್‌ಗಳು, ಪ್ರತಿಕ್ರಿಯೆ ಬಂದಿದ್ದು ಶೋ ಚೆನ್ನಾಗಿ ನಡೆಯುತ್ತಿದೆ. ಇದರಲ್ಲಿ ಕನ್ನಡದ ಖ್ಯಾತ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಕೂಡಾ ಆಗಿ ಭಾಗವಹಿಸಿದ್ದರು.
'ಭರ್ಜರಿ ಬ್ಯಾಚುಲರ್ಸ್' ಶೋನಲ್ಲಿ ಹತ್ತು ವಾರಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ ನಟಿ ಚಂದನ ಅನಂತಕೃಷ್ಣ ಅವರು ಇದೀಗ ಶೋಗೆ ಗುಡ್ ಬೈ ಹೇಳಿದ್ದಾರೆ. ರುದ್ರ ಮಾಸ್ಟರ್ ಪಾರ್ಟ್ನರ್ ಆಗಿ ಶೋನಲ್ಲಿ ಭಾಗವಹಿಸಿದ್ದ ಚಂದನ ಅನಂತಕೃಷ್ಣ ಹೋದ ವಾರದ ಎಪಿಸೋಡ್‌ನಲ್ಲಿ ಈ ಶೋಗೆ ಟಾಟಾ ಬಾಯ್ ಬಾಯ್ ಹೇಳಿದ್ದು ತುಂಬಾ ಭಾವುಕವರಾಗಿದ್ದರು. ತಾವು ತಮ್ಮ ಪಾರ್ಟ್ನರ್ ರುದ್ರ ಮಾಸ್ಟರ್ ಇಂದ ಕಲಿತ ಹಲವಾರು ಪಾಠಗಳನ್ನು ನೆನೆದು ಅಂತೆಯೇ ಇತರೇ ಸಹ ಕಲಾವಿದರ ಪ್ರೋತ್ಸಾಹ ಹಾಗೂ ಗೆಳೆತನವನ್ನು ನೆನೆದು ಕಣ್ಣೀರಿಟ್ಟರು.

ಶೋನಲ್ಲಿ ಭಾಗವಹಿಸುತ್ತಿರುವ ಇತರ ಹಲವಾರು ಸ್ಪರ್ಧಿಗಳು ಎಲ್ಲರೂ ಸೇರಿ ತಮ್ಮ ಕೈ ಅಚ್ಚಿರುವ ಒಂದು ದೊಡ್ಡ ಕ್ಯಾನ್ವಾಸ್‌ನಲ್ಲಿ ಚಂದನ ಅನಂತಕೃಷ್ಣಗೆ ಶುಭ ಹಾರೈಕೆಗಳನ್ನು ಬರೆದು ಕೊನೆಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ರೀತಿ ಪ್ರೀತಿಯಿಂದ ಸಿಕ್ಕ ಗಿಫ್ಟ್‌ಗೆ ಎದೆ ತುಂಬಿ ಬಂದ ಚಂದನ ಅವರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿ ಶೋವಿನಿಂದ ಹೊರ ನಡೆದಿದ್ದಾರೆ.
ನಟ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ 'ಭರ್ಜರಿ ಬ್ಯಾಚುಲರ್' ಶೋವನ್ನು ಚಂದನ ಅನಂತಕೃಷ್ಣ ಅವರು ಬಿಟ್ಟಿದ್ದಾದರೂ ಯಾಕೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದೇ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಒಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಚಂದನಾ ಅನಂತಕೃಷ್ಣ ಆ ಧಾರಾವಾಹಿಯ ತಯಾರಿಗಾಗಿ ಹೊರಬಂದಿದ್ದಾರೆ. ಇದರ ಬಗ್ಗೆ ಬೇಸರ ಇದ್ದರೂ ಇದು ಅನಿವಾರ್ಯವಾದ ಕಾರಣ ಎಲ್ಲರೂ ಅವರನ್ನು ಖುಷಿಯಿಂದ ಬೀಳ್ಕೊಟ್ಟಿದ್ದಾರೆ.
ಚಂದನಾ ಅಂತ ಕೃಷ್ಣ ಈವರೆಗೂ ಹಲವಾರು ಧಾರಾವಾಹಿಗಳಿಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಬಿಗ್ ಬಾಸ್‌ಗೆ ಹೋದ ನಂತರ ಮತ್ತಷ್ಟು ಹೆಸರು ಗಳಿಸಿದ್ದರು. ಮಲ್ಟಿ ಟ್ಯಾಲೆಂಟೆಡ್ ಆಗಿರುವ ಈ ನಟಿ ಹೊಸ ಧಾರಾವಾಹಿ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿದೆ.


Click it and Unblock the Notifications











