ಬಣ್ಣದ ಲೋಕದಲ್ಲಿ ಮಿಂದೆದ್ದ ನೃತ್ಯಗಾರ್ತಿ ಹಿನ್ನೆಲೆ ಗಾಯಕಿ ಚಂದನಾ ಈಗ ಸಿಕ್ಕಾಪಟ್ಟೆ ಬ್ಯುಸಿ

ಭರತನಾಟ್ಯ ಕಲಿತು, ಹಿನ್ನೆಲೆ ಗಾಯಕಿಯಾಗಿ, ನಟಿಸುವ ಈ ಬೆಡಗಿ ನಿರೂಪಣೆಗೂ ಹಿಂಜರಿಯುವುದಿಲ್ಲ. ಯಾವುದೇ ಕಲೆಯನ್ನು ಆಧರಿಸಿ ಕಲಿಯುವ ಚಂದನಾ ಅನಂತಕೃಷ್ಣ ಇದ್ದಕ್ಕಿದ್ದ ಹಾಗೆ ಬಣ್ಣದ ಲೋಕಕ್ಕೆ ಬ್ರೇಕ್ ಕೊಟ್ಟಿದ್ದಾರೆ.
ಚಂದನಾ ಅವರ ನಟನೆಯನ್ನು ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲೂ ಇಣುಕಿ ನೋಡುತ್ತಿರುತ್ತಾರೆ. ಹಾಗಾದರೆ ಸದ್ಯ ಚಂದನಾ ಅವರು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿಯೋಣ ಬನ್ನಿ.
ಕನ್ನಡ ಕಿರುತೆರೆಯಲ್ಲಿ ಎಡವಟ್ಟು ಚುಕ್ಕಿ ಎಂದೇ ಖ್ಯಾತಿ ಪಡೆದಿರುವ ನಟಿ ಚಂದನಾ ಅನಂತಕೃಷ್ಣ ಮಾಯವಾಗಿದ್ದಾರೆ. ತುಮಕೂರಿನ ತುಂಟ ಹುಡುಗಿ ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. ಜಾಲಿ ಬ್ಯಾಚುಲರ್ಸ್ ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಚಂದನಾ ಅನಂತಕೃಷ್ಣ ಅವರು ಮಲ್ಟಿ ಟ್ಯಾಲೆಂಟೆಡ್ ಹುಡುಗಿ. ರಂಗಭೂಮಿ ಕಲಾವಿದೆಯಾಗಿರುವ ಚಂದನಾ ಕಿರುತೆರೆಯಲ್ಲೂ ಮಿಂಚಿದವರು. ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದರು.
ಚಂದನಾ ನಟಿಸಿದ ನಾಟಕಗಳಲ್ಲಿ ಮಹಾಮಾಯಿ ನಾಟಕದ ಮೂಲಕ ಬಹಳ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ ಮುದ್ದುಮಣಿಗಳು ಧಾರಾವಾಹಿಯಲ್ಲಿ ಸೃಷ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಎಲ್ಲರೂ ಚಂದನಾ ಅವರು ಮತ್ತೆ ನಟನೆಗೆ ಬಂದರು ಎಂದು ಭಾವಿಸಿದ್ದರು. ಡ್ಯಾನ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ನಟನೆಗಷ್ಟೇ ಸೀಮಿತವಾಗಿರದ ಚಂದನಾ ನಿರೂಪಣೆಯನ್ನು ಮಾಡಿದ್ದಾರೆ. ಹಾಡು ಕರ್ನಾಟಕ ಎಂಬ ಕಾರ್ಯಕ್ರಮವನ್ನು ಚಂದನಾ ಅವರು ಅದ್ಭುತವಾಗಿ ನಡೆಸಿಕೊಟ್ಟಿದ್ದರು.
ಇದರ ಜೊತೆಗೆ ಸಿಂಗರ್ ಕೂಡ ಆಗಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳೆಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದರು. ಸಕಲಕಲಾವಲ್ಲಭೆಯಾಗಿರುವ ಚಂದನಾ ತಮ್ಮಲ್ಲಿರುವ ಯಾವ ಟ್ಯಾಲೆಂಟ್ ಅನ್ನು ನೆಗ್ಲೆಕ್ಟ್ ಮಾಡುವುದಿಲ್ಲ. ಕಿರುತೆರೆಯಿಂದ ಕೊಂಚ ಮರೆಯಾದರೂ, ಚಂದನಾ ಹೊಸತೇನೋ ಮಾಡುತ್ತಿದ್ದಾರೆ ಎಂದೇ ಅರ್ಥ. ಅವರು ಎದುರಲಿ ಇರುವಾಗ ನೀನು ಎಂಬ ಆಲ್ಬಂಗೆ ಹಾಡು ಹಾಡಿ ನಟಿಸಿದ್ದರು. ಭರತನಾಟ್ಯ ಕಲಿತಿರುವ ಅನಂತಕೃಷ್ಣ ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಡ್ಯಾನ್ಸ್ ನಲ್ಲಿ ಏನಾದರೂ ಸಾಧಿಸಬೇಕು ಎಂದು ಕನಸು ಕಂಡಿದ್ದಾರೆ.
ಹೀಗಾಗಿ ಚಂದನಾ ಅನಂತಕೃಷ್ಣ ಅವರು ನಟನೆಗೆ ಸಂಪೂರ್ಣವಾಗಿ ಬ್ರೇಕ್ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಭರತನಾಟ್ಯದಲ್ಲಿ ಪರ್ಫಾರ್ಮಿಂಗ್ ಆರ್ಟ್ ನಲ್ಲಿ ಸ್ನಾತ್ತಕೋತರ ಪದವಿಯನ್ನು ಪಡೆಯುವ ಹಾದಿಯಲ್ಲಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವ ಸಲುವಾಗಿ ಚಂದನಾ ಅವರು ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಗಾಗ ತಮ್ಮ ನೃತ್ಯದ ರೀಲ್ಸ್ ಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಯಾಣ, ಹೊನ್ನಾವರ, ಗೋಕರ್ಣಗಳಿಗೆ ತೆರಳಿದ್ದು, ಇದರ ಫೋಟೋಗಳನ್ನು ಹಂಚಿಕೊಂಡಿದ್ದರು. ಇನ್ನು ತತ್ಸಮ ತದ್ಭವ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಚಂದನಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇದ್ದು, ಉತ್ತಮ ಪಾತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ಮತ್ತೆ ಬಣ್ಣ ಹಚ್ಚುವ ಆಸೆಯೂ ಇದೆ ಎಂದಿದ್ದಾರೆ.


Click it and Unblock the Notifications











