Chaya Singh: ಮಿಡಲ್ ಕ್ಲಾಸ್ ಹುಡುಗಿಯಾಗಿ ಕನ್ನಡ ಕಿರುತೆರೆಯಲ್ಲಿ ಮತ್ತೆ ಮೋಡಿ ಮಾಡ್ತಾರಾ ಛಾಯಾ ಸಿಂಗ್?
ಸದ್ಯಕ್ಕೆ ತೆಲುಗಿನ 'ಅನು ಅನೆ ನಾನು' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಛಾಯಾ ಸಿಂಗ್ ಅವರು ಇದೀಗ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.
ಹೌದು, ಕನ್ನಡ ಕಿರುತೆರೆಯ ಜನಪ್ರಿಯ ನಟ ರಾಜೇಶ್ ನಟರಂಗ ಅವರು ಮುಖ್ಯ ಭೂಮಿಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಅಮೃತಧಾರೆ' ಎಂಬ ಧಾರಾವಾಹಿಯಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದು ಇದೀಗ ತೆಲುಗು ಹಾಗೂ ಕನ್ನಡ ಧಾರಾವಾಹಿಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದಾರೆ.

ಮಿಡಲ್ ಕ್ಲಾಸ್ ಹುಡುಗಿಯಾಗಿ ಛಾಯಾ ಮೋಡಿ
ಈ ಧಾರಾವಾಹಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ನಟಿ ಛಾಯಾ ಸಿಂಗ್, "ನಾನು ಭೂಮಿಕಾ ಎಂಬ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರವನ್ನು ಮಾಡುತ್ತಿದ್ದೇನೆ. ಎಲ್ಲವನ್ನು ತನ್ನವರಿಗಾಗಿ ತ್ಯಾಗ ಮಾಡುವ ಈ ಹುಡುಗಿ, ಮೃದು ಹಾಗೂ ಸಂದರ್ಭ ಬಂದಾಗ ಗಟ್ಟಿಗಿತ್ತಿಯು ಹೌದು! ಆಕೆಗೆ ತನ್ನ ಕುಟುಂಬವೇ ಪ್ರಪಂಚ" ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ.
ಜೊತೆಗೆ ತಮ್ಮ ಕನ್ನಡದ ಬಗ್ಗೆ ಮಾತನಾಡಿದ ಅವರು ಈ ಮೊದಲು ನಾನು ಕನ್ನಡ ಚಿತ್ರಗಳಿಗೆ ವಾಯ್ಸ್ ಓವರ್ ಕೊಟ್ಟಿದ್ದೆ. ಆದರೆ ಕನ್ನಡವನ್ನು ಅಷ್ಟು ಚೆನ್ನಾಗಿ ಮಾತನಾಡುವುದಕ್ಕೆ ಸದ್ಯಕ್ಕೆ ಬರುವುದಿಲ್ಲ. ಆದರೂ ಸಹ ಕಲಿಯುವುದಕ್ಕೆ ನನಗೆ ತುಂಬಾ ಆಸಕ್ತಿ ಇದೆ. ಹಾಗಾಗಿ ಆದಷ್ಟು ಬೇಗ ಕನ್ನಡವನ್ನು ಕಲಿಯುತ್ತೇನೆ ಎಂಬ ನಂಬಿಕೆಯಲ್ಲಿದ್ದೇನೆ ಎಂದಿದ್ದಾರೆ.
ಏಕಕಾಲಕ್ಕೆ ಪಾಸಿಟಿವ್ ನೆಗೆಟಿವ್ ಪಾತ್ರಗಳಲ್ಲಿ ನಟನೆ
ಸದ್ಯಕ್ಕೆ ಅವರು ನಟಿಸುತ್ತಿರುವ ತೆಲುಗು ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಅನ್ನು ಮಾಡುತ್ತಿದ್ದಾರೆ. ಇದೀಗ ಕನ್ನಡದಲ್ಲಿ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಹಾಗಾಗಿ ಎರಡು ವಿಭಿನ್ನ ಹಾಗೂ ತದ್ವಿರುದ್ಧ ಪಾತ್ರಗಳು. ಅದು ಅಲ್ಲದೆ ಎರಡು ಬೇರೆ ಬೇರೆ ಭಾಷೆಗಳಲ್ಲಿ ನಿಭಾಯಿಸಬೇಕಾಗಿರುವುದರಿಂದ ಆಕೆಗೆ ಇದೀಗ ಜವಾಬ್ದಾರಿ ಹೆಚ್ಚಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ಇನ್ನು ಸ್ಯಾಂಡಲ್‌ವುಡ್ ಕಡೆಗೆ ಬರುವುದಾದರೆ 2017ರಲ್ಲಿ ರಿಲೀಸ್ ಆದ 'ಮಫ್ತಿ' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ದಿನಕರ್ ತೂಗುದೀಪ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ರಾಯಲ್' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿ ಛಾಯಾ ಸಿಂಗ್ ನಟಿಸಿದ್ದರು. 2017ರಲ್ಲಿ ತೆರೆಕಂಡ 'ಮಫ್ತಿ' ಸಿನಿಮಾದ ಸೀಕ್ವೆಲ್ ಆಗಿರುವ 'ಭೈರತಿ ರಣಗಲ್' ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ತಂಗಿಯ ಪಾತ್ರವನ್ನು ಮಾಡಲಿದ್ದಾರಂತೆ.
ಈ ರೀತಿ ಎರಡು ಸ್ಯಾಂಡಲ್‌ವುಡ್ ಸಿನಿಮಾ ಹಾಗೂ ಒಂದು ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ಪಡೆದುಕೊಂಡಿರುವ ನಟಿ ಛಾಯಾ ಸಿಂಗ್ ಅವರ ಅಭಿನಯ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











